Advertisment

ಗೋವಾ ಲೋಕಲ್ ಬಾರ್​ನಲ್ಲಿ ಅಲ್ಲು ಅರ್ಜುನ್​, ವೈರಲ್ ವಿಡಿಯೋ ಬಗ್ಗೆ ‘ಪುಷ್ಪರಾಜ್‘​ ಹೇಳಿದ್ದೇನು?

author-image
Gopal Kulkarni
Updated On
ಗೋವಾ ಲೋಕಲ್ ಬಾರ್​ನಲ್ಲಿ ಅಲ್ಲು ಅರ್ಜುನ್​, ವೈರಲ್ ವಿಡಿಯೋ ಬಗ್ಗೆ ‘ಪುಷ್ಪರಾಜ್‘​ ಹೇಳಿದ್ದೇನು?
Advertisment
  • ಗೋವಾದಲ್ಲಿ ಲೋಕಲ್ ಬಾರ್​ನಲ್ಲಿ ಮದ್ಯ ಖರೀದಿಸಿದ್ರಾ ಅಲ್ಲು ಅರ್ಜುನ್?
  • ಸಂದರ್ಶನದಲ್ಲಿ ನಡೆದ ಆ ಘಟನೆಯ ಬಗ್ಗೆ ನಟ ಅಲ್ಲು ಹಂಚಿಕೊಂಡಿದ್ದೇನು ?
  • ನ್ಯಾಷನಲ್ ಅವಾರ್ಡ್ ವಿಷಯವಾಗಿ ಹೇಳಿದ್ದೇನು ತೆಲಗು ಪುಷ್ಪರಾಜ್​?

ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಈಗ ಪುಷ್ಪಾ-2 ಸಿನಿಮಾ ಬಿಡುಗಡೆಗೆ ಕ್ಷಣಗಣನೆ ನಡೆದಿದೆ. ಇದೇ ವಿಚಾರವಾಗಿ ಚಿತ್ರತಂಡ ಪ್ರಚಾರದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ. ಇದೇ ಕಾರಣಕ್ಕಾಗಿ ಇತ್ತೀಚೆಗೆ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ಒಂದು ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು ಪುಷ್ಪಾ-2ನ ಹೀರೋ ಅಲ್ಲು ಅರ್ಜುನ್. ಈ ವೇಳೆ ಏಳು ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡರು. ಅಂದು ವೈರಲ್ ಆದ ವಿಡಿಯೋದಲ್ಲಿ ಇದ್ದಿದ್ದು ನಾನೇ ಎಂದು ಕೂಡ ಹೇಳಿದ್ದಾರೆ.

Advertisment

ಏನಿದು ಗೋವಾ ಘಟನೆ?
2017ರಲ್ಲಿ ಒಂದು ವಿಡಿಯೋ ದೊಡ್ಡ ಸಂಚಲನ ಸೃಷ್ಟಿಸಿತ್ತು.ಗೋವಾದ ಲೋಕಲ್ ಬಾರ್​ವೊಂದರಲ್ಲಿ ಅಲ್ಲು ಅರ್ಜುನ್ ಮದ್ಯ ಖರೀದಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರ ಬಗ್ಗೆ ಅಲ್ಲು ಅರ್ಜುನ್ ಎಲ್ಲಿಯೂ ಸೊಲ್ಲೆತ್ತಿದ್ದಿಲ್ಲ. ಆದ್ರೆ ನಂದಮೂರಿ ಬಾಲಕೃಷ್ಣ ಅವರೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್ ಈ ಬಗ್ಗೆ ಮೌನ ಮುರಿದಿದ್ದಾರೆ. ಹೌದು, ಆ ವಿಡಿಯೋದಲ್ಲಿ ಅಂದು ಕಾಣಿಸಿಕೊಂಡಿದ್ದು ನಾನೇ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ್ದ ರಾಯಚೂರು ಯುವಕ ಅರೆಸ್ಟ್​

ಅಲ್ಲು ಅರ್ಜುನ್ ಅವರು ಹೇಳಿರುವ ಪ್ರಕಾರ ಅಂದು ಮದ್ಯ ಖರೀದಿಗೆ ಲೋಕಲ್ ಬಾರ್​ವೊಂದಕ್ಕೆ ನಾನು ಭೇಟಿ ನೀಡಿದ್ದು ನಿಜ, ಆದ್ರೆ ಅದರು ನನ್ನ ಸಲುವಾಗಿ ಅಲ್ಲ, ನನ್ನ ಸ್ನೇಹಿತನಿಗಾಗಿ ಮದ್ಯ ತರಲು ಹೋಗಿದ್ದೆ. ಆದ್ರೆ ಜನರಿಗೆ ಮಾದರಿಯಾಗಿ ನಡೆದುಕೊಳ್ಳಬೇಕಿದ್ದ ನಾನು ಈ ರೀತಿ ನಡೆದುಕೊಂಡಿದ್ದು ನಿಜಕ್ಕೂ ನನ್ನ ಬೇಜವಾಬ್ದಾರಿತನ ಎಂದು ನನಗೆ ಅರ್ಥವಾಯ್ತು. ಇದರ ಬಗ್ಗೆ ನನಗೆ ನೋವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸುಪ್ರೀಂ ಕಟಕಟೆಗೆ ಹೋಗುತ್ತಾ ದರ್ಶನ್ ಕೇಸ್..? ಬೆಂಗಳೂರು ಪೊಲೀಸರಿಂದ ಮಹತ್ವದ ಪ್ಲಾನ್

Advertisment

ಇನ್ನು ಇದೇ ವೇಳೆ ಅವರು ತಮಗೆ ಒಲಿದು ಬಂದ ನ್ಯಾಷನಲ್ ಅವಾರ್ಡ್ ಬಗ್ಗೆಯೂ ಕೂಡ ಹೇಳಿದ್ದಾರೆ. ನಾನು, ಈ ಹಿಂದೆ ಯಾವ ತೆಲಗು ನಟರಿಗೆ ನ್ಯಾಷನಲ್ ಅವಾರ್ಡ್ ಬಂದಿದೆ ಎಂದು ಈ ಹಿಂದೆ ಚೆಕ್​ ಮಾಡಿದ್ದೆ. ಆದರೆ ಯಾರಿಗೂ ಬಂದಿರಲಿಲ್ಲ. ಅದನ್ನು ನಾನು ಸಾಧಿಸಿಯೇ ತೀರಬೇಕು ಎಂಬ ಹಠವೊಂದು ನನ್ನಲ್ಲಿ ಹುಟ್ಟಿತ್ತು. ಈಗ ಅದನ್ನು ಸಾಧಿಸಿದ್ದಕ್ಕೆ ಸಂತೋಷವಿದೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment