/newsfirstlive-kannada/media/post_attachments/wp-content/uploads/2025/06/allu-arjun5.jpg)
ಬರೋಬ್ಬರಿ 18 ವರ್ಷಗಳ ಬಳಿಕ ಕನಸು ನನಸಾಗಿದೆ. ಆರ್‌ಸಿಬಿ ಕೊನೆಗೂ ಕಪ್ ಗೆದ್ದಿದೆ. ಇದಕ್ಕಿಂತ ಇನ್ನೇನ್ ಬೇಕು ಹೇಳಿ. ಕೋಟ್ಯಂತರ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ. ಅಭಿಮಾನಿಗಳು ಹೆಮ್ಮೆಯಿಂದ ಈ ಸಲ ಕಪ್​ ನಮ್ದೇ ಅಲ್ಲ​ ನಮ್ದು ಅಂತ ಹೇಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/allu-arjun4.jpg)
ಇನ್ನೂ ಇದೆಲ್ಲದರ ಜೊತೆಗೆ ಸೆಲೆಬ್ರಿಟಿಗಳು ಅಷ್ಟೇ ಅಲ್ಲದೇ ಅವರ ಮಕ್ಕಳು ಆರ್​ಸಿಬಿ ಗೆಲುವಿಗೆ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆರ್​ಸಿಬಿ ಹಾಗೂ ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿ ಆಗಿರೋ ಸ್ಟಾರ್​ ನಟ ಅಲ್ಲು ಅರ್ಜುನ್​ ಮಗ ಭಾವುಕರಾಗಿದ್ದಾರೆ. ಆರ್​ಸಿಬಿ ಕಪ್​ ಗೆಲ್ಲುತ್ತಿದ್ದಂತೆ ಖುಷಿಯಲ್ಲಿ ಏನು ಮಾಡಬೇಕು ಅಂತ ಗೊತ್ತಾಗದೇ ತಲೆಯ ಮೇಲೆ ತಣ್ಣೀರನ್ನು ಹೊಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಟಿವಿ ಮುಂದೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ.
View this post on Instagram
ಈ ಖುಷಿಯ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್​ ವಿಡಿಯೋವನ್ನು ಮಾಡಿದ್ದಾರೆ. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲು ಅಯಾನ್ ಅದೆಷ್ಟು ಭಾವುಕರಾಗಿದ್ದರು ಎಂಬುವುದು ವಿಡಿಯೋದಲ್ಲಿ ನೀವು ಕಾಣಬಹುದು. ಜೋರಾಗಿ ಕೂಗುತ್ತಾ ಫೈನಲಿ 18 ಇಯರ್ಸ್​ ಅಂತ ಖುಷಿಪಟ್ಟಿದ್ದಾರೆ. ಸದ್ಯ ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಆರ್​ಸಿಬಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us