Advertisment

ಬರೋಬ್ಬರಿ 2,600 ಲೀಟರ್ ಎದೆಹಾಲು ದಾನ ಮಾಡಿದ ಮಹಾತಾಯಿ; ಗಿನ್ನೀಸ್​​​ ರೆಕಾರ್ಡ್​​!

author-image
Veena Gangani
Updated On
ಬರೋಬ್ಬರಿ 2,600 ಲೀಟರ್ ಎದೆಹಾಲು ದಾನ ಮಾಡಿದ ಮಹಾತಾಯಿ; ಗಿನ್ನೀಸ್​​​ ರೆಕಾರ್ಡ್​​!
Advertisment
  • ಈ ತಾಯಿ ಮಕ್ಕಳಿಗಾಗಿ ಸಂಗ್ರಹಿಸಿದ ಎದೆಹಾಲು ಪ್ರಾಮಾಣ ಎಷ್ಟು?
  • ಎದೆಹಾಲು ದಾನ ಮಾಡುವ ಬಗ್ಗೆ ಮಹಿಳೆ ಅಲಿಸ್ಸಾ ಒಗ್ಲೆಟ್ರೀ ಹೇಳಿದ್ದೇನು?
  • ತನ್ನ ದಾಖಲೆಯನ್ನು ಮುರಿದು ಮತ್ತೊಮ್ಮೆ ವಿಶ್ವ ದಾಖಲೆ ಮಾಡಿದ ತಾಯಿ

ಇತ್ತೀಚೆಗೆ ತನ್ನ ಎದೆ ಹಾಲನ್ನೇ ತನ್ನ ಮಕ್ಕಳಿಗೆ ನೀಡದ ಈ ಕಾಲದಲ್ಲಿ 'ವಿಶ್ವದಲ್ಲೇ ಅತಿ ದೊಡ್ಡ ಎದೆಹಾಲು ದಾನಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ಮಹಾತಾಯಿ. ಅಮೆರಿಕದ ಟೆಕ್ಸಾಸ್‌ನ ನಿವಾಸಿ ಅಲಿಸ್ಸಾ ಒಗ್ಲೆಟ್ರೀ, 2,645.58 ಲೀಟರ್ ಎದೆಹಾಲನ್ನು ಅಗತ್ಯವಿರುವವರಿಗೆ ನೀಡಿ ಮಾನವೀಯತೆ ಮರೆದಿದ್ದಾರೆ. ಅಲ್ಲದೆ ಈ ತಾಯಿಯ ಸಾಧನೆಗೆ ಗಿನ್ನಿಸ್ ಅವಾರ್ಡ್​ ಕೂಡ ಬಂದಿದೆ.

Advertisment

ಇದನ್ನೂ ಓದಿ:BBK11: ಐಶ್ವರ್ಯ VS ಗೋಲ್ಡ್ ಸುರೇಶ್ ಮಧ್ಯೆ ಬಿಗ್​ ಫೈಟ್; ತುತ್ತು ಅನ್ನಕ್ಕೆ ಇಷ್ಟೊಂದು ಮಾತುಗಳು ಬೇಕಿತ್ತಾ?

publive-image

ಹೌದು, ಗಿನ್ನೆಸ್ ವಿಶ್ವದಾಖಲೆ ವೆಬ್‌ಸೈಟ್ ನೀಡಿದ ಮಾಹಿತಿಯ ಪ್ರಕಾರ, 36 ವರ್ಷದ ಅಲಿಸ್ಸಾ ಒಗ್ಲೆಟ್ರೀ ಅವರು ಈ ಹಿಂದೆ 2014ರಲ್ಲಿ 1,569.79 ಲೀಟರ್ ಎದೆಹಾಲು ದಾನ ಮಾಡಿ ವಿಶ್ವ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಒಂದು ಲೀಟರ್ ಎದೆಹಾಲು ಹುಟ್ಟಿದ ಮಕ್ಕಳ ಬದುಕಿಗೆ ದಾನ ಮಾಡಿದ್ದಾಳೆ. ಇದೇ ದಾನದಿಂದಾಗಿ 3,50,000 ಮಕ್ಕಳಿಗೆ ಅನುಕೂಲವಾಗಿದೆ. ಇನ್ನೂ ಅಲಿಸ್ಸಾ ಒಗ್ಲೆಟ್ರೀ ಅವರಿಗೆ ಈಗಾಗಲೇ ನಾಲ್ವರು ಮಕ್ಕಳಿದ್ದಾರೆ. ತಮ್ಮ ಮಕ್ಕಳು ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ ಬಳಿಕ ಅವರು ಎದೆಹಾಲು ದಾನ ಮಾಡುವುದನ್ನು ಮುಂದುವರೆಸಿದ್ದಾರಂತೆ.

publive-image

ಇತ್ತೀಚಿನ ಅವರ ಸಂದರ್ಶನವೊಂದರಲ್ಲಿ ಮಾತಾಡಿದ ಅವರು, ಸಂಕಷ್ಟದಲ್ಲಿರುವ ಜನರಿಗೆ ಪದೇ ಪದೇ ಹಣ ನೀಡಿ ಸಹಾಯ ಮಾಡಲು ಅಷ್ಟೊಂದು ಹಣ ನನ್ನ ಹತ್ತಿರ ಇಲ್ಲ. ನಾನು ನನ್ನ ಕುಟುಂಬವನ್ನು ಸಾಕಾಬೇಕಿದೆ. ಹೀಗಾಗಿ ಎದೆಹಾಲನ್ನು ದಾನ ಮಾಡುವ ಮೂಲಕ ಸಹಾಯ ಮಾಡಬಲ್ಲೆ ಅಂತ ಹೇಳಿದ್ದಾರೆ.

Advertisment

publive-image

ಇದನ್ನೂ ಓದಿ: ಬೆಚ್ಚಿಬಿದ್ದ ಕಾರವಾರ! ಗೂಢಚಾರಿಕೆ ಅನುಮಾನ.. ಕಾಲಿನಲ್ಲಿ ಡಿವೈಸ್ ಹೊಂದಿದ್ದ ರಣಹದ್ದಿನ ಜಾತಕ ಬಯಲು..!

ಹೀಗೆ ಮಾತನ್ನು ಮುಂದುವರೆಸಿದ ಅವರು, ನಾನು ಪ್ರತಿ 3 ಗಂಟೆಗೊಮ್ಮೆ ಎದೆಹಾಲು ಪಂಪ್ ಮಾಡುತ್ತೇನೆ. 15-30 ನಿಮಿಷಗಳ ಕಾಲ ಮಧ್ಯರಾತ್ರಿಯ ಬಳಿಕವೂ ಪಂಪ್ ಮಾಡುತ್ತೇನೆ. ಹೀಗೆ ಮಾಡಿದ ಬಳಿಕ ನನ್ನ ಫ್ರೀಜರ್ ತಂಬುವವರೆಗೂ ಎದೆಹಾಲನ್ನು ಸಂಗ್ರಹಿಸುತ್ತೇನೆ. ನಂತರ ಅದನ್ನು ಮಿಲ್ಕ್ ಬ್ಯಾಂಕ್‌ಗೆ ಕೊಂಡೊಯ್ಯುತ್ತೇನೆ. ಅಲ್ಲಿ ಅವರು ವಿಶೇಷ ಮಾಪನದಲ್ಲಿ ಎದೆಹಾಲಿನ ಲೆಕ್ಕ ಹಾಕುತ್ತಾರೆ. ನಾನು ಈವರೆಗೆ 350,000 ಮಕ್ಕಳಿಗೆ ಎದೆಹಾಲು ನೀಡಿ ಸಹಾಯ ಮಾಡಿದ್ದೇನೆ. ನಾನು ಹೆಚ್ಚೆಚ್ಚು ನೀರು ಕುಡಿಯುತ್ತಾ ಇರುತ್ತೇನೆ. ಹೀಗಾಗಿ ಪಂಪಿಂಗ್‌ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದೇನೆ. ಉತ್ತಮ ಆಹಾರ ಸೇವಿಸುತ್ತೇನೆ.ನನ್ನಿಂದ ಅನೇಕ ಮಕ್ಕಳಿಗೆ ಸಹಾಯವಾಗುತ್ತಿದೆ ಎನ್ನುವುದೇ ನನ್ನ ಕೆಲಸಕ್ಕೆ ಪ್ರೇರಣೆ ಅಂತ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment