ಸುಕುಮಾರ್​​, ಅಲ್ಲು ಅರ್ಜುನ್​​ ಮಧ್ಯೆ ಬಿರುಕು.. ಅರ್ಧಕ್ಕೆ ನಿಂತು ಹೋಯ್ತಾ ಪುಷ್ಪಾ-2 ಸಿನಿಮಾ?

author-image
Bheemappa
Updated On
ರಾಷ್ಟ್ರ ಪ್ರಶಸ್ತಿ ಬಂದ ಕೂಡಲೇ ಹೆಚ್ಚಾಯ್ತು ಹೈಪ್​​.. 1,000 ಕೋಟಿ ಮೇಲೆ ಕಣ್ಣಿಟ್ಟ ಪುಷ್ಪರಾಜ್!
Advertisment
  • ಟ್ರಿಪ್​ ಮೇಲೆ ಟ್ರಿಪ್ ಹೋಗುತ್ತಿರುವ ಅಲ್ಲು ಅರ್ಜುನ್, ಸುಕುಮಾರ್
  • ಭಾರೀ ಬಜೆಟ್​ನಲ್ಲಿ ನಿರ್ಮಾಣ ಮಾಡಿರುವಂತಹ ಪುಷ್ಪ-2 ಸಿನಿಮಾ
  • ಸಿನಿಮಾ ಬಿಡುಗಡೆ ವಿಳಂಬವಾಗುತ್ತಿರುವುದು ಏಕೆ? ಕಾರಣ ಇಲ್ಲಿದೆ!

ಪುಷ್ಪ- 2 ದಿ ರೂಲ್ ಸಿನಿಮಾ ರಿಲೀಸ್​ಗೂ ಮೊದಲೇ ಸಖತ್ ಸೌಂಡ್ ಮಾಡುತ್ತಿದೆ. ಸ್ಟೈಲೀಸ್​ ಸ್ಟಾರ್ ಅಲ್ಲು ಅರ್ಜುನ್ ಅವರು​ ಮಹಾಕಾಳಿ ಅವತಾರದಲ್ಲಿ ರಗಡ್​ ಲುಕ್​ನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು ಅದೇ ಮ್ಯಾನರಿಸಮ್ ಅನ್ನು ಮುಂದುವರೆಸಿದ್ದಾರೆ. ಸದ್ಯ ಇದೀಗ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್ ಹಾಗೂ ಡೈರೆಕ್ಟರ್​ ಸುಕುಮಾರ್​ ಕುರಿತು ಹೊಸ ಅಪ್​ಡೇಟ್​ ಸಿಕ್ಕಿದೆ. ಇವರಿಬ್ಬರ ನಡುವೆ ತಿಕ್ಕಾಟ ನಡೆಯುತ್ತಿದೆಯಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್​ ಮಾಸ್ಟರ್ ಲೈಂಗಿಕ ದೌರ್ಜನ್ಯ.. ಕೀಚಕನಿಗೆ ಹಿಗ್ಗಾಮುಗ್ಗಾ ಥಳಿತ

ಸುಕುಮಾರ್ ನಿರ್ದೇಶನದ ಪುಷ್ಪ- 2 ಮೂವಿಯಿಂದ ಅಲ್ಲು ಅರ್ಜುನ್ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಪರಿಚಿತರಾಗಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡಲು ಒಟ್ಟು 1,000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲು ಅರ್ಜುನ್​ ಈ ಸಿನಿಮಾಕ್ಕಾಗಿ 330 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೂ ಈ ಸಿನಿಮಾದ ಭಾಗ-2 ರಿಲೀಸ್ ಮಾಡಲು ಯಾಕೆ ತಡವಾಗುತ್ತಿದೆ ಎಂಬುದಕ್ಕೆ ಇದೀಗ ಕೆಲ ಕಾರಣಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಮಾಮೂಲಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ


">July 17, 2024

ಪುಷ್ಪ2 ಸಿನಿಮಾ ಸೆಟ್​ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಪುಷ್ಪ ಸಿನಿಮಾ ಶೂಟಿಂಗ್ ಮಾಡುವಾಗ 3 ಯೂನಿಟ್​ನಲ್ಲಿ ಮಾಡುವಂತೆ ನಟ ಅಲ್ಲುರ್ಜುನ್, ಡೈರೆಕ್ಟರ್​ ಸುಕುಮಾರ್ ಬಳಿ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಯನ್ನು ಸುಕುಮಾರ್ ನಿರಾಕರಣೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಅಲ್ಲು ಅರ್ಜುನ್ ಶೂಟಿಂಗ್​ಗೆ ಬಾರದೇ ಗಡ್ಡವನ್ನು ಸೇವ್ ಮಾಡಿ ಹಾಲಿಡೇ ಟ್ರಿಪ್​ಗೆ ಹೋಗಿ ವಾಪಸ್ ಆಗಿದ್ದರು. ಟ್ರಿಪ್ ಮುಗಿಸಿ ನಟ ಬರುತ್ತಿದ್ದಂತೆ ಇತ್ತ ಸುಕುಮಾರ್ ಅವರು ಪ್ರವಾಸಕ್ಕೆ ಹೋಗಿದ್ದಾರೆ. ಸಿನಿಮಾ ಮಾಡಲು ನಿರ್ದೇಶಕ ಇಲ್ಲದ್ದಕ್ಕೆ ಅಲ್ಲು ಅರ್ಜುನ್ ಮತ್ತೆ ಪ್ರವಾಸಕ್ಕೆ ಹೋಗಿದ್ದಾರೆ. ಇದರಿಂದಾಗಿ ಪುಷ್ಪ2 ಸಿನಿಮಾದ ಬಿಡುಗಡೆ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.


">July 16, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment