/newsfirstlive-kannada/media/post_attachments/wp-content/uploads/2024/12/WeStandWithAlluArjun-1.jpg)
ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್​ಗೆ ದೊಡ್ಡ ರಿಲೀಫ್ ಸಿಕ್ಕಿದೆ . ಹೈದ್ರಾಬಾದ್​ನ ನಾಂಪಲ್ಲಿ ಕೋರ್ಟ್​​ನಿಂದ ಅಲ್ಲು ಅರ್ಜುನ್​ಗೆ ರೆಗ್ಯುಲರ್ ಬೇಲ್ ಮಂಜೂರಾಗಿದ್ದು ನಟ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣದಲ್ಲಿ 11ನೇ ಆರೋಪಿ ಅಗಿದ್ದರು ಅಲ್ಲು ಅರ್ಜುನ್ ಈಗ ಬೇಲ್​ ಸಿಕ್ಕ ಮೇಲೆ ನಿರಾಳರಾಗಿದ್ದಾರೆ.
ಡಿಸೆಂಬರ್ 4ನೇ ತಾರೀಖಿನಂದು ಹೈದ್ರಾಬಾದ್​ನ ಸಂಧ್ಯಾ ಥೀಯೆಟರ್​ಗೆ ಪ್ರಿಮೀಯರ್ ಶೋ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ಅಲ್ಲು ಅರ್ಜುನ್ ಬಂದಿದ್ದರಿಂದ ಅಭಿಮಾನಿಗಳ ದಂಡು ದುಪ್ಪಾಟ್ಟಾಗಿ ಕಾಲ್ತುಳಿತ ನಡೆದಿತ್ತು ಇದೇ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಹಾಗು ಅವರ ಮಗ ಕಾಲ್ತುಳಿತಕ್ಕೆ ಸಿಲುಕಿದ್ದರು. ರೇವತಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ. ಅವರ ಪುತ್ರ ಇನ್ನೂ ಐಸಿಯುವನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಮಾನ್ ಮಲಿಕ್; ಬ್ಯೂಟಿಫುಲ್​ ಫೋಟೋಸ್ ಇಲ್ಲಿವೆ
ಈ ಒಂದು ಘಟನೆ ತೆಲಂಗಾಣದಲ್ಲಿ ಸರ್ಕಾರ ವರ್ಸಸ್ ಅಲ್ಲು ಅರ್ಜುನ್ ಎಂಬ ಫೈಟ್​ಗೆ ನಾಂದಿ ಹಾಡಿತ್ತು. ಇತ್ತೀಚೆಗೆ ತೆಲುಗು ಫಿಲ್ಮ್​ ಚೆಂಬರ್​ ಸದಸ್ಯರು, ಅಲ್ಲು ಅರ್ಜುನ್ ತಂದೆ ಹಾಗೂ ಪುಷ್ಪಾ ಚಿತ್ರತಂಡ ಸೇರಿ ಸಿಎಂ ರೇವಂತ್ ರೆಡ್ಡಿಯವರನ್ನು ಭೇಟಿ ಮಾಡಿ ಬಂದಿದ್ದರು. ಈ ಬೆಳವಣಿಗೆಯ ಬೆನ್ನಲ್ಲಿಯೇ ಅಲ್ಲು ಅರ್ಜುನ್​ಗೆ ಬೇಲ್ ಸಿಕ್ಕಿರುವುದು ರಿಲೀಫ್​ ದೊರಕಿದಂತೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us