ಪುಷ್ಪ-2 ಸಕ್ಸಸ್ ಖುಷಿಯಲ್ಲಿರುವ ಅಲ್ಲು ಅರ್ಜುನ್​​ಗೆ ಮಗನಿಂದ ಮುದ್ದಾದ ಗಿಫ್ಟ್..!

author-image
Ganesh
Updated On
ಪುಷ್ಪ-2 ಸಕ್ಸಸ್ ಖುಷಿಯಲ್ಲಿರುವ ಅಲ್ಲು ಅರ್ಜುನ್​​ಗೆ ಮಗನಿಂದ ಮುದ್ದಾದ ಗಿಫ್ಟ್..!
Advertisment
  • ವಿಶ್ವದಾದ್ಯಂತ ‘Pushpa 2 The Rule’ ರಿಲೀಸ್ ಆಗಿದೆ
  • ಫ್ರೀ ಬುಕಿಂಗ್​​​ನಲ್ಲೇ 100 ಕೋಟಿಗೂ ಹೆಚ್ಚು ಕಲೆಕ್ಷನ್
  • ಅಲ್ಲು ಅರ್ಜನ್​​ಗೆ ಸುಪುತ್ರ ನೀಡಿದ ಸ್ಪೆಷಲ್ ಗಿಫ್ಟ್​ ಏನು?

ಪುಷ್ಪ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಬಹುನಿರೀಕ್ಷಿತ ಪುಷ್ಪ-2 ಇವತ್ತು ವಿಶ್ವದಾದ್ಯಂತ ಬಿಗ್​ ಸ್ಕ್ರೀನ್​ ಮೇಲೆ ಎಂಟ್ರಿ ಕೊಟ್ಟಿದೆ. ರಿಲೀಸ್​​ಗೂ ಮುನ್ನವೇ ಫ್ರೀ ಬುಕಿಂಗ್​​​ನಲ್ಲೇ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಮೊದಲ ದಿನದಿಂದಲೇ ಪುಷ್ಪಾ-2 ಧೂಳೆಬ್ಬಿಸ್ತಿದೆ. ಇದೇ ಖುಷಿಯಲ್ಲಿರುವ ಅಲ್ಲು ಅರ್ಜುನ್​​ಗೆ, ಮಗ ಮುದ್ದಾದ ಗಿಫ್ಟ್​ ಕೊಟ್ಟಿದ್ದಾರೆ.

ಪುತ್ರ ಅಯಾನ್ (Ayaan) ತಂದೆಗೆ ಕ್ಯೂಟ್ ಪತ್ರ ಬರೆದಿದ್ದಾರೆ. ಅದನ್ನು ಅಲ್ಲು ಅರ್ಜುನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಪತ್ರದಲ್ಲಿ ಏನಿದೆ..? ‘ಡಿಯರ್ ಅಪ್ಪಾ.. ಈ ಕ್ಷಣದಲ್ಲಿ ನಾನು ಎಷ್ಟು ಖುಷಿಯಾಗಿದ್ದೇನೆ. ನನಗೆ ಎಷ್ಟು ಹೆಮ್ಮೆ ಅನಿಸುತ್ತಿದೆ ಎಂದು ಹೇಳಲು ಈ ಪತ್ರ ಬರೆಯುತ್ತಿದ್ದೇನೆ..’ ಅಂತಾ ಪ್ರಾರಂಭ ಮಾಡಿದ್ದಾರೆ.

ನಿಮ್ಮ ಕಠಿಣ ಪರಿಶ್ರಮ, ಶ್ರದ್ಧೆ ನೋಡಿದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತಿದೆ. ನನಗೆ ನೀವು ಯಾವಾಗಲೂ ಆಕಾದಷ್ಟು ಎತ್ತರವಾಗಿ ಕಾಣುತ್ತೀರಿ. ಪುಷ್ಪ 2 ಬಿಡುಗಡೆಯಾಗುತ್ತಿದೆ. ಇದು ಬಹಳ ವಿಶೇಷವಾದ ದಿನ. ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ನೀವು ಗೊಂದಲದಲ್ಲಿ ಇದ್ದೀರಿ ಎಂದು ನನಗೆ ಗೊತ್ತು. ಪುಷ್ಪ ನಿಮ್ಮ ಪಾಲಿಗೆ ಬರೀ ಸಿನಿಮಾ ಅಲ್ಲ. ಅದೊಂದು ಅದ್ಭುತ ಪ್ರಯಾಣ. ನಿಮ್ಮ ಅಭಿನಯದ ಉತ್ಸಾಹಕ್ಕೆ ಪುಷ್ಪಾ ಸಾಕ್ಷಿ. ಬೆಸ್ಟ್ ಆಫ್ ಲಕ್ ಅಪ್ಪಾ.. ನೀವು ನನ್ನ ನಿಜವಾದ ಹೀರೋ.. ಎಂದು ಪತ್ರದಲ್ಲಿ ಬರೆದಿದ್ದಾರೆ.

ಅಂದ್ಹಾಗೆ ಅಯಾನ್ ಪುಷ್ಪ ಬಿಡುಗಡೆಗೂ ಮುನ್ನ ಅಂದರೆ ನಿನ್ನೆಯ ದಿನ ಅಪ್ಪನಿಗೆ ಪತ್ರ ಬರೆದಿದ್ದರು. ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ, ಪತ್ರ ಭಾರೀ ವೈರಲ್ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment