Advertisment

ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್​ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!

author-image
Bheemappa
Updated On
ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್​ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ದೇಹದ ಯಾವ ಯಾವ ಅಂಗಗಳನ್ನು ಆರೋಗ್ಯವಾಗಿ ಇಡುತ್ತದೆ?
  • ದೇಹದ ಬೊಜ್ಜು ಇಳಿಸುವಲ್ಲಿ ಬಟರ್​ ಫ್ರೂಟ್ ಮುಖ್ಯವಾದ ಹಣ್ಣು
  • ಸ್ಟ್ರೋಕ್ ಬಾರದೇ ಇರುವಾಗೆ ನೋಡಿಕೊಳ್ಳುವ ಆವಕಾಡೊ ಫ್ರೂಟ್

ಬಟರ್​ ಫ್ರೂಟ್​ (Butter fruit), ಆವಕಾಡೊ (Avocado) ಅಥವಾ ಕನ್ನಡದಲ್ಲಿ ಬೆಣ್ಣೆ ಹಣ್ಣು ಎಂದು ಕರೆಸಿಕೊಳ್ಳುವ ಈ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳಿವೆ. ಮಾರ್ಕೆಟ್​ನಲ್ಲಿ ಇದರ ಬೆಲೆ ಯಾವಾಗಲೂ ಹೆಚ್ಚು ಇರುವುದರಿಂದ ಇದನ್ನು ಜನರು ತಿನ್ನುವುದಕ್ಕೆ ಇಷ್ಟ ಪಡುವುದಿಲ್ಲ. ಒಂದು ವೇಳೆ ನೀವು ಈ ಬಟರ್​ ಫ್ರೂಟ್​ ಪ್ರಿಯರೇ ಆಗಿದ್ರೆ ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಉಪಯೋಗಗಳು ಇವೆ.

Advertisment

ಆರೋಗ್ಯ ತಜ್ಞರು ಹೇಳುವ ಪ್ರಕಾರ ಈ ಹಣ್ಣನ್ನು ಸೇವಿಸುತ್ತ ಇದ್ದರೇ ನಮಗೆ ಡಾಕ್ಟರ್​ಗಳ​ ಅವಶ್ಯಕತೆ ಇರಲ್ಲ ಎಂದು ಹೇಳುತ್ತಾರೆ. ಏಕೆಂದರೆ ಈ ಹಣ್ಣು ಹೃದಯಕ್ಕೆ ಅತ್ಯಂತ ಒಳ್ಳೆಯದು ಆಗಿದೆ. ಇದರಲ್ಲಿ ಮೊನೊಸಾಟುರಟೆಡ್​ ಫ್ಯಾಟ್ಸ್​ (Monounsaturated Fats) ಇರುತ್ತವೆ. ಇವೆ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

ಆವಕಾಡೊ ಹಣ್ಣಿನಲ್ಲಿ ಆರೋಗ್ಯಕರವಾದ (ಮೊನೊಸಾಟುರಟೆಡ್​ ಫ್ಯಾಟ್ಸ್) ಕೊಬ್ಬು ಹೆಚ್ಚು ಇರುತ್ತದೆ. ಇದು ಕೆ, ಸಿ, ಬಿ5, ಬಿ6 ಹಾಗೂ ಇ ವಿಟಮಿನ್​ಗಳನ್ನು ಸಮೃದ್ಧವಾಗಿ ಒಳಗೊಂಡಿವೆ. ಈ ಹಣ್ಣ ನಮ್ಮ ದೇಹದಲ್ಲಿರುವ ಕೆಟ್ಟದಾದ ಕೊಬ್ಬನ್ನು ಕಡಿಮೆ ಮಾಡಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ಸುರಕ್ಷಿತವಾಗಿ ಇಡುತ್ತದೆ.

ಇದನ್ನೂ ಓದಿ: ಅತಿಯಾಗಿ ಮೊಬೈಲ್​ ಬಳಸುವ ಮುನ್ನ ಎಚ್ಚರ.. ಆರೋಗ್ಯಕ್ಕೆ ಅಪಾಯ ಗ್ಯಾರಂಟಿ..!

Advertisment

publive-image

ಬೆಣ್ಣೆ ಹಣ್ಣಿನಲ್ಲಿ ಒಳ್ಳೆಯ ಕೊಬ್ಬು ಇರುವಾಗೇ ಫೈಬರ್​ ಅಂಶ ಕೂಡ ಇರುತ್ತದೆ. ಇದು ನಮ್ಮ ದೇಹದ ಒಳಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದರೆ ಈ ಹಣ್ಣು ಅತ್ಯಂತ ಸೂಕ್ತವಾದದ್ದು. ಇವುಗಳ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚುಸುವಲ್ಲಿ ಸಹಾಯ ಮಾಡುತ್ತದೆ. ಪೊಟಾಷಿಯಂ ಕೂಡ ಈ ಹಣ್ಣಿನಲ್ಲಿ ಇರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ.

ಹಣ್ಣಿನಲ್ಲಿ ಡೈಟರಿ ಫೈಬರ್​ (Dietary fiber) ಸಮೃದ್ಧವಾಗಿ ಇರುವುದರಿಂದ ದೇಹದ ಒಳಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್​ ಅನ್ನು ವೃದ್ಧಿಸುತ್ತದೆ. ರಕ್ತನಾಳಗಳು ಕೂಡ ಆರೋಗ್ಯವಾಗಿ ಇರುತ್ತವೆ. ಸ್ಟ್ರೋಕ್​ ಪ್ರಮಾದದಿಂದ ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಟರ್​ ಫ್ರೂಟ್​ನಲ್ಲಿ ಇ ಕ್ಯಾರೊಟಿನಾಯ್ಡ್‌ಗಳು (Carotenoids) ಇದ್ದು ಇವು ಕಣ್ಣಿನ ಆರೋಗ್ಯ ಕಾಪಾಡುತ್ತವೆ. ಚರ್ಮದ ಹೊಳಪು ಹೆಚ್ಚಿಸುತ್ತವೆ. ಇನ್ನೊಂದು ವಿಶೇಷ ಮಾಹಿತಿ ಎಂದರೆ ಈ ಬಟರ್ ಫ್ರೂಟ್​ನ್ನು ನಮ್ಮ ಡಯಟ್​ನಲ್ಲಿ ಸೇರಿಸಿಕೊಂಡರೆ ಡಯಾಬಿಟಿಸ್ ಅಂತವೂ ನಿಯಂತ್ರಣದಲ್ಲಿ ಇಡಬಹುದು ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment