/newsfirstlive-kannada/media/post_attachments/wp-content/uploads/2024/12/ALLU_ARJUN-2.jpg)
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ- 2 ದೀ ರೂಲ್ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಐಕಾನ್ ಸ್ಟಾರ್ ಅಭಿಮಾನಿಗಳ ಸಂಭ್ರಮ ಕೂಡ ಡಬಲ್ ಆಗಿದೆ. ದೇಶದ್ಯಾಂತ ಓಡಾಡಿ ಚಿತ್ರತಂಡದವರು ಪ್ರಚಾರಗಳನ್ನು ಮಾಡುತ್ತಿದ್ದು ಈಗಲೂ ಮುಂದುವರೆಸಿದ್ದಾರೆ. ಆದರೆ ಇದರ ನಡುವೆ ಸಿನಿಮಾ ಟಿಕೆಟ್ ಮಾತ್ರ ಭಾರೀ ಏರಿಕೆ ಆಗಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಟಾಲಿವುಡ್ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ- 2 ಸಿನಿಮಾ ಡಿಸೆಂಬರ್ 5 ಅಂದರೆ ಇನ್ನೇನು 2 ದಿನ ಕಳೆದರೆ ಬಿಡುಗಡೆ ಆಗಲಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್, ಬಿರುಸಿನ ಪ್ರಚಾರ ನಡೆಸಲಾಗುತ್ತಿದೆ. ಎಲ್ಲವೂ ಅಚ್ಚುಕಟ್ಟಾಗಿ ನಡೀತಿದೆ. ಇನ್ನೂ ರಿಲೀಸ್ ಹಿಂದಿನ ಅಂದರೆ ನಾಳೆ ಹಲವೆಡೆ ಫ್ಯಾನ್ಸ್ ಪ್ರೀಮಿಯರ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಅದರಂತೆ ಡಿಸೆಂಬರ್ 4 ರಂದು ರಾತ್ರಿ 9.30ಕ್ಕೆ ಪ್ರೀಮಿಯರ್ ಶೋಗಳು ನಡೆಯಲಿವೆ.
ಇದನ್ನೂ ಓದಿ:ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲು.. ಐಕಾನ್ ಸ್ಟಾರ್ ಹೀಗೆ ಮಾಡಬಹುದಿತ್ತಾ?
ಆದರೆ ಈ ಫ್ಯಾನ್ಸ್ ಪ್ರೀಮಿಯರ್ ಶೋನ ಒಂದು ಟಿಕೆಟ್ನ ಬೆಲೆ ಬರೋಬ್ಬರಿ 1,250 ಆಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೈದರಾಬಾದ್ನಲ್ಲಿ ಸಿನಿಮಾಕ್ಕಾಗಿ ನಡೆದ ಈವೆಂಟ್ನಲ್ಲಿ ಅಭಿಮಾನಿಯೊಬ್ಬರು ನಿರ್ಮಾಪಕರಿಗೆ ಪ್ರಶ್ನೆ ಮಾಡಿದ್ದಾರೆ. ಸಿನಿಮಾ ನೋಡುವುದು ಅಭಿಮಾನಿಗಳ ಆಶಯ. ಅದನ್ನೇ ಬಂಡವಾಳ ಮಾಡಿಕೊಂಡು ನೀವು ಒಂದು ಟಿಕೆಟ್ಗೆ 1,250 ರೂಪಾಯಿ ನಿಗದಿ ಮಾಡಿದರೆ ಹೇಗೆ, ಪುಷ್ಪ ಸಿನಿಮಾದ ಟಿಕೆಟ್ ರೇಟ್ ತುಂಬಾನೇ ಜಾಸ್ತಿ ಆಗಿದೆ ಎಂದು ಪ್ರಶ್ನೆ ಮಾಡಿದ್ದಾನೆ.
ಅಲ್ಲು ಅರ್ಜುನ್ ನಟನೆಯ ಪುಷ್ಪಾ 2 ಸಿನಿಮಾ ನಾಡಿದ್ದು ವಿಶ್ವದ್ಯಾಂತ ತೆರೆಗೆ ಅಪ್ಪಳಿಸಲಿದೆ. ರಿಲೀಸ್‌ಗೂ ಮೊದಲೇ ನಿರೀಕ್ಷೆ ಹುಟ್ಟುಹಾಕಿರುವ ಪುಷ್ಪ ಟ್ರೇಲರ್ ಹಾಗೂ ಹಾಡುಗಳ ಪ್ರೇಕ್ಷಕರಿಗೆ ಸಖತ್ ಇಷ್ಟ ಕೂಡ ಆಗಿವೆ. ಸ್ಟೈಲೀಶ್ ಸ್ಟಾರ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಶ್ಮಿಕಾ ಕೂಡ ರೊಮ್ಯಾಂಟಿಕ್ ಅಗಿ ಸಾಂಗ್ಗಳಲ್ಲಿ ಕಾಣಿಸಿದ್ದು ಫ್ಯಾನ್ಸ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.
Aadevado … Sir marii 1200/- ayyite yetta saarr anta 🤣 pic.twitter.com/0BwJ2tRknJ
— WILD SAALE🔥 (@thokkaloteja)
Aadevado … Sir marii 1200/- ayyite yetta saarr anta 🤣 pic.twitter.com/0BwJ2tRknJ
— WILD SAALE🔥 (@thokkaloteja) December 2, 2024
">December 2, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ