/newsfirstlive-kannada/media/post_attachments/wp-content/uploads/2024/12/pushpa15.jpg)
ಪುಷ್ಪ-2 ಸಿನಿಮಾದ ಕ್ರೇಜ್ ಮುಗಿಲು ಮುಟ್ಟಿದೆ. ಬಿಡುಗಡೆಗೆ ಮುನ್ನವೇ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದೆ. ಟಿಕೆಟ್ ಬುಕಿಂಗ್ನಲ್ಲಿ ಬಾಹುಬಲಿ, ಕಲ್ಕಿ, ಕೆಜಿಎಫ್ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದೆ. ಪುಷ್ಪಾ-2ನಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ರಿಲೀಸ್ ಬೆನ್ನಲ್ಲೇ ಅಭಿಮಾನಿಗಳು ಧೂಳೆಬ್ಬಿಸಿದ್ದಾರೆ.
ಪುಷ್ಪ-2 ಸಿನಿಮಾದ ಪೀಲಿಂಗ್ಸ್ ಹಾಡಿಗೆ ನಟಿ ರಶ್ಮಿಕಾ ಮಂದಣ್ಣ ಹಾಕಿರುವ ಸ್ಟೆಪ್ಸ್ ನ್ಯಾಷನಲ್ ಕ್ರಶ್ ಮೈಚಳಿ ಬಿಟ್ಟು ಮಾಡಿರೋ ಡ್ಯಾನ್ಸ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡಿದೆ. ಈ ಸಾಂಗ್ ಹೊಸ ಇತಿಹಾಸ ಸೃಷ್ಟಿಸುವಂತೆ ಮಾಡಿದೆ.
ರಿಲೀಸ್ಗೂ ಮುನ್ನವೇ ಪುಷ್ಪಾ-2 ಸಿಕ್ಕಾಪಟ್ಟೆ ಹವಾ!
ರಶ್ಮಿಕಾ ಡ್ಯಾನ್ಸ್ ಕಿಕ್.. ಬುಕ್ಕಿಂಗ್‌ನಲ್ಲೇ ಹೊಸ ದಾಖಲೆ
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ಬಿಡುಗಡೆಗೆ ಇನ್ನೆರಡೇ ದಿನ ಬಾಕಿ ಇದ್ದು, ಬಿಡುಗಡೆಗೂ ಮುನ್ನವೇ ಧೂಳೆಬ್ಬಿಸಿದೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದ್ದು ದೇಶ-ವಿದೇಶಗಳಲ್ಲಿ ಬುಕ್ಕಿಂಗ್ ದಾಖಲೆ ನಿರ್ಮಿಸಿದೆ. ರಶ್ಮಿಕಾ ಮಂದಣ್ಣ ಡ್ಯಾನ್ಸ್ ಇರುವ ಪೀಲಿಂಗ್ ಹಾಡು ರಿಲೀಸ್ ಆದ್ಮೇಲಂತೂ ಅಭಿಮಾನಿಗಳ ಕ್ರೇಜ್ ಡಬಲ್ ಆಗಿದೆ. ಮುಂಗಡ ಬುಕಿಂಗ್ನತಲ್ಲಿ ಹೊಸ ದಾಖಲೆ ಬರೆದಿದೆ. ಬುಕ್ಮೈ ಶೋನಲ್ಲಿ ಕೆಜಿಎಫ್ 2 ಹಾಗೂ ಪಠಾಣ್ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡಿದೆ.
ಪುಷ್ಪಾ-2 ಅಡ್ವಾನ್ಸ್ ರೆಕಾರ್ಡ್!
ಪುಷ್ಪಾ-1 ಮುಂಗಡ ಬುಕ್ಕಿಂಗ್ನಲ್ಲಿ 42.50 ಕೋಟಿ ಗಳಿಕೆ
ಭಾರತದಲ್ಲಿ ಪುಷ್ಪಾ-2 25.57 ಕೋಟಿ ಗಳಿಕೆ ಮಾಡಿದೆ
ಭಾರತ, ಅಮೆರಿಕ ಸೇರಿ 42.50 ಕೋಟಿ ರೂ. ಸಂಗ್ರಹ
ಅಮೆರಿಕದಲ್ಲಿ 65 ಸಾವಿರ ಅಡ್ವಾನ್ಸ್ ಟಿಕೆಟ್ ಮಾರಾಟ
ಮುಂಗಡ ಬುಕಿಂಗ್ನಲ್ಲೇ 10 ಲಕ್ಷ ಟಿಕೆಟ್‌ಗಳ ಮಾರಾಟ
ಈ ಮಧ್ಯೆ ಆಂಧ್ರಪ್ರದೇಶದಲ್ಲಿ ಪುಷ್ಪಾ-2 ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ. ಪುಷ್ಪಾ ತಂಡದ ಟಿಕೆಟ್ ದರ ಏರಿಕೆಗೆ ಆಂಧ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ನಟ ಅಲ್ಲು ಅರ್ಜುನ್ ಅವರು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.
ಬಾಹುಬಲಿ, ಗದರ್-2 ಹಾಗೂ ಅನಿಮಲ್ ಚಿತ್ರದ ದಾಖಲೆಯನ್ನ ಪುಷ್ಪಾ-2 ಉಡೀಸ್ ಮಾಡಿದೆ. ಅದೆಷ್ಟು ಅಂದ್ರೆ, ಕೇವಲ 10 ಗಂಟೆಗಳಲ್ಲೇ ಪುಷ್ಪಾ-2 ದಾಖಲೆಯ ಮುಕುಟವೇರಿದೆ. ಆದ್ರೆ ಇದು ಕೇವಲ ಮಲ್ಟಿಪ್ಲೆಕ್ಸ್ ಥಿಯೇಟರ್ ಲೆಕ್ಕ ಆಗಿದ್ದು ಪಿವಿಆರ್ ಐನಾಕ್ಸ್ ಹಾಗೂ ಸಿಂಗಲ್ ಥಿಯೇಟರ್ ಲೆಕ್ಕದಲ್ಲೂ ದಾಖಲೆ ಸೃಷ್ಟಿಸಿದೆ.
ಇದನ್ನೂ ಓದಿ: KGF ರೀತಿ ಅಮ್ಮನ ಆಸೆ ಈಡೇರಿಸಲು ಪಣತೊಟ್ಟ ಮಗ; ಚಿನ್ನದ ಸರ ಕೊಡಿಸಲು ಮಾಡಿದ್ದೇನು ಗೊತ್ತಾ?
ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪುಷ್ಪಾ-2 ಇಡೀ ದೇಶದಲ್ಲೇ ಹಲ್ಚಲ್ ಸೃಷ್ಟಿಸುವ ಸೂಚನೆ ನೀಡಿದೆ. ನಾಡಿದ್ದು ವಿಶ್ವದೆಲ್ಲೆಡೆ ಪುಷ್ಪಾ-2 ರಿಲೀಸ್ ಆಗ್ತಿದ್ದು ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳ ಕಾತುರ ಹೆಚ್ಚಿಸಿದೆ. ಆದರೆ ಸಿನಿಮಾ ಬಿಡುಗಡೆಯಾದ್ಮೇಲೆ ಈ ಸಿನಿಮಾ ಅದೆಷ್ಟು ಕಲೆಕ್ಷನ್ ಮಾಡಬಹುದು ಅನ್ನೋದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ