Advertisment

ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ.. ಮಾವ ಪವನ್​ ಕಲ್ಯಾಣ್​ಗೆ ಐಕಾನ್​ ಸ್ಟಾರ್ ಡಿಚ್ಚಿ?

author-image
Bheemappa
Updated On
ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ.. ಮಾವ ಪವನ್​ ಕಲ್ಯಾಣ್​ಗೆ ಐಕಾನ್​ ಸ್ಟಾರ್ ಡಿಚ್ಚಿ?
Advertisment
  • ಮೆಗಾ ಫ್ಯಾಮಿಲಿ- ಅಲ್ಲು ಅರವಿಂದ್ ಫ್ಯಾಮಿಲಿ ಮಧ್ಯೆ ಏನ್ ನಡೆಯುತ್ತಿದೆ?
  • ಬಿಹಾರದಲ್ಲಿ ಪುಷ್ಪ ಟ್ರೈಲರ್​ ರಿಲೀಸ್​ ವೇಳೆ ಇವರನ್ನ ಭೇಟಿ ಮಾಡಿದ್ದರು
  • ಮಾವ ಪವನ್ ಕಲ್ಯಾಣ್​ ವಿರುದ್ಧ ತೊಡೆ ತಟ್ಟಲು ಅಲ್ಲು ಅರ್ಜುನ್ ರೆಡಿ?

ಪುಷ್ಪ 2 ಕೇವಲ 7 ದಿನಗಳಲ್ಲಿ ಭಾರತೀಯ ಚಿತ್ರರಂಗದ 4ನೇ ಅತಿದೊಡ್ಡ ಹಿಟ್ ಸಿನಿಮಾ ಎನ್ನುವ ದಾಖಲೆ ಬರೆದಿದೆ. ಅಲ್ಲು ಅರ್ಜುನ್ ಅವರ ಪುಷ್ಪ 2 ದಿ ರೂಲ್ ಬಾಕ್ಸ್ ಆಫೀಸ್ ಅಲ್ಲಿ ದರ್ಬಾರ್ ಮಾಡುತ್ತಿದೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್ ಪೊಲಿಟಿಕ್ಸ್​ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸೆನ್ಸೇಷನಲ್ ಸುದ್ದಿಯೊಂದು ಹೊರಬಿದ್ದಿದೆ.

Advertisment

ಐಕಾನ್ ಸ್ಟಾರ್ ಅಲ್ಲು ಅರ್ಜುನ್​ ಪುಷ್ಪ-2 ಸಿನಿಮಾದಲ್ಲಿ ಸಂಸದರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಯಾಕಂದ್ರೆ ಹೆಂಡತಿ ಕೇಳಿದಳು ಅಂತ ಸಿಎಂ ಬಳಿ ಫೋಟೋ ಕೇಳಿದ ಪುಷ್ಪಗೆ ಆಗಿದ್ದು ಅವಮಾನ. ಅಲ್ಲಿಂದ ಬರೋ ಪುಷ್ಪ ತನ್ನ ಎಂಪಿ ಫ್ರೆಂಡ್​ ಪವರ್​ ಉಪಯೋಗಿಸಿ ಸಿಎಂ ಮಾಡುವ ಆ ಸೀನ್​​ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ದು ಗೊತ್ತೇ ಇದೆ. ಆದ್ರೆ, ಅಸಲಿಗೆ ಅಲ್ಲು ಅರ್ಜುನ್​ ನಿಜ ಜೀವನದಲ್ಲಿ ಪಾಲಿಟಿಕ್ಸ್​​​ ಎಂಟ್ರಿಗೆ ಸಜ್ಜಾಗುತ್ತಿರುವ ಸುದ್ದಿ ತೆಲಗು ನಾಡಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ.

publive-image

ಹೊಸ ಪಕ್ಷ ಕಟ್ಟಿ ಆಂಧ್ರ ಪಾಲಿಟಿಕ್ಸ್​ಗೆ ಎಂಟ್ರಿ ಕೊಡ್ತಾನ ಪುಷ್ಪ?

ಇದೇ ಆರು ತಿಂಗಳ ಹಿಂದೆ ಹೆಂಡತಿ ಕೇಳಿದಳು ಅಂತ ಮಾವ ಪವನ್ ಕಲ್ಯಾಣ್​ರನ್ನ ಎದುರು ಹಾಕಿಕೊಂಡ ಅಲ್ಲು ಅರ್ಜುನ್​, ನಂದ್ಯಾಲ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಶಿಲ್ಪಾ ರವಿ ಪರ ಪ್ರಚಾರ ಮಾಡಿದರು. ಅಲ್ಲಿಂದ ಶುರುವಾದ ಅಲ್ಲು-ಪವನ್​ ಫ್ಯಾನ್ಸ್​ ಫೈಟ್​, ಈಗಲೂ ಮುಂದುವರಿದಿದೆ. ಈ ಮುನಿಸು ಪುಷ್ಪ-2 ರಿಲೀಸ್​ಗೂ ತಟ್ಟಿತ್ತು. ಇದನ್ನೆಲ್ಲ ಮೈಂಡ್​ನಲ್ಲಿ ಇಟ್ಟುಕೊಂಡಿದ್ದ ಅಲ್ಲು ಅರ್ಜುನ್​, ಸೆನ್ಸೇಷನಲ್ ಹೆಜ್ಜೆಯನ್ನ ಇಟ್ಟಿದ್ದಾರೆ ಎಂಬ ಸುದ್ದಿ ಆಂಧ್ರ ಸೀಮೆ ದಾಟಿ ಸದ್ಯ ಸಖತ್​ ಸದ್ದು ಮಾಡುತ್ತಿದೆ.

ಪವನ್ ಕಲ್ಯಾಣ್​ಗೆ ಪೈಪೋಟಿ.. ಪ್ರಶಾಂತ್ ಕಿಶೋರ್ ಭೇಟಿ?

ನಟ ಅಲ್ಲು ಅರ್ಜುನ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಅನ್ನೋ ಸುದ್ದಿ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್​ರನ್ನ ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿದೆ. ನಟ ಅಲ್ಲು ಅರ್ಜುನ್ ತನ್ನದೇ ಆದ ಪಕ್ಷವನ್ನ ಕಟ್ಟಿ ಆಂಧ್ರದಲ್ಲಿ ಹೊಸ ಅಲೆ ಸೃಷ್ಟಿಸುವ ಪ್ಲಾನ್​ನಲ್ಲಿದ್ದಾರೆ ಎನ್ನಲಾಗುತ್ತಿದೆ.

Advertisment

ರಾಜಕೀಯ ತಂತ್ರಜ್ಞ-ಪುಷ್ಪ ಭೇಟಿ!?

  • ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಪುಷ್ಪ-2 ಸಿನಿಮಾ ಕಾರ್ಯಕ್ರಮ
  • ಈ ಸಮಯದಲ್ಲಿ ಪ್ರಶಾಂತ್ ಕಿಶೋರ್ ಭೇಟಿ ನಡೆದ ವದಂತಿ
  • ಭೇಟಿ ವೇಳೆ ಅಲ್ಲು ಅರ್ಜುನ್​ಗೆ ಪ್ರಶಾಂತ್ ಕಿಶೋರ್ ಸಲಹೆ
  • ನೀವು ಹತ್ತು ವರ್ಷಗಳ ಕಾಲ ಸಮಾಜಮುಖಿ ಕೆಲಸ ಮಾಡಿ
  • ನಂತರವೇ ರಾಜಕೀಯದಲ್ಲಿ ಮಿಂಚಲು ಅವಕಾಶ ಸಿಗುತ್ತದೆ
  • ಶೀಘ್ರದಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪಿಸಲಿದ್ದಾರೆ ಎಂಬ ಗುಸುಗುಸು

ಇದೇ ವೇಳೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್​​ಗೆ ಪೈಪೋಟಿ ನೀಡಲು ಅಲ್ಲು ಅರ್ಜುನ್ ಮಾಸ್ಟರ್ ಪ್ಲಾನ್ ಮಾಡುತ್ತಿರುವ ಬಗ್ಗೆ ಅಲ್ಲು ಅರ್ಜುನ್ ತಂಡ ಸ್ಪಷ್ಟನೆ ನೀಡಿದೆ. ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಜಸ್ಟ್​​ ರೂಮರ್ಸ್​ ಅಂತ ತಳ್ಳಿ ಹಾಕಿದೆ. ಅಲ್ಲು ಅರ್ಜುನ್ ಕುರಿತ ಅಪ್ಡೇಟ್ ಪಡೆಯಲು ದಯವಿಟ್ಟು ಅಧಿಕೃತ ಪ್ರಕಟಣೆಗಳಿಗಾಗಿ ಕಾಯಿರಿ ಎಂದಿದ್ದಾರೆ.

ಇದನ್ನೂ ಓದಿ: ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಅಬ್ಬರ, ವಿದರ್ಭ ವಿಲವಿಲ.. ಸೆಮಿಸ್​​ಗೆ ಕಾಲಿಟ್ಟ ಮುಂಬೈ

Advertisment

publive-image

ತಮಿಳುನಾಡು, ಆಂಧ್ರದಲ್ಲಿ ನಟರಾಗಿದ್ದುಕೊಂಡು, ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟು ರಾಜ್ಯವಾಳಿದ ಇತಿಹಾಸವೇ ಇದೆ. ಎನ್​ಟಿಆರ್​​, ಎಂಜಿಆರ್​, ಜಯಲಲಿತಾ, ಕರುಣಾನಿಧಿ ದಕ್ಷಿಣದಲ್ಲಿ ಪತಾಕೆ ಹಾರಿಸಿದವರು. ಆ ಬಳಿಕ ಮುಂದುವರಿದ ಸಂಪ್ರದಾಯ ಅಲ್ಪ ಯಶಸ್ಸು ಕಂಡಿದ್ದು ತಮಿಳುನಾಡಲ್ಲಿ ವಿಜಯ್​ಕಾಂತ್.

ಆದ್ರೆ, ಬಿಗ್ ಸ್ಟಾರ್​ಗಳಾದ ರಜನಿಕಾಂತ್, ಕಮಲ್ ಹಾಸನ್​ ಮತ್ತು ಚಿರಂಜೀವಿ ಸಿನಿಮಾ ಕ್ರೇಜ್​​, ಪಾಲಿಟಿಕ್ಸ್​​ನಲ್ಲಿ ಛಾಪೋತ್ತಲು ಸಾಧ್ಯವಾಗಲಿಲ್ಲ. ಸದ್ಯ ಕಳೆದ ತಿಂಗಳಷ್ಟೇ ತಳಪತಿ ವಿಜಯ್​ ಸ್ಥಾಪಿಸಿದ ಹೊಸ ಸದ್ದು ಗದ್ದಲ ಎಬ್ಬಿಸಿದೆ. ಆಂಧ್ರ ನೆಲದಲ್ಲಿ ಪವನ್​ ಕಲ್ಯಾಣ್​ ಡಿಸಿಎಂ ಆಗಿದ್ದಾರೆ. ಬಾಲಯ್ಯ ಮೊದಲಿನಿಂದಲೂ ರಾಜಕೀಯದಲ್ಲಿ ಇದ್ದಾರೆ. ಸದ್ಯ ಅಲ್ಲು ಅರ್ಜುನ್​​​ ಇದೇ ಹಾದಿಯಲ್ಲೇ ಸಾಗುತ್ತಾರಾ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment