/newsfirstlive-kannada/media/post_attachments/wp-content/uploads/2025/05/KPSC-Exam-Bangalore.jpg)
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಕಂಡು ಬರುವ ಲೋಪದೋಷ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.
ಇದನ್ನೂ ಓದಿ: ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ಅಟ್ಯಾಕ್.. ಹೌತಿ ಉಗ್ರರ ವಿರುದ್ಧ ಕೆರಳಿದ ಪ್ರಧಾನಿ
ಇದೀಗ ಕೆಪಿಎಸ್ಸಿ ಮೈನ್ಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಕ್ಸಾಂ ಸೆಂಟರ್ಗೆ ಬರೋ ಮುನ್ನವೇ ಬಂಡಲ್ ಸೀಲ್ ಓಪನ್ ಆಗಿದೆ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಮತ್ತು ಅಭ್ಯರ್ಥಿಗಳ ನಡುವೆ ಜಟಾಪಟಿ ನಡೆದಿದೆ.
ಕಸ್ತೂರಿ ನಗರದ ಪರೀಕ್ಷಾ ಕೇಂದ್ರದಲ್ಲಿ ಘಟನೆ ಕೆಪಿಎಸ್ಸಿ ಪರೀಕ್ಷಾ ವೈಖರಿ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮೇ 3ನೇ ತಾರೀಖಿನಿಂದ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳು ಆರಂಭಗೊಂಡಿವೆ. ಆದ್ರೆ ಇದರ ಮಧ್ಯೆ ಕೆಪಿಎಸ್ಸಿ ಮೈನ್ಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ