/newsfirstlive-kannada/media/post_attachments/wp-content/uploads/2024/11/PUSHPA-2-MOVIE.jpg)
ಪುಷ್ಪಾ ಮೊದಲ ಭಾಗ ಸೂಪರ್ ಡೂಪರ್ ಹಿಟ್ ಆದ ಬಳಿಕ ನಿರ್ದೇಶಕ ಸುಕುಮಾರ್ ಈಗ ಪುಷ್ಪಾ 2ನೇ ಭಾಗವನ್ನು ಸಿದ್ಧಗೊಳಿಸಿದ ಬಿಡಗಡೆಯ ದಿನಾಂಕವನ್ನು ಕೂಡ ನಿಗದಿ ಮಾಡಿದ್ದಾರೆ. ಬಹುನಿರೀಕ್ಷಿತ ಚಿತ್ರ ಪುಷ್ಪಾ 2 ಬರುವ ತಿಂಗಳು ಅಂದ್ರೆ ಡಿಸೆಂಬರ್ 5 ರಂದು ರಿಲೀಸ್ ಆಗಲಿದೆ. ಅಸಲಿಗೆ ಜನರಿಗೆ ಪುಷ್ಪಾ-2 ಮೂವಿ ಬಗ್ಗೆ ಎಷ್ಟು ಕುತೂಹಲವಿದೆಯೋ ಅಷ್ಟೇ ಕುತೂಹಲ ನಿರೀಕ್ಷೆ ಸಿನಿಮಾದ ನಿರ್ದೇಶಕ ಸುಕುಮಾರ್​ಗೂ ಇದೆ. ಈಗಾಗಲೇ ಪುಷ್ಪಾ ಸಿನಿಮಾ ಮೊದಲ ದಿನ ಇಷ್ಟು ಕೋಟಿ ಗಳಿಸಬೇಕು ಅಥವಾ ಗಳಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸುಕುಮಾರ್. ಇದರ ಮಧ್ಯೆಯೇ ಸದ್ಯ ಪುಷ್ಪಾ 2 ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ 270 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಭಾರತದಲ್ಲಿ ಮೊದಲ ದಿನವೇ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವಷ್ಟು ಭರ್ಜರಿ ಓಪನಿಂಗ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
ಇದನ್ನೂ ಓದಿ:ಸಲ್ಮಾನ್​ ಬೆನ್ನಲ್ಲೇ ನಟ ಶಾರುಖ್ ಖಾನ್‌ಗೆ ಕೊಲೆ ಬೆದರಿಕೆ; ಬರೋಬ್ಬರಿ 50 ಲಕ್ಷಕ್ಕೆ ಬೇಡಿಕೆ!
ಡಿಸೆಂಬರ್ , 2024ರಂದು ವಿಶ್ವಾದ್ಯಂತ ತೆರೆ ಕಾಣಲಿರುವ ಪುಷ್ಪಾ-2 ಸಿನಿಮಾ ಮೇಲೆ ಸಿನಿ ಪ್ರಿಯರಿಗೆ ವಿಪರೀತ ಎನಿಸುವಷ್ಟು ನಿರೀಕ್ಷೆಗಳಿವೆ. ಅದರಂತೆ ಸ್ಯಾಕ್​ನಿಲ್ಕ್​.ಕಾಮ್ ಪುಷ್ಪಾ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಮೊದಲ ದಿನ ಎಂಬುವುದರ ಪ್ರೊಜೆಕ್ಟ್​ವೊಂದನ್ನು ಮಾಡಿದೆ. ಭಾರತದಲ್ಲಿಯೇ ಅದರ ಮೊದಲ ದಿನದ ಗಳಿಕೆ ಹೇಗಿರಲಿದೆ ಎಂಬುದರ ಬಗ್ಗೆ ಒಂದು ಅಂದಾಜು ಮಾಡಲಾಗಿದೆ, ಅದರ ಪ್ರಕಾರ ಪುಷ್ಪಾ-2 ಮೊದಲ ದಿನ ಭಾರತದಲ್ಲಿ ಆಯಾ ರಾಜ್ಯಗಳಲ್ಲಿ ಎಷ್ಟು ಗಳಿಸಲಿದೆ ಎಂಬುದನ್ನು ಹೀಗೆ ಊಹಿಸಲಾಗಿದೆ.
ಆಂದ್ರಪ್ರದೇಶ/ತೆಲಂಗಾಣ -80 ಕೋಟಿ ರೂಪಾಯಿ
ಕರ್ನಾಟಕ -20 ಕೋಟಿ ರೂಪಾಯಿ
ತಮಿಳುನಾಡು -12 ಕೋಟಿ ರೂಪಾಯಿ
ಕೇರಳ -8ಕೋಟಿ ರೂಪಾಯಿ
ಉಳಿದಂತೆ ಇಡೀ ಭಾರತದಲ್ಲಿ -75 ಕೋಟಿ ರೂಪಾಯಿ
ಈ ಒಂದು ಊಹೆ ಮೊದಲ ದಿನವೇ ಭಾರತದಲ್ಲಿ ಪುಷ್ಪಾ-2 ಸಿನಿಮಾ 200 ಕೋಟಿಯಷ್ಟು ಗಳಿಸಲಿದೆ. ಸಾಗರದೋತ್ತರದ ದೇಶಗಳಲ್ಲಿ ಪುಷ್ಪಾ-2 ಸಿನಿಮಾ ಸುಮಾರು 70 ಕೋಟಿಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಮೊದಲ ದಿನವೇ ಪುಷ್ಪಾ-2 ಸಿನಿಮಾ 270 ಕೋಟಿ ರೂಪಾಯಿ ಗಳಿಕೆ ಮಾಡಿ ಹಳೆಯ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಲಿದೆ ಎಂಬ ಅಂದಾಜು ಸದ್ಯಕ್ಕಿದೆ.
ಪುಷ್ಪಾ ಸಿನಿಮಾ ಬರುವ ಸಮಯದಲ್ಲಿಯೇ ರಿಲೀಸ್ ಮಾಡಬೇಕೆಂದಿದ್ದ ಇತರ ಭಾಷೆಯ ಸಿನಿಮಾಗಳು ಅದರ ಅಬ್ಬರಕ್ಕೆ ತಮ್ಮ ದಿನಾಂಕವನ್ನು ಬದಲಿಸಿಕೊಂಡಿವೆ. ಬಾಲಿವುಡ್​ ನಟ ವಿಕ್ಕಿ ಕೌಶಾಲ್ ನಟನೆಯ ಛಾವಾ ಸಿನಿಮಾ ತನ್ನ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ. ಬಾಲಿವುಡ್​ನ ಸಿನಿಮಾಗಳೇ ಒಂದು ಹಂತಕ್ಕೆ ಭಯ ಬಿದ್ದಿವೆ ಅಂದ್ರೆ ಮೊದಲ ದಿನವೇ ಬಾಕ್ಸ್​ಆಫೀಸ್​ನಲ್ಲಿ ಸಿನಿಮಾ ದೊಡ್ಡ ದಾಖಲೆಯ ಗಳಿಕೆ ಮಾಡೋದು ಪಕ್ಕಾ ಅಂತಿದೆ ಸಿನಿ ಜಗತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us