ಸಚಿವ ಎಂ.ಬಿ ಪಾಟೀಲ್ ಸಹೋದರನಿಗೆ ರಕ್ಷಣೆ ಇಲ್ವಾ? ಜೀವ ಬೆದರಿಕೆಯ ಸಾಕ್ಷ್ಯ ಬಿಡುಗಡೆ

author-image
admin
Updated On
ಸಚಿವ ಎಂ.ಬಿ ಪಾಟೀಲ್ ಸಹೋದರನಿಗೆ ರಕ್ಷಣೆ ಇಲ್ವಾ? ಜೀವ ಬೆದರಿಕೆಯ ಸಾಕ್ಷ್ಯ ಬಿಡುಗಡೆ
Advertisment
  • ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದ ಸುನಿಲ್ ಗೌಡ ಪಾಟೀಲ್
  • ಬಬಲೇಶ್ವರ ಬಿಜೆಪಿ ಪರಾಜಿತ ಅಭ್ಯರ್ಥಿ ಮೇಲೆ ಗಂಭೀರ ಆರೋಪ
  • ವಿಜುಗೌಡ ಪಾಟೀಲ್ ಹಾಗೂ ಅಪರಿಚಿತ ವ್ಯಕ್ತಿಗಳ ಫೋಟೋ ಬಿಡುಗಡೆ

ವಿಜಯಪುರ: ಮಾಜಿ ಗೃಹ ಸಚಿವ, ಹಾಲಿ ಪ್ರಭಾವಿ ಸಚಿವ ಎಂ.ಬಿ ಪಾಟೀಲ್ ಸಹೋದರನಿಗೆ ರಕ್ಷಣೆ ಇಲ್ಲದಾಗಿದೆ. ಜೀವ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ವಿಜಯಪುರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿದೆ. ಈ ಸಂದರ್ಭದಲ್ಲೇ ಜೀವ ಬೆದರಿಕೆಯ ಆರೋಪ, ಪ್ರತ್ಯಾರೋಪ ಕೇಳಿ ಬಂದಿದೆ. ಬಬಲೇಶ್ವರ ಬಿಜೆಪಿ ಪರಾಜಿತ ಅಭ್ಯರ್ಥಿ ವಿಜುಗೌಡ ಪಾಟೀಲ್ ಅವರು ಸಚಿವ ಎಂ.ಬಿ ಪಾಟೀಲ್ ಹಾಗೂ ಸುನಿಲ್ ಗೌಡ ಪಾಟೀಲ್ ಅವರಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದರು.

publive-image

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ರೂ ಹಿಡಿದು ತರುತ್ತೇವೆ: ಸಿಎಂ ಸಿದ್ದರಾಮಯ್ಯ 

ಇವತ್ತು MLC ಸುನೀಲ್ ಗೌಡ ಪಾಟೀಲ್ ಅವರು ಸುದ್ದಿಗೋಷ್ಟಿ ನಡೆಸಿ ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ಅವರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿಜುಗೌಡ ಪಾಟೀಲ್ ಹಾಗೂ ಅಪರಿಚಿತ ವ್ಯಕ್ತಿ (ಸರ್ದಾರ್‌) ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

publive-image

ಕಳೆದ ಏಪ್ರಿಲ್ 28ರಂದು ವಿಜಯಪುರದ ಮಹೇಶ್ವರಿ ಕಲ್ಯಾಣ ಮಂಟಪದ ಬಳಿ ಮದುವೆ ದಿನ ಅಪರಿಚಿತ ವ್ಯಕ್ತಿ (ಸರ್ದಾರ್) ಬೆದರಿಕೆ ಹಾಕಿದ್ದಾರೆ. ನಮ್ಮ ಕಾರಿನ ಬಳಿ ಬಂದು ಅವಾಚ್ಯ ಶಬ್ದಗಳಿಂದ‌ ನಿಂದಿಸಿದ್ದಾರೆ. ಆತ ಯಾರೆಂದು ನನಗೆ ಗೊತ್ತಿಲ್ಲ. ಬಿಜೆಪಿ‌ ಮುಖಂಡ ವಿಜುಗೌಡ ಪಾಟೀಲ್ ಬಂದು ಇಬ್ಬರೂ ಜೀವ ಬೆದರಿಕೆ‌ ಹಾಕಿದ್ದಾರೆ. ಮನೆಯವರೆಗೂ ಬಂದು ಹೊಡೆಯುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

MLC ಸುನೀಲ್ ಗೌಡ ಪಾಟೀಲ್ ಅವರಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಡಿಜಿ ಹೋಂ ಮಿನಿಸ್ಟರ್‌ಗೆ ಭೇಟಿಯಾಗಿ ದೂರು ಸಲ್ಲಿಸಿದ್ದೇನೆ. ಸಿಎಂ ಅವರಿಗೂ ಈ ಕುರಿತು ಪತ್ರ ಬರೆದಿದ್ದೇನೆ ಎಂದಿದ್ದಾರೆ.

publive-image

ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ಜೊತೆ ಇರುವ ಸರ್ದಾರ ಪಂಜಾಬ್‌ನಿಂದ ಬಂದು ವಿಜಯಪುರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇವರು ಶಸ್ತ್ರಾಸ್ತ್ರಗಳೊಂದಿಗೆ ಓಡಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾರು ಗನ್ ಇಟ್ಟುಕೊಳ್ಳುವಂತಿಲ್ಲ. ಈ ಕುರಿತು‌ ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಜೈಲಿನಲ್ಲಿರೋ ಕೆಲ ಕೈದಿಗಳ ಮೂಲಕ ಪಂಜಾಬ್‌ನಿಂದ ಇವರು ವಿಜಯಪುರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಕೈದಿಗಳ ಮೂಲಕ ಪಂಜಾಬ್‌ನಿಂದ ಬಂದವರೊಂದಿಗೆ ವಿಜುಗೌಡ ಪಾಟೀಲ್ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ನಮಗೆ ವಿಜುಗೌಡ ಪಾಟೀಲ್ ಅವರಿಂದ ಜೀವ ಬೆದರಿಕೆ ಇದೆ. ನನಗೆ ನಮ್ಮ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ವಿರುದ್ಧ ಸುನೀಲ್ ಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment