Advertisment

ಪತ್ನಿಯಿಂದ ಕಿರುಕುಳ ಆರೋಪ.. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಪತಿ

author-image
AS Harshith
Updated On
ಪತ್ನಿಯಿಂದ ಕಿರುಕುಳ ಆರೋಪ.. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಪತಿ
Advertisment
  • ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಜೋಡಿ
  • ಮಗನ ಸಾವಿಗೆ ಆತನ ಹೆಂಡತಿ ಕಾರಣ ಎಂಬ ಆರೋಪ
  • ಪತ್ನಿಯ ದೂರಿಗೆ ಬೇಸತ್ತು ನೇಣಿಗೆ ಶರಣಾದನೇ ಪತಿ? ಏನಾಯ್ತು?

ಚಿತ್ರದುರ್ಗ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ನಗರದ IUDP ಲೇಔಟ್ ನಿವಾಸಿ ಮಂಜುನಾಥ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

Advertisment

ಮಂಜುನಾಥ್ ಕಳೆದ ಎರಡು ವರ್ಷಗಳ ಹಿಂದೆ ಚೇತನ ಜೊತೆ ವಿವಾಹವಾಗಿದ್ದರು. ಕೌಟುಂಬಿಕ ಕಲಹದ ಹಿನ್ನಲೆ ಮಂಜುನಾಥ್​ಗೆ ಪತ್ನಿ ಚೇತನ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪತ್ನಿ ಚೇತನಾ ವಿರುದ್ದ ಮಂಜುನಾಥ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ರಾತ್ರಿ ಸುರಿದ ಮಳೆಗೆ ಬೆಂಗಳೂರು ಚಿತ್ರಣವೇ ಬದಲು.. ಎಲ್ಲೆಲ್ಲಿ ಏನಾಯ್ತು.. ಟಾಪ್ 15 ಫೋಟೋಗಳು!

ಅತ್ತ ಚೇತನ ಪತಿ ಮುಂಜುನಾಥ್ ವಿರುದ್ದ ಮಹಿಳಾ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಪತ್ನಿ ದೂರು ನೀಡದ ವಿಷಯ ತಿಳಿದು ಮನೆಯಲ್ಲಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಹೋಟೆಲ್​ ಛಾವಣಿ ಮೇಲೆ ಬಿದ್ದ ಹೆಲಿಕಾಪ್ಟರ್​; ಪೈಲಟ್​ ಸಾವು, ನೂರಾರು ಮಂದಿಯ ಸ್ಥಳಾಂತರ

ಮಂಜುನಾಥ್ ಜಿಲ್ಲಾಸ್ಪತ್ರೆ CT ಸ್ಕ್ಯಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೀಗ ಕೌಟುಂಬಿಕ ಕಲಹದ ಹಿನ್ನಲೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment