ಪುಷ್ಪಾ-2 ಚಿತ್ರದ ವಿರುದ್ಧ ಕನ್ನಡಿಗರು ಆಕ್ರೋಶ; ಅಲ್ಲು ಅರ್ಜುನ್ ಹೀಗೆ ಮಾಡಿದ್ದು ಸರಿಯೇ..?

author-image
Ganesh
Updated On
ಪುಷ್ಪಾ-2 ಚಿತ್ರದ ವಿರುದ್ಧ ಕನ್ನಡಿಗರು ಆಕ್ರೋಶ; ಅಲ್ಲು ಅರ್ಜುನ್ ಹೀಗೆ ಮಾಡಿದ್ದು ಸರಿಯೇ..?
Advertisment
  • Pushpa 2: The Rule ನಾಳೆ ತೆರೆಗೆ ಅಪ್ಪಳಿಸ್ತಿದೆ
  • ಇಂದು ರಾತ್ರಿಯಿಂದಲೇ ಫ್ಯಾನ್ ಶೋ ನಡೀತಿದೆ
  • ಪುಷ್ಪಾ-2 ಚಿತ್ರದ ವಿರುದ್ಧ ಕನ್ನಡಿಗರ ಆಕ್ರೋಶ ಯಾಕೆ?

ನಾಳೆ ವಿಶ್ವದಾದ್ಯಂತ ಅಲ್ಲು ಅರ್ಜುನ್ ಅಭಿನಯದ Pushpa 2: The Rule ಚಿತ್ರ ರಿಲೀಸ್ ಆಗ್ತಿದೆ. ಅದಕ್ಕಾಗಿ ಸಿನಿ ರಸಿಕರು ಎಕ್ಸೈಟ್ ಆಗಿದ್ದಾರೆ. ಬೆನ್ನಲ್ಲೇ ಕೆಲವು ಸಿನಿಮಾ ಅಭಿಮಾನಿಗಳಿಗೆ ಚಿತ್ರ ತಂಡ ಬೇಸರವನ್ನುಂಟು ಮಾಡಿದೆ. ಕನ್ನಡಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾಕೆ ಆಕ್ರೋಶ?
ಇಂದು ರಾತ್ರಿಯಿಂದಲೇ ಹಲವೆಡೆ ಫ್ಯಾನ್ ಶೋ ನಡೆಯುತ್ತಿದೆ. ಬೆಂಗಳೂರಿನಲ್ಲೂ ಫ್ಯಾನ್ ಶೋಗಳಿಗೆ ಸಿದ್ಧತೆ ನಡೆಯುತ್ತಿದೆ. ಇಂದು ರಾತ್ರಿ 9.30ಕ್ಕೆ ಫ್ಯಾನ್ ಶೋ ನಡೆಯಲಿದೆ. ಈ ಮಧ್ಯೆ ಪುಷ್ಪ 2 ಟಿಕೆಟ್ ಬೆಲೆ ಏಕಾಏಕಿ ಹೆಚ್ಚಳ ಮಾಡಲಾಗಿದೆ.

ಕರ್ನಾಟಕಕ್ಕೆ ಬಾರದ ಅಲ್ಲು ಅರ್ಜುನ್
ಬೆಂಗಳೂರಲ್ಲಿ ಕನಿಷ್ಠ 800 ರೂಪಾಯಿಯಿಂದ 2000 ಸಾವಿರವರೆಗೆ ಏರಿಕೆ ಮಾಡಲಾಗಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಟಿಕೆಟ್ ಬೆಲೆ ಕಮ್ಮಿ ಮಾಡಬೇಕು. ಎಷ್ಟೇ ಎಚ್ಚರಿಕೆ ನೀಡಿದರೂ ಟಿಕೆಟ್ ಬಲೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಕರ್ನಾಟಕಕ್ಕೆ ಭೇಟಿ ನೀಡದೇ ಇರೋದು ಕೂಡ ಅಭಿಮಾನಿಗಳಿಗೆ ಕೋಪ ತರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್‌ಗೆ ಎದುರಾಯ್ತು ಕಾನೂನು ಸಂಕಷ್ಟ.. ಪುಷ್ಪಾ 2 ಪ್ರಮೋಷನ್ ವೇಳೆ ದೊಡ್ಡ ಯಡವಟ್ಟು!

‘ಪುಷ್ಪ 2: ದಿ ರೂಲ್’ ಟಿಕೆಟ್‌ಗಳು ದುಬಾರಿಯಾಗಿದ್ದರೂ ಅಡ್ವಾನ್ಸ್​​ ಬುಕ್ಕಿಂಗ್​ ನಿರೀಕ್ಷೆಗೂ ಮೀರಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೆ 13 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಸೋಲ್ಡ್​ ಆಗಿವೆ. ತೆಲಂಗಾಣದಲ್ಲಿ ಹೆಚ್ಚು ಟಿಕೆಟ್​​ಗಳು ಖರೀದಿ ಆಗಿವೆ. ತೆಲಂಗಾಣ ಒಂದರಲ್ಲೇ ಮುಂಗಡ ಬುಕಿಂಗ್‌ನಿಂದ 18.53 ರೂಪಾಯಿ ಗಳಿಸಿದ್ರೆ, ಕರ್ನಾಟಕದಲ್ಲಿ 8.14 ಕೋಟಿ ರೂಪಾಯಿ ಹಣ ಗಳಿಸಿದೆ. ಆ ಮೂಲಕ ಪುಷ್ಪಾ-2 ಬುಕ್ಕಿಂಗ್​ನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಪುಷ್ಪಾ-2. ತೆಲುಗಿನಲ್ಲಿ ಟಿಕೆಟ್ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗೋಲ್ಡ್​ ಕ್ಲಾಸ್​​ಗೆ 1800 ರೂಪಾಯಿ ಇದೆ. ಮುಂಬೈ ಮತ್ತು ಬೆಂಗಳೂರಲ್ಲಿ ಒಂದು ಟಿಕೆಟ್​ಗೆ 1,600 ಮತ್ತು ರೂ 1,000 ರೂಪಾಯಿ ಇದೆ.

ಇದನ್ನೂ ಓದಿPushpa 2: The Rule: ಟಿಕೆಟ್ ಬುಕ್ಕಿಂಗ್​ನಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗಿದೆ ಕ್ರೇಜ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment