/newsfirstlive-kannada/media/post_attachments/wp-content/uploads/2024/12/ALLU-ARJUN-HOUSE-1.jpg)
ಪುಷ್ಪ 2 ಚಿತ್ರದ ಪ್ರೀಮಿಯರ್​ ಶೋ ನೋಡಲು ಅಲ್ಲು ಅರ್ಜುನ್ ಬಂದಾಗ, ನೆಚ್ಚಿನ ಹೀರೋನನ್ನು ನೋಡುವ ಭರದಲ್ಲಿ ನೂಕು ನುಗ್ಗಲು ಉಂಟಾಗಿ ಜನರ ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯೊಬ್ಬರು ಉಸಿರು ಚೆಲ್ಲಿದ್ದು ನಿಮಗೆ ಗೊತ್ತೆ ಇದೆ. ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೊಡಲೇ ಬೇಕೆಂದು ಕೆಲ ಕಿಡಿಗೇಡಿಗಳು ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅತ್ತ ಪೊಲೀಸರು ಕೂಡ ಘಟನೆ ನಡೆದ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾರೆ.
ಸಂಧ್ಯಾ ಥಿಯೇಟರ್ ನೂಕುನುಗ್ಗಲು ಹಾಗೂ ಕಾಲ್ತುಳಿತದ ಘಟನೆ ಮತ್ತಷ್ಟು ಗಂಭೀರವಾಗಿದೆ. ತೆಲಂಗಾಣ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದೆಲ್ಲಾ ಬೆಳವಣಿಗೆಗಳ ನಡುವೆ ಹೈದರಾಬಾದ್​ ಪೊಲೀಸರು ಪ್ರೆಸ್ ಮಿಟ್​ ಮಾಡಿ ಅಲ್ಲು ಅರ್ಜುನ್​ ವಿರುದ್ಧ ಇರೋ ಆರೋಪಗಳಿಗೆ ಸಾಕ್ಷಿ ಎಂಬಂತೆ ಕೆಲ ಘಟನಾ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾರೆ. ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತನಗೆ ತಿಳಿಸಿಲ್ಲ ಎಂಬ ಅಲ್ಲಿ ಅರ್ಜುನ್ ಆರೋಪಕ್ಕೆ ಪೊಲೀಸರು ಉತ್ತರಕೊಟ್ಟಿದ್ದಾರೆ.
ಥಿಯೇಟರ್​ನಲ್ಲಿ ನೂಕುನುಗ್ಗಲು, ವಿಡಿಯೋ ರಿಲೀಸ್​!
ಸಂಧ್ಯಾ ಥಿಯೇಟರ್‌ಗೆ ಭೇಟಿ ಕೊಟ್ಟಿದ್ದ ಹೊತ್ತಲ್ಲಿ ಅಲ್ಲು ಅರ್ಜುನ್ ಪೊಲೀಸರ ಮಾತನ್ನೇ ಧಿಕ್ಕರಿಸಿರೋ ಆರೋಪಕ್ಕೆ ಪೊಲೀಸರು ಸಾಕ್ಷಿ ಕೊಟ್ಟಿದ್ದಾರೆ. ಅಂದು ಥಿಯೇಟರ್‌ನಲ್ಲಿ ಏನಾಯ್ತು ಎಂಬ ಬಗ್ಗೆ ತೆಲಂಗಾಣ ಪೊಲೀಸರು ವಿಡಿಯೋ ರಿಲೀಸ್ ಮಾಡಿ ಅಲ್ಲು ಅರ್ಜುನ್‌ಗೆ ಟಕ್ಕರ್ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಎಸಿಪಿ ರಮೇಶ್, ಸಿಐ ರಾಜು ನಾಯಕ್, ಆ ದಿನ ನಡೆದ ಘಟನೆಯನ್ನ ಸವಿಸ್ತಾರವಾಗಿ ವಿವರಿಸಿದ್ದಾರೆ. ನೂಕುನುಗ್ಗಲು ಘಟನೆಯ ಬಗ್ಗೆ ಅಲ್ಲು ಅರ್ಜುನ್‌ಗೆ ತಿಳಿಸಲು ಹೋದಾಗ ಅವರ ಮ್ಯಾನೇಜರ್ ತಡೆದಿದ್ರು. ಆದರೂ ಬಿಡದೆ ನಾವು ಅಲ್ಲು ಅರ್ಜುನ್‌ಗೆ ತಿಳಿಸಿದ್ದೇವು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪುಷ್ಪ 2 ಕಾಲ್ತುಳಿತ ಕೇಸ್.. ಸಿಎಂ ರೇವಂತ್ ರೆಡ್ಡಿ ಆರೋಪಕ್ಕೆ ಅಲ್ಲು ಅರ್ಜುನ್ ತಿರುಗೇಟು; ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/12/ALLU-ARJUN-HOUSE-2.jpg)
ಹೊರಗೆ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ, ಇನ್ನೊಬ್ಬ ಹುಡುಗ ಪ್ರಾಣಾಪಾಯದಲ್ಲಿದ್ದಾನೆ. ಆತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನೀವು ಸೆಲೆಬ್ರಿಟಿ, ನಮ್ಮ ಅಧಿಕಾರಿಗಳು ನಿಮಗೆ ದಾರಿ ಮಾಡಿದ್ದಾರೆ. ದಯಮಾಡಿ ನೀವು ಹೊರಡಿ ಅಂದ್ರೆ. ಸಿನಿಮಾ ನೋಡಿದ ನಂತರವಷ್ಟೇ ಹೊರಗೆ ಬರುತ್ತೇನೆ ಎಂದರು ಎಂದು ಚಿಕ್ಕಡಪಲ್ಲಿ ಎಸಿಪಿ ರಮೇಶ್ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/12/ALLU-ARJUN-HOUSE.jpg)
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ
ಇತ್ತ ಅಲ್ಲು ಅರ್ಜುನ್ ಅವರ ವಿರುದ್ಧ ಪ್ರಮುಖ ರಾಜಕಾರಣಿಗಳು ಕಿಡಿ ಕಾರುತ್ತಿದ್ದಾರೆ. ರೇವತಿ ಕುಟುಂಬಕ್ಕೆ ನ್ಯಾಯ ಬೇಕು ಎಂದು ಹೈದರಾಬಾದ್‌ನಲ್ಲಿರುವ ಅಲ್ಲು ಅರ್ಜುನ್ ಜೂಬ್ಲಿ ಹಿಲ್ಸ್‌ನ ನಿವಾಸಕ್ಕೆ ಉಸ್ಮಾನಿಯಾ ವಿವಿ ವಿದ್ಯಾರ್ಥಿಗಳು ಅಂತಾ ಹೇಳಿಕೊಂಡು ನುಗ್ಗಿ ಕಲ್ಲು ತೂರಾಟ ಮಾಡಿದ್ದಾರೆ. ಈ ಸಂಬಂಧ ಎಂಟು ಮಂದಿಯನ್ನ ಬಂಧಿಸಿದ್ದಾರೆ. ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಚೇರ್​ ಮೇಲೆ ಕೂತು ಮೊಬೈಲ್ ನೋಡ್ತಿರೋ ಫೋಟೋ ಸಖತ್​ ವೈರಲ್​ ಆಗಿದೆ.
ಇದನ್ನೂ ಓದಿ:ಅಂಬಾನಿ ಶಾಲೆಯಲ್ಲಿ ಕರೀನಾ, ಸೈಫ್ ಅಲಿ ಖಾನ್ ಪುತ್ರನ ವಿದ್ಯಾಭ್ಯಾಸ; ತಿಂಗಳಿಗೆ ಫೀಸ್ ಎಷ್ಟು ಲಕ್ಷ?
ನಾವು ಈಗ ಸಂಯಮದಿಂದ ವರ್ತಿಸುವ ಸಮಯ ಬಂದಿದೆ. ಈ ಸಮಯದಲ್ಲಿ ನಾವು ಪ್ರತಿಕ್ರಿಯಿಸಬಾರದು. ಪೊಲೀಸರು ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಿ ಕರೆದೊಯ್ದಿದ್ದಾರೆ. ಯಾರಾದರೂ ಮತ್ತೆ ಜಗಳಕ್ಕೆ ಬಂದರೆ ನಮ್ಮ ಮನೆಯಲ್ಲಿ ಪೊಲೀಸರು ರೆಡಿಯಾಗಿದ್ದಾರೆ ಎಂದು ನಿರ್ಮಾಪಕ ಅಲ್ಲು ಅರವಿಂದ್ ಹೇಳಿದ್ದಾರೆ.
ಅದೇನೆ ಇರಲಿ ಪುಷ್ಪ-2 ಸಿನಿಮಾ ಸಕ್ಸಸ್​ ಸಂಭ್ರಮಕ್ಕಿಂತ. ಅಲ್ಲು ಅರ್ಜುನ್​ ಮೇಲೆ ಬರುತ್ತಿರೋ ವಿವಾದಗಳೇ ಜಾಸ್ತಿ ಆಗಿ ಪರಿಣಾಮ ಬೀರುತ್ತಿದೆ. ರೇವತಿ ಕುಟುಂಬದ ಪರ ತೆಲಂಗಾಣ ಸರ್ಕಾರ ನಿಂತಿದ್ರೆ, ಇತ್ತ ಅಲ್ಲು ಅರ್ಜುನ್​ ಪರ ಅಭಿಮಾನಿಗಳು ಎಕ್ಸ್​ ವಾರ್​ ನಡೆಸುತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us