/newsfirstlive-kannada/media/post_attachments/wp-content/uploads/2024/12/Allu-arjun-5.jpg)
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಬಂಧನ ಈಗ ತೆಲುಗು ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಪುಷ್ಪ-2 ಪ್ರೀಮಿಯರ್ ಶೋ ವೇಳೆ ನಡೆದ ದುರಂತ ಪ್ರಕರಣದಲ್ಲಿ ತೆಲುಗು ಬಿಗ್​ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್​ ನಿವಾಸದಲ್ಲಿ ಬಂಧಿಸಿರುವ ಚಿಕ್ಕಡಪಲ್ಲಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬಂಧನ ಪ್ರಕ್ರಿಯೆಯನ್ನು ಮುಗಿಸಿ ಕೋರ್ಟ್​ಗೆ ಹಾಜರುಪಡಿಸಲು ಸಿದ್ಧತೆ ನಡೆಸ್ತಿದ್ದಾರೆ. ಅಂತೆಯೇ ಗಾಂಧಿ ಉಸ್ಮಾನಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ನಂತರ ನಾಂಪಳ್ಳಿ ಕೋರ್ಟ್ (Nampally court)​ ಮುಂದೆ ಅಲ್ಲು ಅರ್ಜುನ್ ಅವರನ್ನು ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಅರೆಸ್ಟ್; ನಿನ್ನೆಯೂ ಪುಷ್ಪ -2 ಕಮಾಲ್.. 8 ದಿನದ ಕಲೆಕ್ಷನ್ ಎಷ್ಟು ಕೋಟಿ..?
ನಂತರ ಪೊಲೀಸರು ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಅಲ್ಲು ಅರ್ಜುನ್​ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದರೆ ಜೈಲೇ ಗತಿ ಆಗಲಿದೆ. ಹೈದರಾಬಾದ್​ನ ಚಂಚಲಗೂಡ (Chanchalguda jail) ಜೈಲಿಗೆ ಪೊಲೀಸರು ಕಳುಹಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ