Advertisment

Breaking: ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಅರೆಸ್ಟ್; ಹೈದ್ರಾಬಾದ್ ಪೊಲೀಸರಿಂದ ಬಂಧನ

author-image
Ganesh
Updated On
ಅಲ್ಲು ಅರ್ಜುನ್‌ಗೆ ಎದುರಾಯ್ತು ಕಾನೂನು ಸಂಕಷ್ಟ.. ಪುಷ್ಪಾ 2 ಪ್ರಮೋಷನ್ ವೇಳೆ ದೊಡ್ಡ ಯಡವಟ್ಟು!
Advertisment
  • ಪುಷ್ಪ 2 ರಿಲೀಸ್​ ವೇಳೆ ಕಾಲ್ತುಳಿತದಲ್ಲಿ ದುರಂತ
  • ಅಲ್ಲು ಅರ್ಜುನ್ ಅಭಿನಯದ ಸಿನಿಮಾ
  • ಡಿಸೆಂಬರ್ 4 ರಂದು ನಡೆದಿದ್ದ ದುರ್ಘನೆ

ಪುಷ್ಪ-2 ಚಿತ್ರದ ಸಕ್ಸಸ್​ ಸಂಭ್ರಮದಲ್ಲಿದ್ದ ಐಕಾನ್ ಸ್ಟಾರ್​ ಅಲ್ಲು ಅರ್ಜುನ್​ಗೆ ಬಿಗ್​ ಶಾಕ್ ಆಗಿದೆ. ಹೈದ್ರಾಬಾದ್​ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisment

ಏನಿದು ಪ್ರಕರಣ..?

ಡಿಸೆಂಬರ್ 4 ರಂದು ಪುಷ್ಪ-2 ಪ್ರಿಮಿಯರ್ ಶೋ ಇತ್ತು. ಅಂತೆಯೇ ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಣೆಗೆ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ಅಲ್ಲು ಅರ್ಜುನ್ ಅವರನ್ನು ನೋಡಲು ಮುಗಿಬಿದ್ದಿದ್ದರು. ಆಗ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅಲ್ಲು ಅರ್ಜುನ್ ಆಗಮನದ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಅಲ್ಲು ಅರ್ಜುನ್ ತಮ್ಮ ಖಾಸಗಿ ಭದ್ರತೆಯೊಂದಿಗೆ ಥಿಯೇಟರ್ ಆವರಣವನ್ನ ಪ್ರವೇಶಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ತಳ್ಳಾಟದಿಂದ ನೂಕು ನುಗ್ಗಲು ಇನ್ನಷ್ಟು ಉಲ್ಬಣವಾಗಿದೆ ಎಂಬ ಆರೋಪ ಇದೆ.

BNS ಕಾಯಿದೆಯ U/s 105 ಮತ್ತು 118(1) ಹಾಗೂ r/w 3(5)ರಡಿ ಪ್ರಕರಣ ದಾಖಲಾಗಿದೆ. ನಟ ಅಲ್ಲು ಅರ್ಜುನ್.. ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್.. ಅಲ್ಲು ಅರ್ಜುನ್ ಅವರ ಭದ್ರತಾ ಸಿಬ್ಬಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ನೂಕುನುಗ್ಗಲು ಘಟನೆಗೆ ಥಿಯೇಟರ್ ಆಡಳಿತವೇ ಹೊಣೆ ಎಂಬ ಆರೋಪ ಇದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment