ಉಪಮುಖ್ಯಮಂತ್ರಿಗೆ ಒಲಿದ ಅದೃಷ್ಟದ ಮನೆ
ಐವರು ಸಚಿವರಿಗೆ ನಿವಾಸಗಳನ್ನು ಹಂಚಿಕೆ
ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಲಿರುವ D.K ಶಿವಕುಮಾರ್
ಬೆಂಗಳೂರು: ನೂತನ ಸಚಿವರಿಗೆ ಸರ್ಕಾರದಿಂದ ನಿವಾಸ ಹಂಚಿಕೆ ಮಾಡಲಾಗಿದೆ. ಸದ್ಯ ಐವರು ಸಚಿವರಿಗೆ ನಿವಾಸಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಉಪಮುಖ್ಯಮಂತ್ರಿಗೆ ಅದೃಷ್ಟದ ಮನೆ ಸಿಕ್ಕಿದೆ. ಸದ್ಯ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಕುಮಾರಕೃಪಾದಲ್ಲಿರುವ ಲಕ್ಕಿ ನಿವಾಸವನ್ನು ಪಡೆದುಕೊಳ್ಳುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿವಾಸವನ್ನು ಖಾಲಿ ಮಾಡಿದ ಬಳಿಕ ಡಿಕೆ ಶಿವಕುಮಾರ್, ತಮ್ಮ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ.
ಜ್ಯೋತಿಷಿಗಳ ಸಲಹೆ ಮೇರೆಗೆ ಕುಮಾರಕೃಪಾದಲ್ಲಿರುವ ಸರ್ಕಾರಿ ನಿವಾಸವನ್ನು ಡಿ.ಕೆ.ಶಿವಕುಮಾರ್ ಪಡೆದುಕೊಂಡಿದ್ದಾರೆ. ಸದ್ಯ ಸಿದ್ದರಾಮಯ್ಯ ವಾಸವಾಗಿರುವ ನಿವಾಸವನ್ನು ಅದೃಷ್ಟದ ಮನೆ ಎಂದು ಕರೆಯಲಾಗುತ್ತದೆ. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಇದೇ ನಿವಾಸದಲ್ಲಿದ್ದರು. 5 ವರ್ಷ ಆಡಳಿತ ಯಶಸ್ವಿಯಾಗಿ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿದ್ದ ಮನೆಯನ್ನು ಎಂ.ಬಿ ಪಾಟೀಲ್‌ಗೆ ನಿಗದಿ ಮಾಡಲಾಗಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯಿದ್ದ ವಸತಿ ಗೃಹವನ್ನು ಪ್ರಿಯಾಂಕ್ ಖರ್ಗೆಗೆ ಹಂಚಿಕೆ ಮಾಡಲಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ನಲ್ಲಿಯೇ ಕೆ.ಜೆ ಜಾರ್ಜ್ಗೆ ನೀಡಲಾಗಿದೆ. ಸದಾಶಿವನಗರದ ಸರ್ಕಾರಿ ನಿವಾಸವನ್ನು ಡಾ.ಜಿ ಪರಮೇಶ್ವರ್ಗೆ ಹಂಚಿಕೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ