ಅಲ್​ಖೈದಾಗೆ ಸಪೋರ್ಟ್, ಸಂಪರ್ಕ ಹೊಂದಿರೋ ಆರೋಪ.. ಬೆಂಗಳೂರಲ್ಲಿ ದಿಗಿಲು ಹುಟ್ಟಿಸಿದ ಓರ್ವ ಮಹಿಳೆ..

author-image
Veena Gangani
Updated On
ಅಲ್​ಖೈದಾಗೆ ಸಪೋರ್ಟ್, ಸಂಪರ್ಕ ಹೊಂದಿರೋ ಆರೋಪ.. ಬೆಂಗಳೂರಲ್ಲಿ ದಿಗಿಲು ಹುಟ್ಟಿಸಿದ ಓರ್ವ ಮಹಿಳೆ..
Advertisment
  • ಜಾರ್ಖಂಡ್​ ಮೂಲದ ಈಕೆಯ ಕೃತ್ಯವೇ ಭಯಾನಕ
  • ಧರ್ಮಕ್ಕಾಗಿ ಹೋರಾಟ ಮಾಡಬೇಕು ಅಂತ ಜಿಹಾದಿ ಕೃತ್ಯ
  • ಶಮಾ ಪರ್ವಿನ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ

ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಸದಾ ಜನಜಂಗುಳಿಯಿಂದ ಕೂಡಿರೋ ಕಲಾಸಿಪಾಳ್ಯದಲ್ಲಿ ಸ್ಫೋಟಕವಾಗಿ ಬಳಸೋ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ವು. ಮೂವರು ಅರೆಸ್ಟ್​​ ಕೂಡ ಆದ್ರು. ಈ ಭಯಾನಕ ಘಟನೆ ಮಾಸುವ ಮುನ್ನವೇ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬಾರಿ ಸ್ಫೋಟ ಪತ್ತೆಯಾಗಿಲ್ಲ, ಅಲ್​ಖೈದಾ, ಜಮಾತ್ ಇಸ್ಲಾಂ ನಂತಹ ಉಗ್ರ ಸಂಘಟನೆಗೆ ಸಪೋರ್ಟ್ ಮಾಡ್ತಿದ್ದ ಆರೋಪದ ಮೇಲೆ ಮಹಿಳೆ ಸಿಲಿಕಾನ್​ ಸಿಟಿಯಲ್ಲಿ ಅರೆಸ್ಟ್​ ಆಗಿದ್ದಾಳೆ.

ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!

ಸಾಮಾಜಿಕ ಜಾಲತಾಣಗಳಲ್ಲಿ ಅಲ್​ಖೈದಾ ಉಗ್ರ ಸೇರಿ ಜಿಹಾದಿ ಭೋದಿಸುವ ಮೂಲವತಾವಾದಿ ಸಂಘಟನೆಗಳ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ಅರೆಸ್ಟ್ ಆದ​​ ಶಮಾ ಪರ್ವಿನ್​. ಜಾರ್ಖಂಡ್​ ಮೂಲದ 30 ವರ್ಷದ ಈಕೆಯನ್ನ ಗುಜರಾತ್​ ರಾಜ್ಯದ ಉಗ್ರ ನಿಗ್ರಹ ಪಡೆ ಬಂಧಿಸಿ ಕರೆದೊಯ್ದಿದೆ.

ಆರೋಪಗಳು ಏನೇನು..?

ಹೆಬ್ಬಾಳ ಠಾಣಾ ವ್ಯಾಪ್ತಿಯ ಮನೋರಾಯನ ಪಾಳ್ಯದಲ್ಲಿ ತಾಯಿ, ಸಹೋದರನ ಜೊತೆ ಬಂಧಿತೆ ಶಮಾ ಪರ್ವಿನ್ ವಾಸವಾಗಿದ್ದಳು. ಬೆಂಗಳೂರಿನಲ್ಲಿ ಕುಳಿತುಕೊಂಡೇ ಪಾಕಿಸ್ತಾನದ ಇರ್ಸಾರ್ ಅಹಮ್ಮದ್​ನ ಪ್ರಚೋದನಾಕಾರಿ ಭಾಷಣಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾಯಿದ್ಲು. ಜಿಹಾದಿ ಕುರಿತು ಕೂಡ ವಿಡಿಯೋ ಶೇರ್ ಮಾಡ್ತಿದ್ದಳು ಪರ್ವಿನ್. ಮೂರು ವರ್ಷಗಳಿಂದ ಜಿಹಾದಿ ಬಗ್ಗೆ ಅಡಿಕ್ಟ್ ಆಗಿದ್ದ ಶಮಾ ಪರ್ವಿನ್. ಮನೆಯಲ್ಲಿ ರೂಂನಲ್ಲೇ ಕುಳಿತ ಜಿಹಾದಿ ಬಗ್ಗೆ ಶಮಾ ಪರ್ವಿನ್ ಪ್ರಚಾರ. ಇಂಡಿಯಾ ಸೇಫ್ ಇಲ್ಲ, ನಾವು ಜಿಹಾದಿ ಹೋರಾಟ ಮಾಡಬೇಕು. ನಾವು ಧರ್ಮಕ್ಕಾಗಿ ಒಟ್ಟಾಗಿ ಹೋರಾಟ ಮಾಡಬೇಕು ಅಂತ ಪರ್ವಿನ್​ ಭಾಷಣ ಮಾಡ್ತಾಯಿದ್ಲು ಎಂಬ ಆರೋಪ ಇದೆ.

ಪರ್ವಿನ್ ಲಾಕ್ ಆಗಿದ್ಹೇಗೆ?

ಕೆಲ ದಿನಗಳ ಹಿಂದೆ ಅಲ್​ಖೈದಾ ಗ್ಯಾಂಗ್​ನ​ ನಾಲ್ವರನ್ನ ಗುಜರಾತ್​ ATS ಅಧಿಕಾರಿಗಳು ಬಂಧಿಸಿದ್ರು. ಈ ಆರೋಪಿಗಳ ವಿಚಾರಣೆಯಲ್ಲಿ ಶಮಾ ಬಗ್ಗೆ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ. ಅಂತೆಯೇ ಮನೋರಾಯನಪಾಳ್ಯದಲ್ಲಿದ್ದ ಶಮಾ ಪರ್ವಿನ್ ಬಗ್ಗೆ ಮಾಹಿತಿ ಪಡೆದು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ನಗರದ 8ನೇ ACMM ಕೋರ್ಟ್​ನಿಂದ ಅನುಮತಿ ಪಡೆದು ಗುಜರಾತ್​ಗೆ ಕರೆದೊಯ್ದಿದ್ದಾರೆ. ಟ್ರ್ಯಾನ್ಸಿಟ್ ವಾರೆಂಟ್ ಪಡೆದು ಎಟಿಎಸ್ ಅಧಿಕಾರಿಗಳು ಕರೆದೊಯ್ದಿದ್ದಾರೆ. ಗುಜರಾತ್ ಸ್ಥಳೀಯ ನ್ಯಾಯಾಲಯಕ್ಕೆ ಪರ್ವಿನ್​ಳನ್ನ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.

ಇತ್ತ ಸದಾ ರೂಮಿನಲ್ಲೇ ಇರ್ತಿದ್ದ ಈಕೆಯ ಇಂತದ್ದೊಂದು ಕೃತ್ಯದಿಂದ ತಾಯಿ ಹಾಗೂ ಸಹೋದರ ಕೂಡ ದಂಗಾಗಿದ್ದಾರೆ.  ಅಂತರ್ಜಾಲದ ಮೂಲಕ ಅಲ್​ಖೈದಾ ಸಂಪರ್ಕಕ್ಕೆ ಶಮಾ ಪರ್ವಿನ್​ ಬಂದಿರೋ ವಿಚಾರ ಬಹಿರಂಗವಾಗಿದ್ದು, ಆಕೆಯ ಲ್ಯಾಪ್​ ಟಾಪ್​ ವಶಕ್ಕೆ ಪಡೆದು ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment