Pushpa2; 2ನೇ ವಾರದ ಕಲೆಕ್ಷನ್ ಎಷ್ಟು ಸಾವಿರ ಕೋಟಿ.. ಪ್ರಭಾಸ್ ರೆಕಾರ್ಡ್ ಬ್ರೇಕ್ ಮಾಡಿದ್ರಾ ಅಲ್ಲು ಅರ್ಜುನ್?

author-image
Bheemappa
Updated On
Pushpa2; 2ನೇ ವಾರದ ಕಲೆಕ್ಷನ್ ಎಷ್ಟು ಸಾವಿರ ಕೋಟಿ.. ಪ್ರಭಾಸ್ ರೆಕಾರ್ಡ್ ಬ್ರೇಕ್ ಮಾಡಿದ್ರಾ ಅಲ್ಲು ಅರ್ಜುನ್?
Advertisment
  • ಮುಂದಿನ ಟಾರ್ಗೆಟ್ ಪ್ರಭಾಸ್, ಯಾವ ಸಿನಿಮಾ ಇದೆ ಗೊತ್ತಾ?
  • 2ನೇ ವಾರದಲ್ಲಿ ಪುಷ್ಪ2 ಸಿನಿಮಾದ ಭರ್ಜರಿ ಕಲೆಕ್ಷನ್ ಮಾಡಿದೆ
  • ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಗೆ ಸೇರಿದ ಪುಷ್ಪ2

ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ-2 ಸಿನಿಮಾ ವಿಶ್ವದ್ಯಾಂತ ಡಿಸೆಂಬರ್ 05 ರಂದು ರಿಲೀಸ್ ಆಗಿತ್ತು. ಇದಕ್ಕೆ ಫ್ಯಾನ್ಸ್​ ಫುಲ್ ಫಿದಾ ಆಗಿ ಮತ್ತೆ ಮತ್ತೆ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಇದರಿಂದ ಥಿಯೇಟರ್​ಗಳಲ್ಲಿ ಸಖತ್ ಕಲೆಕ್ಷನ್ ಮಾಡುತ್ತಿರುವ ಪುಷ್ಪ2 ಸಿನಿಮಾ ಮಹತ್ತರ ಮೈಲಿಗಲ್ಲು ಕಡೆಗೆ ಹೊರಟಿದೆ. 2ನೇ ವಾರದಲ್ಲಿ ಪುಷ್ಪ2 ಎಷ್ಟು ಸಾವಿರ ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ ಎನ್ನುವ ಮಾಹಿತಿ ಇಲ್ಲಿದೆ.

publive-image

ಇದನ್ನೂ ಓದಿ: ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ.. ಇಂದು CT ರವಿರನ್ನ ಕೋರ್ಟ್​ಗೆ ಹಾಜರುಪಡಿಸಲಿರುವ ಪೊಲೀಸರು

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ದಿ ರೂಲ್ ವಿಶ್ವದ್ಯಾಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೇವಲ 14ದಿನಗಳಲ್ಲಿ ಈ ಸಿನಿಮಾ ವಿಶ್ವದ್ಯಾಂತದ ಬಾಕ್ಸ್​ ಆಫೀಸ್​ನಲ್ಲಿ 1508 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವರ್ಲ್ಡ್​​ ವೈಡ್​ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರದಲ್ಲೇ ಪುಷ್ಪ 725.8 ಕೋಟಿ ರೂಪಾಯಿ ಸಂಗ್ರಹಿಸಿತ್ತು. 5 ದಿನಗಳಲ್ಲಿ ₹900 ಕೋಟಿ ಗಳಿಸಿತ್ತು. ಒಂದು ವಾರದಲ್ಲಿ ಒಟ್ಟು 1000 ಕೋಟಿ ರೂ.ಗಳನ್ನು ಕಲೆಕ್ಷನ್​ ಮಾಡಿತ್ತು. ಇದೀಗ 14ದಿನಗಳಲ್ಲಿ 1508 ಕೋಟಿ ಹಣ ಸಂಗ್ರಹಿಸಿದೆ.

ಪುಷ್ಪ2 ಸಿನಿಮಾ ಈಗಾಗಲೇ ಕೆಜಿಎಫ್​2 ಹಾಗೂ ಆರ್​ಆರ್​ಆರ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಇನ್ನೇನಿದ್ದರೂ ಬಾಹುಬಲಿ 2 ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಲು ಮುನ್ನುಗ್ಗುತ್ತಿದೆ. ವರ್ಲ್ಡ್​​ ವೈಡ್​ ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚು ಹಣ ಗಳಿಕೆ ಮಾಡಿರುವುದರಲ್ಲಿ ಮೊದಲ ಸ್ಥಾನದಲ್ಲಿ ಅಮೀರ್ ಖಾನ್ ಅಭಿನಯದ ದಂಗಲ್ ₹2,024 ಕೋಟಿ, ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿ-2 ಸಿನಿಮಾ ₹1,742 ಕೋಟಿ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ಸದ್ಯ ಅಲ್ಲು ಅರ್ಜುನ್ ಪುಷ್ಪ ಸಿನಿಮಾ 3ನೇ ಸ್ಥಾನದಲ್ಲಿದೆ.

publive-image

ಪುಷ್ಪ2 ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೇನ್ ರೋಲ್​ನಲ್ಲಿ ಕಾಣಿಸಿದರೆ, ರಾವ್​ರಮೇಶ್, ಫಹದ್ ಫಾಸಿಲ್, ಜಗಪತಿ ಬಾಬು, ಧನಂಜಯ, ಸುನಿಲ್ ಮತ್ತು ಅನಸೂಯಾ ಭಾರದ್ವಾಜ್ ಸೇರಿ ಇನ್ನಿತರರು ನಟನೆ ಮಾಡಿದ್ದಾರೆ. ಈ ಸಿನಿಮಾವು ರಕ್ತ ಚಂದನ ಮರದ ಕುರಿತ ಕಥೆಯಾಗಿದ್ದು ಡೈರೆಕ್ಟರ್ ಸುಕುಮಾರ್ ಅವರು ಮರದ ಕಳ್ಳತನ ಸೇರಿ ಎಲ್ಲವನ್ನು ಅದ್ಭುತವಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment