/newsfirstlive-kannada/media/post_attachments/wp-content/uploads/2024/12/ALLU_ARJUN_POLICE.jpg)
ಪುಷ್ಪ 2 ಯಶಸ್ಸನ್ನು ಪಡೆದು ಬಾಕ್ಸಾಫೀಸಿನಲ್ಲಿ ಸದ್ದನ್ನು ಮಾಡುತ್ತಿದ್ದರೆ, ಇನ್ನೊಂದು ಕಡೆ, ಕಾಲ್ತುಳಿತದ ಘಟನೆ ತೆಲುಗುಸೀಮೆಯಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನ ಹುಟ್ಟಿಹಾಕಿದೆ. ಸಂಧ್ಯಾ ಥಿಯೇಟರ್​ ಕಾಲ್ತುಳಿತ ಪ್ರಕರಣದಲ್ಲಿ ಬಿಗ್​ಟ್ವಿಸ್ಟ್​​ ಒಂದು ಸಿಕ್ಕಿದ್ದು, ಅಲ್ಲು ಅರ್ಜುನ್​ ಮತ್ತೊಂದು ಶಾಕ್ ಎದುರಾಗಿದೆ.
ಸಂಧ್ಯಾ ಥಿಯೇಟರ್​ ಕಾಲ್ತುಳಿತ ಪ್ರಕರಣದಲ್ಲಿ ಬಾಲಕ ಕೋಮಾದಲ್ಲಿದ್ದಾನೆ. ಇದೇ ಕೇಸ್​ನಲ್ಲಿ ಜೈಲು ಶಿಕ್ಷೆ ಆಗಿದೆ. ಇದರ ಜೊತೆ ಸರ್ಕಾರ ಆರೋಪದ ಮೇಲೆ ಆರೋಪ ಮಾಡುತ್ತಿದೆ. ಇದು ಅಲ್ಲದೇ ಅಲ್ಲು ಅರ್ಜುನ್ ಅವರ ಮನೆಗೆ ನುಗ್ಗಿ ದಾಂದಲೆ ಮಾಡಲಾಗಿದೆ. ಹೈದರಾಬಾದ್​ ಪೊಲೀಸರು ಸಿಸಿಟಿವಿ ವಿಡಿಯೋಗಳನ್ನು ರಿಲೀಸ್ ಮಾಡಿದ್ದಾರೆ. ಇದೆಲ್ಲೆದರ ನಡುವೆ ಐಕಾನ್ ಸ್ಟಾರ್​ಗೆ ಅಲ್ಲು ಅರ್ಜುನ್​ಗೆ ನೋಟಿಸ್ ನೀಡಲಾಗಿದ್ದು ಇವತ್ತು ಪೊಲೀಸರ ಮುಂದೆ ಹಾಜರಾಗಲೇಬೇಕಿದೆ.
ಪೊಲೀಸರಿಂದ ಪುಷ್ಪರಾಜ್​ಗೆ ಮತ್ತೆ ನೋಟಿಸ್!
ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್​ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಕೇಸ್​ನಲ್ಲಿ ಬಿಗ್​ಟ್ವಿಸ್ಟ್​​ ಎಂಬಂತೆ ಪುಷ್ಪರಾಜ್​ಗೆ ಖಾಕಿ ಮತ್ತೆ ಬಿಗ್ ಶಾಕ್ ಕೊಟ್ಟಿದೆ. ನಟ ಅಲ್ಲು ಅರ್ಜುನ್​​ಗೆ ಪೊಲೀಸರು ಮತ್ತೆ ನೋಟಿಸ್ ನೀಡಿದ್ದಾರೆ.
ನಟ ಅಲ್ಲು ಅರ್ಜುನ್​ ಮತ್ತು ಅವರ ಫ್ಯಾನ್ಸ್​ ಹೊರಾಟ ನಡೆಸುತ್ತಿದ್ರೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಕುಟುಂಬದ ಪರ ತೆಲಂಗಾಣ ಸಿಎಂ ಮತ್ತು ಸಚಿವರ ನಿಂತು ಫೈಟ್​ ಮಾಡುತ್ತಿದ್ದಾರೆ. ಈ ಇಬ್ಬರ ನಡುವಿನ ಸಮರ ಸದ್ಯ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಲ್ಲು ಅರ್ಜುನ್​ ಬೇಲ್​ ರದ್ದುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಲು ತಯಾರಿ ನಡೆಸಿದ್ದಾರೆ. ಇದೀಗ ಅಲ್ಲು ಅರ್ಜುನ್​ಗೆ ನೋಟಿಸ್ ಕಳುಹಿಸಿರುವುದು ಕುತೂಹಲ ಮೂಡಿಸಿದೆ.
‘ಬನ್ನಿ’ ವಿಚಾರಣೆಗೆ!
- ಸದ್ಯ 4 ವಾರಗಳ ಮಧ್ಯಂತರ ಬೇಲ್​​ ಮೇಲಿರುವ ಪುಷ್ಪ
- ಇಂದು ಬೆಳಗ್ಗೆ ವಿಚಾರಣೆಗೆ ಬರುವಂತೆ ಪೊಲೀಸರ ಸಮನ್ಸ್​​​
- ಅಲ್ಲು ಅರ್ಜುನ್‌ಗೆ ಚಿಕ್ಕಡಪಲ್ಲಿ ಪೊಲೀಸರಿಂದ ಬುಲಾವ್​​
- ಇಂದು ಬನ್ನಿ ಹೇಳಿಕೆ ದಾಖಲಿಸಿಕೊಳ್ಳಲಿರುವ ಪೊಲೀಸರು
- ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಘಟನೆ ಬಗ್ಗೆ ವಿವರಣೆ
ಪುಷ್ಪ 2 ಯಶಸ್ಸಿಗೆ ಖುಷಿ ಪಡಬೇಕಾ.. ಇಲ್ಲ ಸಿನಿಮಾ ರಿಲೀಸ್​ ಆದಾಗ ನಡೆದ ಕಾಲ್ತುಳಿತದ ಘಟನೆಗೆ ಮರುಕಾ ಪಡಬೇಕಾ? ಕೋರ್ಟ್ ಕೇಸ್ ಅಂತ ಅಲೆಯೋ ತರ ಆಯ್ತಲ್ಲ ಅಂತ ದುಃಖ ಪಡಬೇಕಾ ಅನ್ನೋದು ಪುಷ್ಪರಾಜ್​ಗೆ ದೊಡ್ಡ ಸವಾಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ