/newsfirstlive-kannada/media/post_attachments/wp-content/uploads/2025/07/Bangalore-University1.jpg)
ಬೆಂಗಳೂರು ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ದಲಿತರಿಗೆ ತಾರತಮ್ಯ ಮಾಡಲಾಗುತ್ತಿದೆ. ಈ ತಾರತಮ್ಯವನ್ನ ಖಂಡಿಸಿ ರಾಜೀನಾಮೆ ನೀಡುವುದಾಗಿ 10 ಪ್ರಾಧ್ಯಾಪಕರು ಕುಲಪತಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?
ಕುಲಪತಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಂತೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ ಸುಮಾರು ವರ್ಷಗಳಿಂದ ದಲಿತ ಶಿಕ್ಷಕರು ಹಲವಾರು ಆಡಳಿತ ಹುದ್ದೆಗಳನ್ನ ನಿರ್ವಹಿಸುತ್ತಾ ಬಂದಿದ್ದಾರೆ. ಆಡಳಿತ ವರ್ಗಕ್ಕೆ ಹೊರೆಯನ್ನು ಕಡಿಮೆಗೊಳಿಸಿ ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ದುಡಿಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/07/Bangalore-University.jpg)
ಆದರೆ, ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಶಾಸನಬದ್ಧ ಹುದ್ದೆಗಳ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯದ ಬಹುಸಂಖ್ಯಾತ ದಲಿತರಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಹಾಗೆಯೇ, ನಮಗೆ ನೀಡಿದ ಎಲ್ಲಾ ಹೆಚ್ಚುವರಿ ಜವಾಬ್ದಾರಿಯನ್ನು ಕೇವಲ ಉಸ್ತುವಾರಿ ಎಂದು ಆದೇಶ ನೀಡಿ, ಈ ಜವಾಬ್ದಾರಿಗಳಿಗೆ ಈ ಹಿಂದೆ ಅನುಸರಿಸಿದಂತೆ ಸಹಜವಾಗಿ ನಮ್ಮ ನಮ್ಮ ಖಾತೆಗಳಿಗೆ ಸಂದಾಯವಾಗಬೇಕಿದ್ದ EL ಅನ್ನು ತಪ್ಪಿಸುವ ವ್ಯವಸ್ಥೆ ನಡೆದಿದೆ.
ನಮ್ಮ ಮನವಿಗಳಿಗೆ ಆಡಳಿತ ವರ್ಗ ಯಾವುದೇ ರೀತಿಯ ಮನ್ನಣೆ ನೀಡುತ್ತಿಲ್ಲ. ನಮ್ಮ ಬೇಡಿಕೆಗೆ ಕೂಡಲೇ ಮನ್ನಣೆ ನೀಡದಿದ್ದಲ್ಲಿ ಈ ಜವಾಬ್ದಾರಿಗಳಿಗೆ ನಾವು ರಾಜೀನಾಮೆ ಸಲ್ಲಿಸಿದ್ದೇವೆಂದು ಭಾವಿಸಬಹುದಾಗಿದೆ.
ರಾಜೀನಾಮೆ ಸಲ್ಲಿಸುವುದಾಗಿ ಪತ್ರ ಬರೆದ 10 ಪ್ರಾಧ್ಯಾಪಕರ ಪಟ್ಟಿ ಇಲ್ಲಿದೆ..
1. ಪ್ರೊ. ಸೋಮಶೇಖರ್ ಸಿ - ನಿರ್ದೇಶಕರು, ಅಂಬೇಡ್ಕರ್ ಸಂಶೋಧನಾ ಕೇಂದ್ರ
2. ಪ್ರೊ. ವಿಜಯಕುಮಾರ್ ಎಚ್ ದೊಡ್ಡಮನಿ -ಬಾಬು ಜಗಜೀವನರಾಂ ಸಂಶೋಧನಾ ಕೇಂದ್ರ
3. ಪ್ರೊ. ನಾಗೇಶ್ ಪಿ ಸಿ -ನಿರ್ದೇಶಕರು, ವಿದ್ಯಾರ್ಥಿಗಳ ಕಲ್ಯಾಣ
4. ಪ್ರೊ. ಕೃಷ್ಣಮೂರ್ತಿ ಜಿ - ವಿಶೇಷ ಅಧಿಕಾರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೋಶ
5. ಪ್ರೊ. ಸುದೇಶ್ ವಿ ಸಂಯೋಜಕರು, PM-USHA
6. ಪ್ರೊ. ಮುರಳೀಧರ ಬಿ ಎಲ್ - ನಿರ್ದೇಶಕರು, ದೂರ ಮತ್ತು ಆನ್‌ಲೈನ್ ಶಿಕ್ಷಣ ಕೇಂದ್ರ
7. ಪ್ರೊ. ಶಶಿಧರ್ ಎಂ - ನಿರ್ದೇಶಕರು, ಮಾಳವೀಯ ಶಿಕ್ಷಕರ ತರಬೇತಿ ಸಂಸ್ಥೆ
8. ಪ್ರೊ. ರಮೇಶ - ನಿರ್ದೇಶಕರು, ಪ್ರಸಾರಾಂಗ
9. ಡಾ.ಸುರೇಶ್ ಆರ್ - ನಿರ್ದೇಶಕರು, ಸಮಾನ ಅವಕಾಶ ಕೋಶ
10. ಡಾ. ಕುಂಬಿನರಸಯ್ಯ ಎಸ್ - ನಿರ್ದೇಶಕರು, ಬೈಲ್ ಸೆಂಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us