newsfirstkannada.com

ರಾಜ್ಯಸಭಾ ಚುನಾವಣೆ.. ಸೋನಿಯಾಗಾಂಧಿ ಸೇರಿ ಬಿಜೆಪಿ ಇಬ್ಬರು ನಾಯಕರು ಅವಿರೋಧ ಆಯ್ಕೆ

Share :

Published February 20, 2024 at 5:18pm

    ರಾಜ್ಯಸಭೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಸೋನಿಯಾಗಾಂಧಿ

    ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕಾಲಾವಧಿ ಅಂತ್ಯ

    ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಐದು ಅಭ್ಯರ್ಥಿಗಳು ಕಣದಲ್ಲಿ

ನವದೆಹಲಿ: ಇದೇ ಫೆಬ್ರವರಿ 27ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕಾಲಾವಧಿ ಮುಕ್ತಾಯವಾಗಿದೆ. ಅಂತಿಮವಾಗಿ ಪ್ರತಿಸ್ಪರ್ಧಿಗಳಿಲ್ಲದ ಸ್ಥಾನಗಳಲ್ಲಿ ಘಟಾನುಘಟಿ ನಾಯಕರ ಅವಿರೋಧ ಆಯ್ಕೆ ಆಗಿದೆ.

ರಾಜ್ಯಸಭೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಸೋನಿಯಾಗಾಂಧಿ ಅವರು ರಾಜಸ್ಥಾನದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋನಿಯಾಗಾಂಧಿ ಅವರು 5 ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಉತ್ತರ ಪ್ರದೇಶದ ಅಮೇಥಿ, ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಸೋನಿಯಾ ಗಾಂಧಿ ಅವರು ಈ ಬಾರಿ ರಾಜ್ಯಸಭಾ ಚುನಾವಣೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಾಯಕಿಯ ಜೊತೆಗೆ ಬಿಜೆಪಿಯ ಚುನ್ನಿಲಾಲ್ ಗರಾಸಿಯಾ ಮತ್ತು ಮದನ್ ರಾಥೋಡ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​​ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ಬರೋಬ್ಬರಿ ₹77,000 ಕೋಟಿ ಹೂಡಿಕೆ; ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಜಿದ್ದಾಜಿದ್ದಿನ ಕದನ!
ಕರ್ನಾಟಕ ರಾಜ್ಯಸಭೆ ಚುನಾವಣಾ ಅಖಾಡ ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ. ಅಂತಿಮವಾಗಿ ಐದು ಅಭ್ಯರ್ಥಿಗಳು ಕಣದಲ್ಲಿದ್ದು, ಫೆಬ್ರವರಿ 27ರಂದು ನಾಲ್ಕು ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ಅಜಯ್ ಮಕನ್, ಜೆ.ಸಿ ಚಂದ್ರಶೇಖರ್, ಸೈಯದ್ ನಾಸೀರ್ ಹುಸೇನ್ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಅವರು ಅಖಾಡದಲ್ಲಿದ್ದಾರೆ. ಇನ್ನು, 5ನೇ ಅಭ್ಯರ್ಥಿಯಾಗಿ ಜೆಡಿಎಸ್‌, ಬಿಜೆಪಿ ಮೈತ್ರಿ ಪಕ್ಷದಿಂದ ಡಿ.ಕುಪೇಂದ್ರ ರೆಡ್ಡಿ‌ ಅವರು ಕಣದಲ್ಲಿದ್ದು, ಅಡ್ಡ ಮತದಾನದ ಭೀತಿ ಮೂರು ಪಕ್ಷಗಳಲ್ಲೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಸಭಾ ಚುನಾವಣೆ.. ಸೋನಿಯಾಗಾಂಧಿ ಸೇರಿ ಬಿಜೆಪಿ ಇಬ್ಬರು ನಾಯಕರು ಅವಿರೋಧ ಆಯ್ಕೆ

https://newsfirstlive.com/wp-content/uploads/2023/09/Sonia-Gandhi.jpg

Load More