newsfirstkannada.com

ಅಮನ್​​ಗೂ ಕಾಡಿತ್ತು ತೂಕ! 10 ಗಂಟೆಯಲ್ಲಿ 4kg ಕರಗಿಸಿದ ‘ಕಂಚಿನ’ ಕುವರ

Share :

Published August 10, 2024 at 12:30pm

    ಭಾರತಕ್ಕೆ 5ನೇ ಕಂಚು ತಂದು ಕೊಟ್ಟ ಅಮನ್​ ಸೆಹ್ರಾವತ್

    4 ಕೆ.ಜಿ ಹೆಚ್ಚುವರಿ ತೂಕ.. ಕರಗಿಸಲು ಹೋರಾಡಿದ ಕತೆ ಅಷ್ಟಿಷ್ಟಲ್ಲ

    ಬಿಸಿ ನೀರಿನ ಸ್ನಾನ, ವರ್ಕೌಟ್​, ಓಟ, ನಿದ್ದೆಗೆಟ್ಟರು ಕಡಿಮೆಯಾಗಿರಲಿಲ್ಲ ತೂಕ!

ಬರೀ 100 ಗ್ರಾಂ ಹೆಚ್ಚುವರಿಯ ಕಾರಣ ಮಹಿಳಾ ಕುಸ್ತಿಪಟು ವಿನೇಶ್​ ಪೋಗಾಟ್​ ಫೈನಲ್​ ಪಂದ್ಯದಿಂದ​ ಹೊರ ಬಿದ್ದ ಸಂಗತಿ ಭಾರತೀಯರಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟರ ಮಟ್ಟಿಗೆ ಆ ಸಂಗತಿ ನೋವು ನೀಡಿತ್ತು. ರಾತ್ರಿ ಪೂರ್ತಿ ನಿದ್ದೆಗೆಟ್ಟು ವರ್ಕೌಟ್​ ಮಾಡಿದರೂ ತೂಕ ಕಡಿಮೆಯಾಗದೆ ಒಲಿಂಪಿಕ್ಸ್​ನಿಂದ ಅನರ್ಹಗೊಂಡರು. ಆದರೆ ಇದೇ ಭಯ ಕೂಡ ಅಮನ್​ ಸೆಹ್ರಾವತ್​ಗೆ ಆಗಿತ್ತು ಅಂದ್ರೆ ನಂಬ್ತಿರಾ?.

ಅಮನ್​ ಸೆಹ್ರಾವತ್​. 21 ವರ್ಷದ ಭಾರತದ ಅತ್ಯಂತ ಕಿರಿಯ ಅಥ್ಲೀಟ್​​ ಆಗಿ ಗುರುತಿಸಿಕೊಂಡಿದ್ದು, ನಿನ್ನೆ ಪುರುಷರ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಈ ಪದಕ ಗೆಲ್ಲುವುದಕ್ಕೂ ಮುನ್ನ ಅಮನ್​ ಬರೀ 10 ಗಂಟೆಯಲ್ಲಿ 4 ಕೆಜಿ ಕರಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಂಪಿ ಎಕ್ಸ್‌ಪ್ರೆಸ್​ಗೆ ಸಿಲುಕಿ ದೇಹ ಛಿದ್ರಛಿದ್ರ.. ಗೋಲ್ಡ್​​ ಮೆಡಲ್​ ಪದವೀಧರೆ ಸಾವು

ಅಮನ್​​ 57 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಡೇರಿಯನ್​​ ಟೋಯಿ ಕ್ರೂಜ್​ ಅವರನ್ನು 13-5ರಿಂದ ಸೋಲಿಸಿದರು. ಆ ಮೂಲಕ ಭಾರತಕ್ಕೆ 5ನೇ ಕಂಚು ತರಲು ನೆರವಾದರು. ಅದರೆ ಕಂಚಿನ ಪದಕ ಗೆಲ್ಲುವ ಮೊದಲು ಅಮನ್​ 57 ಕೆ.ಜಿಗೂ ಹೆಚ್ಚಿನ ತೂಕ ಹೊಂದಿದ್ದರು. ಆದರೆ ಸ್ಪರ್ಧೆಗೂ ಮುನ್ನ 10 ಗಂಟೆಗಳ ಸತತ ವರ್ಕೌಟ್​ ಮೂಲಕ 4 ಕೆಜಿಯಷ್ಟು ತೂಕನಷ್ಟ ಮಾಡುತ್ತಾರೆ.

ಇದನ್ನೂ ಓದಿ: ಕಾಶ್ಮೀರಿ ಮೂಲದ ವೈದ್ಯೆಯನ್ನು ವಿವಾಹವಾದ RCB ಮಾಜಿ ಸ್ಪಿನ್ನರ್​! ಈತ ಎಂಜಿನಿಯರ್​ ಪದವೀಧರ!

ಜಪಾನ್​​ನ ರೇ ಹಿಗುಚಿ ವಿರುದ್ಧ ಸಂಜೆ 6:30ಕ್ಕೆ ಸೆಮಿಫೈನಲ್​ನಲ್ಲಿ ಸೋತ ತಕ್ಷಣ ಹೆಚ್ಚುವರಿ ಕೆಜಿ ಕಳೆಯಲು ಮುಂದಾಗುತ್ತಾರೆ. ಒಂದು ಗಂಟೆಯಷ್ಟು ಕಾಲ ಬಿಸಿ ನೀರಿನ ಸ್ನಾನ ಮಾಡುತ್ತಾರೆ. ನಂತರ ಅವರನ್ನು ಟ್ರೈನರ್​ 12:30ಕ್ಕೆ ಜಿಮ್​ಗೆ ಕರೆದೊಯ್ಯುತ್ತಾರೆ. ಟ್ರೆಡ್​ಮಿಲ್​ನಲ್ಲಿ ನಿರಂತರ ಒಂದು ಗಂಟೆ ಓಡುವಂತೆ ಹೇಳುತ್ತಾರೆ.

ಇದನ್ನೂ ಓದಿ: ಅಪ್ಪ ಇಲ್ಲ, ಅಮ್ಮ ಇಲ್ಲ.. ಅಮನ್ ಜೀವನದ ಕತೆ ಕೇಳಿದ್ರೆ ಅಚ್ಚರಿಯಾಗುತ್ತೆ!

ಓಟದ ಬಳಿಕ ಬೆವರಿದ ಅವರು 30 ನಿಮಿಷ ವಿರಾಮ ತೆಗೆದುಕೊಳ್ಳುತ್ತಾರೆ. ಬಳಿಕ ಮತ್ತೆ ಸ್ನಾನದ ಮೊರೆ ಹೋಗುತ್ತಾರೆ. ಈ ವೇಳೆ ತೂಕ ಪರಿಶೀಲಿಸಿದಾಗ 900 ಗ್ರಾಂ ಹೆಚ್ಚುವರಿ ತೂಕ ಹೊಂದಿದ್ದರು. ನಂತರ ತರಬೇತುದಾರರು ಅಮನ್​ಗೆ ಗ್ರ್ಯಾಪರ್​ ಮಸಾಜ್​ ಮಾಡುತ್ತಾರೆ. ಜಾಗಿಂಗ್​ ಮಾಡಿಸುತ್ತಾರೆ. 15 ನಿಮಿಷಗಳ ರನ್ನಿಂಗ್​​ ಮಾಡಿಸುತ್ತಾರೆ.

ಇದನ್ನೂ ಓದಿ: ಶೂಟಿಂಗ್​ ವೇಳೆ ಖ್ಯಾತ ನಟನ ತಲೆಗೆ ಗಾಯ.. ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರತಂಡ

ಕೊನೆಗೆ 10 ಗಂಟೆಗಳ ಪಯತ್ನವು ಅವರಿಗೆ ಫಲ ನೀಡುತ್ತದೆ. ಬೆಳಗ್ಗಿನ ಜಾವ 4:30ರ ವೇಳೆಗೆ ಅಮನ್​ 56.9 ಕೆ.ಜಿ ತೂಕ ಹೊಂದುತ್ತಾರೆ. ಅಚ್ಚರಿಯ ವಿಚಾರವೆಂದರೆ ಅಮನ್​ ಕೂಡ ತೂಕ ಇಳಿಸುವ ನಿದ್ರೆಯನ್ನ ಮಾಡಲಿಲ್ಲ.

ಅಮನ್​ ತೂಕ ಇಳಿಸುವುದರ ಜೊತೆಗೆ ಇಡೀ ರಾತ್ರಿ ಪಂದ್ಯಗಳ ವಿಡಿಯೋ ನೋಡಿದರು. ಬಳಿಕ ತೂಕ ಪರಿಶೀಲಿಸಿದ್ದಾರೆ . ಹಗಲು ಮತ್ತು ರಾತ್ರಿ ನಿದ್ದೆ ಮಾಡಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮನ್​​ಗೂ ಕಾಡಿತ್ತು ತೂಕ! 10 ಗಂಟೆಯಲ್ಲಿ 4kg ಕರಗಿಸಿದ ‘ಕಂಚಿನ’ ಕುವರ

https://newsfirstlive.com/wp-content/uploads/2024/08/Aman-sehrawat-2.jpg

Load More