ಅಲ್ಲು ಅರ್ಜುನ್ to ಶ್ರೀಲಿಲಾ! ಪುಷ್ಪ 2 ಸಿನಿಮಾಗೆ ಯಾವ ನಟರು ಎಷ್ಟು ಕೋಟಿ ಸಂಭಾವನೆ ಪಡೆದರು?

author-image
Ganesh
Updated On
ಅಲ್ಲು ಅರ್ಜುನ್ to ಶ್ರೀಲಿಲಾ! ಪುಷ್ಪ 2 ಸಿನಿಮಾಗೆ ಯಾವ ನಟರು ಎಷ್ಟು ಕೋಟಿ ಸಂಭಾವನೆ ಪಡೆದರು?
Advertisment
  • ಡಿಸೆಂಬರ್ 5 ರಂದು ವಿಶ್ವದಾದ್ಯಂತ ಪುಷ್ಪ 2 ರಿಲೀಸ್
  • ‘ಪುಷ್ಪ 2 ದಿ ರೂಲ್’ ಸಿನಿಮಾಗೆ ಭಾರೀ ರೆಸ್ಪಾನ್ಸ್
  • ಮೊದಲ ದಿನವೇ 294 ಕೋಟಿ ಗಳಿಸಿರುವ ಚಿತ್ರ

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 ದಿ ರೂಲ್’ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸುಮಾರು 3 ಗಂಟೆ 25 ನಿಮಿಷದ ಈ ಚಿತ್ರ ಬ್ಲಾಕ್ ಬಸ್ಟರ್ ಟಾಕ್ ಆಗಿದೆ. ಬಿಡುಗಡೆಗೂ ಮುನ್ನವೇ ಪ್ರೀ ಬುಕ್ಕಿಂಗ್​ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಮೊದಲ ದಿನದ ಒಟ್ಟು ಕಲೆಕ್ಷನ್ 294 ಕೋಟಿ ಎಂದು ವರದಿಯಾಗಿದೆ. ಕೋಟಿ ಕೋಟಿ ಬಾಚುತ್ತಿರುವ ಈ ಸಿನಿಮಾವನ್ನು ಸುಮಾರು 400 ರಿಂದ 500 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ಸೌಂಡ್ ಮಾಡ್ತಿರುವ ಬೆನ್ನಲ್ಲೇ, ಚಿತ್ರಕ್ಕೆ ಯಾರು ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂಬ ಟಾಕ್ಸ್​ಗಳು ಶುರುವಾಗಿದೆ.

ಇದನ್ನೂ ಓದಿ:ಕಾಲ್ತುಳಿತ ದುರಂತಕ್ಕೆ ಮರುಗಿದ ಪುಷ್ಪರಾಜ್; ಜೀವ ಕಳೆದುಕೊಂಡ ಕುಟುಂಬಕ್ಕೆ ಎಷ್ಟು ಹಣ ಕೊಟ್ರು?

ವರದಿಗಳ ಪ್ರಕಾರ.. ಅಲ್ಲು ಅರ್ಜುನ್ 300 ಕೋಟಿ, ನಿರ್ದೇಶಕ ಸುಕುಮಾರನ್ 15 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ 10 ಕೋಟಿ ಪಡೆದರೆ, ಫಹಾದ್ ಫಾಜಿಲ್ 8 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್​ 5 ಕೋಟಿ ರೂಪಾಯಿ ಹಾಗೂ ಶ್ರೀಲೀಲಾಗೆ 2 ಕೋಟಿ ನೀಡಲಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 5 ರಂದು ವಿಶ್ವದಾದ್ಯಂತ ಪುಷ್ಪ 2 ಚಿತ್ರ ರಿಲೀಸ್ ಆಗಿದೆ.

ಇದನ್ನೂ ಓದಿ:ಪುಷ್ಪಾ-2 ನೋಡಲು ಹೋಗಿ ಮೂವರು ದುರಂತ ಅಂತ್ಯ; 25 ಲಕ್ಷ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment