ಪುಷ್ಪಾ-2 ನೋಡಲು ಹೋಗಿ ಮೂವರು ದುರಂತ ಅಂತ್ಯ; 25 ಲಕ್ಷ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್​​

author-image
Veena Gangani
Updated On
ಪುಷ್ಪಾ-2 ನೋಡಲು ಹೋಗಿ ಮೂವರು ದುರಂತ ಅಂತ್ಯ; 25 ಲಕ್ಷ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್​​
Advertisment
  • ಪುಷ್ಪ 2 ಚಿತ್ರ ಪ್ರದರ್ಶನದ ವೇಳೆ ನಡೆದ ದುರಂತದ ಬಗ್ಗೆ ಮೌನ ಮುರಿದ ಸ್ಟಾರ್ ನಟ
  • ಕಾಲ್ತುಳಿತಕ್ಕೆ ಒಳಗಾದವರ ಚಿಕಿತ್ಸೆ ಬರವನ್ನು ಹೊರಲಿದ್ದಾರೆ ನಟ ಅಲ್ಲು ಅರ್ಜುನ್
  • ಪುಷ್ಪಾ-2 ಸಿನಿಮಾ ನೋಡಲು ಬಂದು ಅನ್ಯಾಯವಾಗಿ ಅಸುನೀಗಿದ ರೇವತಿ

ಪುಷ್ಪಾ 2 ಸಿನಿಮಾ ನೋಡಲು ಹೋದವರು ಒಟ್ಟು 3 ಜನ ಮೃತಪಟ್ಟ ಸುದ್ದಿ ಕಳೆದ ಒಂದು ದಿನದಿಂದ ಭಾರೀ ಸುದ್ದಿಯಾಗುತ್ತಿದೆ. ಈ ಮೂವರಲ್ಲಿ ಹೈದ್ರಾಬಾದ್ ಸಂಧ್ಯಾ ಥಿಯೇಟರ್​ನಲ್ಲಿ ಅಭಿಮಾನಿಗಳ ಕಾಲ್ತುಳಿತಕ್ಕೆ ಸಿಕ್ಕು ಅಸುನೀಗಿದ  32 ವರ್ಷದ ಯುವತಿ ರೇವತಿ ಕೂಡ ಒಬ್ಬರು.

ಶ್ರೀತೇಜ ಹಾಗೂ ಆತನ ತಂಗಿ ಸಾನ್ವಿಯನ್ನು ಕರೆದುಕೊಂಡು ಇಬ್ಬರು ಡಿಸೆಂಬರ್ 5ರಂದು ಪುಷ್ಪಾ 2 ಸಿನಿಮಾ ನೋಡಲು ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ಗೆ ಹೋಗಿದ್ದರು. ರೇವತಿ ಶ್ರೀಜಿತ್ ಜೊತೆ ಇದ್ದರು. ಇದೇ ವೇಳೆ ಪ್ರಿಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಅಲ್ಲಿಗೆ ಬಂದಾಗ ಕೂಡಲೇ ನೂಕು ನುಗ್ಗಲು ಉಂಟಾಗುತ್ತದೆ. ಈ ನೂಕು ನುಗ್ಗಲಲ್ಲಿ ಶ್ರೀತೇಜ ಹಾಗೂ ರೇವತಿ ಇಬ್ಬರು ನೆಲಕ್ಕೆ ಬಿದ್ದು ಅಭಿಮಾನಿಗಳ ಸಾವಿರಾರು ಕಾಲುಗಳನ್ನು ಅವರನ್ನು ತುಳಿದುಕೊಂಡೇ ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದರು.

ಇದನ್ನೂ ಓದಿ: ಪುಷ್ಪಾ-2 ನೋಡಲು ಹೋಗಿ ದುರಂತ ಅಂತ್ಯ ಕಂಡ ರೇವತಿ.. ಪತ್ನಿ ತ್ಯಾಗದ ಕಥೆಯನ್ನು ಹೇಳಿ ಕಣ್ಣೀರಿಟ್ಟ ಪತಿ

publive-image

ಹೌದು, ಡಿಸೆಂಬರ್ 4ರಂದು ಪುಷ್ಪ 2 ಫಸ್ಟ್​ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ದುರಂತದ ಬಗ್ಗೆ ಅಲ್ಲು ಅರ್ಜುನ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡ ನಟ, ನೀವು ಅನುಭವಿಸುತ್ತಿರುವ ನಷ್ಟವನ್ನು ಯಾವುದೇ ಪದಗಳು ಅಥವಾ ಕಾರ್ಯಗಳು ಎಂದಿಗೂ ಸರಿದೂಗಿಸಲು ಸಾಧ್ಯವಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.

ಆರ್‌ಟಿಸಿ ಕ್ರಾಸ್‌ರೋಡ್ಸ್‌ನಲ್ಲಿ ನಾವು ಪುಷ್ಪಾ ಅವರ ಪ್ರಥಮ ಪ್ರದರ್ಶನವನ್ನು ವೀಕ್ಷಿಸಲು ಹೋದಾಗ, ಮರುದಿನ ಇಂತಹ ದುರಂತ ಸುದ್ದಿ ಕೇಳಲು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಕುಟುಂಬವು ಗಾಯಗೊಂಡಿದೆ ಮತ್ತು ರೇವತಿ ಎಂಬ ಮಹಿಳೆ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಕೇಳಲು ಇದು ತುಂಬಾ ದುಃಖಕರವಾಗಿದೆ. ಥಿಯೇಟರ್‌ಗಳಲ್ಲಿ ಚಲನಚಿತ್ರಗಳನ್ನು ನೋಡುವುದು ಒಂದು ಪಾಲಿಸಬೇಕಾದ ಆಚರಣೆಯಾಗಿದೆ, ಆದರೆ ಈ ಘಟನೆಯು ನಮ್ಮೆಲ್ಲರ ಹೃದಯವನ್ನು ಮುರಿಯುವಂತೆ ಮಾಡಿದೆ.


">December 6, 2024

ನಾವು ಭಾವನಾತ್ಮಕವಾಗಿ ನಿಮ್ಮೊಂದಿಗೆ ನಿಂತಿದ್ದೇವೆ ಮತ್ತು ಎಲ್ಲವನ್ನೂ ಮಾಡುತ್ತೇವೆ. ಈ ಕಷ್ಟದ ಸಮಯದಲ್ಲಿ ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಾನು ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲು ಬಯಸುತ್ತೇನೆ. ಹೆಚ್ಚುವರಿಯಾಗಿ, ಗಾಯಗೊಂಡ ಸದಸ್ಯರಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ನಾವು ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ತನ್ನ ಪತಿಗಾಗಿ ಲಿವರ್​ ದಾನ ಮಾಡಿದ ಮೃತ ರೇವತಿ..

ರೇವತಿ 2023ರಲ್ಲಿ ತನ್ನ ಪತಿಗೆ ಲೀವರ್ ಸಮಸ್ಯೆಯಾದಾಗ ತಮ್ಮ ಲೀವರ್ ದಾನ ನೀಡಿ ಯಮನನ್ನು ಸೋಲಿಸಿದ್ದರು. ಆದ್ರೆ ಈಗ ತಮ್ಮನ್ನು ಹಾಗೂ ತಮ್ಮ ಮಗನನ್ನು ಉಳಿಸಿಕೊಳ್ಳುವ ಯುದ್ಧದಲ್ಲಿ ಮಗನನ್ನು ಉಳಿಸುವಲ್ಲಿ ಗೆದ್ದ ರೇವತಿ ತಮ್ಮನ್ನು ಉಳಿಸಿಕೊಳ್ಳುವಲ್ಲಿ ಯಮನೊಂದಿಗೆ ಸೋತಿದ್ದಾರೆ. ಈ ಮಾತನ್ನು ಖುದ್ದು ರೇವತಿ ಪತಿಯೇ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment