/newsfirstlive-kannada/media/post_attachments/wp-content/uploads/2024/12/Allu-arjun-3.jpg)
ಹೈದ್ರಾಬಾದ್​​ನ ಸಂಧ್ಯಾ ಥಿಯೇಟರ್​ನಲ್ಲಿ ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಹಿಳೆಯ ಪ್ರಕರಣದಲ್ಲಿ ಅಲ್ಲು ಅರ್ಜುನ್​ ಬಂಧನವಾಗಿತ್ತು ಹಾಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಕೂಡ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅಲ್ಲು ಅರ್ಜುನ್​ ಪರ ವಕೀಲರು ಹೈಕೋರ್ಟ್​ ಮೊರೆ ಹೋಗಿದ್ದರು. ಸದ್ಯ ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್​ ಮಧ್ಯಂತರ ಜಾಮೀನನ್ನು ನೀಡಿದ್ದು. ಅಲ್ಲು ಅರ್ಜುನ್ ಬೀಸೋ ದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡಿದ್ದಾರೆ.
ಹೈಕೋರ್ಟ್​ನಲ್ಲಿ ವಾದ ಮಾಡಿದ ಅಲ್ಲು ಅರ್ಜುನ್ ಅವರ ವಕೀಲರು ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಪಾತ್ರವಿಲ್ಲ. ಉದ್ದೇಶಪೂರ್ವಕವಾಗಿ ನಡೆದಂತಹ ಸಾವು ಇದಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಗುಜರಾತ್​​ನ ಬರೋಡಾದಲ್ಲಿ ಬಾಲಿವುಡ್ ಆ್ಯಕ್ಟರ್ ಶಾರುಖ್​ ಖಾನ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಾಗೂ ಅವರಿಗೆ ಸಿಕ್ಕ ಜಾಮೀನಿನ ವಿಚಾರವನ್ನು ಹೈಕೋರ್ಟ್​ಗೆ ನೆನಪಿಸಿದ ವಕೀಲರು ಆ ಕೇಸ್​ನಂತೆ ಈ ಪ್ರಕಣದಲ್ಲಿಯೂ ಕೂಡ ಆರೋಪಿಯ ಪಾತ್ರವಿಲ್ಲ ಹೀಗಾಗಿ ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ವಾದಿಸಿದ್ದಾರೆ
ವಾದವನ್ನು ಕೇಳಿದ ನ್ಯಾಯಮೂರ್ತಿಗಳು ಕೇಸ್​ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲು ಅರ್ಜುನ್​ಗೆ ಮಧ್ಯಂತರ ಜಾಮೀನನ್ನು ನೀಡಿದೆ. ಸದ್ಯ ಚಂಚಲಗೂಡು ಠಾಣೆಯ ಜೈಲಿನಲ್ಲಿರುವ ಅಲ್ಲು ಅರ್ಜುನ್ ಇಂದೇ ಬಿಡುಗಡೆಯಾಗುತ್ತಾರಾ? ಇಲ್ಲವೇ ಸೋಮವಾರ ಆಗುತ್ತಾರಾ ಅನ್ನೋದು ಪ್ರಶ್ನೆ. ಆದೇಶದ ಪ್ರತಿ ಇಂದೇ ಜೈಲು ಅಧಿಕಾರಿಗಳಿಗೆ ನೀಡಿದಲ್ಲಿ ಅಲ್ಲು ಅರ್ಜುನ್ ಇಂದೇ ಬಿಡುಗಡೆ ಆಗುತ್ತಾರೆ, ಇಲ್ಲವಾದಲ್ಲಿ ಸೋಮವಾರವೇ ಬಿಡುಗಡೆಯ ಭಾಗ್ಯ ಕಾದಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us