/newsfirstlive-kannada/media/post_attachments/wp-content/uploads/2024/09/Goutham-Gambhir.jpg)
ನ್ಯೂ ಇಯರ್ ಬಂದಾಯ್ತು. ನ್ಯೂ ರೆಸಲ್ಯೂಷನ್ಸ್​ ಭರಾಟೆಯೂ ಜೋರಾಯ್ತು. ಈ ವಿಚಾರದಲ್ಲಿ ಟೀಮ್ ಇಂಡಿಯಾನೂ ಹೊರತಾಗಿಲ್ಲ. ಇತ್ತೀಚಿನ ಫಲಿತಾಂಶಗಳಿಂದ ಬೇಸರವಾಗಿರೋ ಬಿಗ್​ಬಾಸ್​ಗಳು, ಟೀಮ್ ಇಂಡಿಯಾದ ಒಳಿತಿಗಾಗಿ ಬಿಗ್​ ಡಿಸಿಶನ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆಯಾದರೆ ನ್ಯೂ ಸ್ಪೆಷಲಿಸ್ಟ್ ಕೋಚ್ ಟೀಮ್ ಇಂಡಿಯಾಗೆ ಬರ್ತಾರೆ.
ಹೆಡ್ ಕೋಚ್ ಗೌತಮ್ ಗಂಭೀರ್, ಕೋಚಿಂಗ್​​ನಲ್ಲಿ ಟೀಮ್ ಇಂಡಿಯಾ ಟೆಸ್ಟ್​ ತಂಡ ಕಳೆದ 6 ತಿಂಗಳಲ್ಲಿ ನೀಡಿರೋ ಪ್ರದರ್ಶನ. ಬಾಂಗ್ಲಾ ಎದುರಿನ ಟೆಸ್ಟ್​ ಸರಣಿಯಲ್ಲಿ ಅಬ್ಬರಿಸಿದ್ದು ಬಿಟ್ರೆ, ನ್ಯೂಜಿಲೆಂಡ್ ಎದುರು ಹೀನಾಯ ಸೋಲು.. ಆಸ್ಟ್ರೇಲಿಯಾ ಎದುರು ಪರದಾಟ ನಡೆಸಿದೆ. ಆಸ್ಟ್ರೇಲಿಯಾದಲ್ಲಿ ಅದೇ ಸೋಲಿನ ಸುಳಿಯಲ್ಲಿರುವ ಟೀಮ್ ಇಂಡಿಯಾ, ಮತ್ತೊಂದು ಸರಣಿ ಕೈಚೆಲ್ಲುವ ಭೀತಿಯಲ್ಲಿದೆ. ಹೀಗಾಗಿ ಬಿಸಿಸಿಐನ ಬಿಗ್​ಬಾಸ್​ಗಳು, ನ್ಯೂ ರೆಸಲ್ಯೂಷನ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದೇ ನ್ಯೂ ಸ್ಪೆಷಲಿಸ್ಟ್ ಕೋಚ್.
ಟೆಸ್ಟ್​​​ ಕ್ರಿಕೆಟ್​​ಗೆ ಟೀಮ್ ಇಂಡಿಯಾಗೆ ಹೊಸ ಕೋಚ್
ವೈಟ್​ಬಾಲ್​ಗೆ ಹೋಲಿಸಿದ್ರೆ ಟೆಸ್ಟ್​ನಲ್ಲಿ ಟೀಮ್ ಇಂಡಿಯಾದ ಪರ್ಫಾಮೆನ್ಸ್​ ಹೀನಾಯ ಸ್ಥಿತಿಗೆ ತಲುಪಿದೆ. ವಿದೇಶದಲ್ಲೇ ಅಲ್ಲ. ತವರಿನಲ್ಲೂ ಸಾಲು ಸಾಲು ಸೋಲುಗಳನ್ನು ಕಾಣ್ತಿದೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಆಟಗಾರರ ಪ್ರದರ್ಶನವೂ ಕಳೆಮಟ್ಟಕ್ಕೆ ಕುಸಿದಿದೆ. ಈ ಕಾರಣಕ್ಕಾಗಿಯೇ ಬಿಸಿಸಿಐ ಬಿಗ್​ಬಾಸ್​ಗಳು ರೆಡ್​ ಬಾಲ್​​ ಫಾರ್ಮೆಟ್​ಗೆ ಸ್ಪೆಷಲಿಸ್ಟ್ ಕೋಚ್ ನೇಮಿಸಲು ಮುಂದಾಗಿದ್ದಾರೆ.
ಗಂಭೀರ್​​ ಮೇಲೆ ಒತ್ತಡ ಕಡಿಮೆ ಮಾಡಲು ಪ್ಲಾನ್
ಪ್ರತ್ಯೇಕ ರೆಡ್​ ಬಾಲ್ ಕೋಚ್ ನೇಮಕದ ಹಿಂದೆ ಗೌತಮ್ ಗಂಭೀರ್​​ ಮೇಲಿನ ಒತ್ತಡ ಕಡಿತಗೊಳಿಸುವ ಲೆಕ್ಕಾಚಾರವಿದೆ. ಟಿ20 ಫಾರ್ಮೆಟ್​ನಲ್ಲಿ ಹೊರತು ಪಡೆಸಿದ್ರೆ, ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಕಂಪ್ಲೀಟ್ ಫೇಲ್ಯೂರ್ ಆಗಿದ್ದಾರೆ. ಆಟಗಾರನಾಗಿ ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಸಕ್ಸಸ್ ಕಾಣದ ಗಂಭೀರ್​​, ಟೆಸ್ಟ್​ ಕ್ರಿಕೆಟ್​​ನಲ್ಲಿ ತಂಡವನ್ನು ಸಮರ್ಥವಾಗಿ ಕೋಚ್ ಮಾಡ್ತಾರೆ ಅನ್ನೋ ನಂಬಿಕೆ ಬಿಸಿಸಿಐಗೆ ಬಂದಂತಿಲ್ಲ. ಈ ಕಾರಣಕ್ಕೆ ಗಂಭೀರ್​ನ ವೈಟ್​ ಬಾಲ್​​ಗೆ ಸಿಮೀತಗೊಳಿಸಿದ್ರೆ, ಬೆಸ್ಟ್​ ಅನ್ನೋ ಲೆಕ್ಕಾಚಾರ ಬಿಗ್​​ಬಾಸ್​ಗಳದ್ದಾಗಿದೆ.
ಇದನ್ನೂ ಓದಿ:181 ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಬಂದರು.. ಇವರ ಜೀವ ಉಳಿಯಲು ನಿಗೂಢ ಕಾರಣ ಏನು?
ವಿದೇಶಿ, ದೇಶಿ ಕೋಚ್ ವಿಚಾರವಾಗಿ ​ಬಾಸ್​ಗಳಿಗೆ ಗೊಂದಲ
ಪ್ರತ್ಯೇಕ ಕೋಚ್ ಬಗ್ಗೆ ಇಷ್ಟು ದಿನ ನೋ ಅಂತಿದ್ದ ಬಿಸಿಸಿಐ, ಈಗ ಪ್ರತ್ಯೇಕ ಫಾರ್ಮೆಟ್​​ಗೆ ಪ್ರತ್ಯೇಕ ಕೋಚ್​ ನೇಮಕಕ್ಕೆ ಒಲವು ತೋರುತ್ತಿದೆ. ಇದಕ್ಕಾಗಿ ಈಗಾಗಲೇ ಹುಡುಕಾಟವನ್ನು ನಡೆಸ್ತಿದೆ. ಇದೀಗ ಕೋಚ್​ ಹುದ್ದೆಗೆ ದೇಶಿ ಕೋಚ್​ನ ಕರೆತರೋದಾ? ಅಥವಾ ವಿದೇಶಿ ಕೋಚ್​​ಗೆ ಮಣೆ ಹಾಕೋದಾ? ಅನ್ನೋ ಗೊಂದಲ ಶುರುವಾಗಿದೆ.
ವಿವಿಎಸ್ ಲಕ್ಷ್ಮಣ್​ಗೆ ಟೆಸ್ಟ್​ ಕೋಚ್​ ಆಗಿ ಪಟ್ಟಾಭಿಷೇಕ?
ಎನ್​ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್, ಟೆಸ್ಟ್ ಸ್ಪೆಷಲಿಸ್ಟ್​.. ಮುಖ್ಯ ಕೋಚ್​ಗಳ ಅಲಭ್ಯತೆಯಲ್ಲಿ ಕೆಲ ಸರಣಿಗಳಲ್ಲಿ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿರುವ ವಿವಿಎಸ್​​ ಲಕ್ಷ್ಮಣ್​ಗೆ, ಟೆಸ್ಟ್​ ಕ್ರಿಕೆಟ್​​ ಬಗ್ಗೆ ಅಪಾರ ಜ್ಞಾನ ಇದೆ. ಇಂಡಿಯನ್ ಕಂಡೀಷನ್ಸ್​ ಹೊರತಾಗಿ ವಿದೇಶಿ ಕಂಡೀಷನ್ಸ್​ ಬಗ್ಗೆಯೂ ಚೆನ್ನಾಗಿ ಅರಿತಿದ್ದಾರೆ. ಅನುಭವದ ಲೆಕ್ಕಾಚಾರದಲ್ಲಿ ವಿವಿಎಸ್ ಲಕ್ಷ್ಮಣ್​​​, ಟೆಸ್ಟ್​ ಕೋಚಾದ್ರೆ ಉತ್ತಮ. ಬಿಸಿಸಿಐ ಬಿಗ್​​ಬಾಸ್​​ಗಳ ಆಯ್ಕೆ ಏನು ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ:Happy new year! ಚಿನ್ನ, ಬೆಳ್ಳಿ ಖರೀದಿಸೋರಿಗೆ ಗೋಲ್ಡನ್​ ನ್ಯೂಸ್.. ಬೆಲೆಯಲ್ಲಿ ಭಾರೀ ಇಳಿಕೆ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us