/newsfirstlive-kannada/media/post_attachments/wp-content/uploads/2024/06/Akmatti-dam.jpg)
ಕಳೆದ ಎರಡು ತಿಂಗಳಿನಿಂದ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಇದೀಗ ಜೀವ ಕಳೆ ಬಂದಿದೆ. ಕುಡಿಯಲು ನೀರಿಲ್ಲ, ಬೆಳೆದ ಬೆಳೆಯೂ ಕೂಡ ಹಾಳಾಗಿದ್ದು ಗಡಿ ಭಾಗದ ಜನರು ನೀರಿಗಾಗಿ ಪರತಪ್ಪಿಸುತ್ತಿದ್ದರು. ಸದ್ಯ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿರುವ ಪರಿಣಾಮ ಕೃಷ್ಣಾ ತೀರದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. KRS ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟಿದೆ?
ಕಳೆದ ನಾಲ್ಕೈದು ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಪರಿಣಾಮ ಸುಮಾರು ಆರು ಅಡಿಯಷ್ಟು ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿದೆ. ಹೀಗಾಗಿ, ರೈತರು ನದಿಗೆ ಅಳವಡಿಸಿದ್ದ ಪಂಪ್​ಸೆಟ್​ಗಳನ್ನ ತೆರುವುಗೊಳಿಸ್ತಿದ್ದಾರೆ. ಮಳೆ ನೀರು ಹರಿದು ಬರ್ತಿರೋದ್ರಿಂದ ಕೃಷ್ಣಾ ನದಿಗೆ ಜೀವಕಳೆ ಬಂದಾತ್ತಾಗಿದೆ.
/newsfirstlive-kannada/media/post_attachments/wp-content/uploads/2024/06/Almatti-dam.webp)
ಇದನ್ನೂ ಓದಿ: ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ! ಅಷ್ಟಕ್ಕೂ ಸಾಯೋ ನಿರ್ಧಾರ ಮಾಡಿದ್ಯಾಕೆ?
ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಕೂಡ ತುಂಬುತ್ತಿದೆ. ಅಂದಹಾಗೆಯೇ ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿರುವುದು ರೈತರಿಗೆ ಇನ್ನಿಲ್ಲದ ಸಂತೋಷವಾಗಿದೆ. ನೀರಿನ ರಭಸ ಜೋರಾಗಿರುವುದರಿಂದ ಬಿಜಾಪುರ ಜಿಲ್ಲಾಧಿಕಾರಿ ಜನರಿಗೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ- 519.60
ಇಂದಿನ ನೀರಿನ ಮಟ್ಟ- 508.07
ಒಳಹರಿವು- (+)3879
ಹೊರ ಹರಿವು- 430
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us