newsfirstkannada.com

ಅಬ್ಬಾ..! ಮಹಾಕಾಳಿ ಅವತಾರದಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್​.. ಪುಷ್ಪ-2 ಸಿನಿಮಾದ ಟೀಸರ್​ ಔಟ್​

Share :

Published April 8, 2024 at 11:55am

Update April 8, 2024 at 11:59am

    ಅಲ್ಲು ಅರ್ಜುನ್ ಹುಟ್ಟುಹಬ್ಬದಂದೇ ಪುಷ್ಪ-2 ಟೀಸರ್ ರಿಲೀಸ್

    ಈಗಾಗಲೇ ಪುಷ್ಪ ಭಾಗ ಒಂದು ಅಭಿಮಾನಿಗಳ ಮನ ಗೆದ್ದಿದೆ

    ಮೈ ರೋಮಾಂಚನಗೊಳಿಸುವಂತಿದೆ ಸ್ಟೈಲೀಸ್​ ಸ್ಟಾರ್ ಆ್ಯಕ್ಟಿಂಗ್

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾ ಆಫೀಸ್ ಉಡೀಸ್​ ಮಾಡಲು ಭರ್ಜರಿ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಫುಷ್ಪ ಸಿನಿಮಾ ಹಿಟ್​ ಆಗಿದ್ದು ಗಲ್ಲಾ​ ಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿದ್ದಲ್ಲದೇ ಉತ್ತರ ಭಾರತದಲ್ಲೂ ಸಖತ್ ಸೌಂಡ್ ಮಾಡಿತ್ತು. ಇನ್ನು ಇದೀಗ ಪುಷ್ಪ- 2 ದಿ ರೂಲ್ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದು ಸ್ಟೈಲೀಸ್​ ಸ್ಟಾರ್​ ಕಾಳಿ ಲುಕ್​ನಲ್ಲಿ ಅದ್ಧೂರಿಯಾಗಿ ಕಾಣಿಸಿದ್ದು ಅದೇ ಮ್ಯಾನೇರಿಸಮ್ ಮುಂದುವರೆಸಿದ್ದಾರೆ.

ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾಗಾಗಿ ಫ್ಯಾನ್ಸ್​ ಎಲ್ಲ ಕಾತುರದಿಂದ ಇದ್ದಾರೆ. ಇದೀಗ ರಿಲೀಸ್ ಆಗಿರುವ ಟೀಸರ್​ನಲ್ಲಿ ಅಲ್ಲು ಅರ್ಜುನ್​ ಸಖತ್ ರಗಡ್​ ಲುಕ್​ನಲ್ಲಿ ಕಾಣಿಸಿದ್ದಾರೆ. ಆದರೆ ಟೀಸರ್​ನಲ್ಲಿ ಅಲ್ಲು ಅರ್ಜುನ್​ ಕೇವಲ ಕಾಳಿ ಅವತಾರದಲ್ಲಿ ಇದ್ದು ಸೀರೆಯುಟ್ಟು ಫೈಟಿಂಗ್​ ಮಾಡಿದ್ದಾರೆ. ಗ್ರ್ಯಾಂಡ್​ ಆಗಿ ದೊಡ್ಡದಾಗಿ ಹಾಕಿರುವ ಸೆಟ್​ನಲ್ಲಿನ ಒಂದು ಸೀನ್ ಮಾತ್ರ ಟೀಸರ್​ನಲ್ಲಿ ಬಿಟ್ಟಿದ್ದು ಫೈಟಿಂಗ್​ ಸ್ಕ್ಯಾನ್ ಮಾತ್ರ ನೋಡುಗರ ಮೈ ರೋಮಾಂಚನಗೊಳಿಸುವಂತಿದೆ. ಟೀಸರ್ ಜೊತೆ ಯಾವುದೇ ಡೈಲಾಗ್​ ಕೂಡ ಇಲ್ಲ.

 ಇದನ್ನೂ ಓದಿ: ದೇವರ ಕೊರಳಲ್ಲಿದ್ದ ತಾಳಿ ಸರ ಕದ್ದ ಕಳ್ಳ, ದೇವತೆಗೆ ಕೈ ಮುಗಿದಂತೆ ಕಳ್ಳನಾಟಕವಾಡಿದ ಚೋರ..! ವಿಡಿಯೋ

ಪುಷ್ಪ- 2 ದಿ ರೂಲ್ ಸಿನಿಮಾದ ಇದೇ ವರ್ಷ ಆಗಸ್ಟ್​ನಲ್ಲಿ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡಲಿದೆ. ಮೂವಿ ರಿಲೀಸ್​ಗಾಗಿ ಅಭಿಮಾನಿಗಳೆಲ್ಲ ಕಾತುರದಿಂದ ಕಾದು ಕುಳಿತ್ತಿದ್ದಾರೆ. ಇನ್ನು ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ನ್ಯಾಷನಲ್​ ಕ್ರಷ್ ರಶ್ಮಿಕಾ ಮಂದಣ್ಣ ಮುಂದುವರೆದಿದ್ದಾರೆ. ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಬಿಗ್​ ಗಿಫ್ಟ್​ ಸಿಕ್ಕಂತೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ..! ಮಹಾಕಾಳಿ ಅವತಾರದಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್​.. ಪುಷ್ಪ-2 ಸಿನಿಮಾದ ಟೀಸರ್​ ಔಟ್​

https://newsfirstlive.com/wp-content/uploads/2024/04/ALLU_ARJUN.jpg

Load More