Advertisment

ಕಿತ್ತಳೆ ಹಣ್ಣು ತಿಂದಮೇಲೆ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಆ ತಪ್ಪು ಮಾಡಬೇಡಿ, ಅದರಲ್ಲಿವೆ 6 ಪ್ರಯೋಜನಗಳು

author-image
Gopal Kulkarni
Updated On
ಕಿತ್ತಳೆ ಹಣ್ಣು ತಿಂದಮೇಲೆ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಆ ತಪ್ಪು ಮಾಡಬೇಡಿ, ಅದರಲ್ಲಿವೆ 6 ಪ್ರಯೋಜನಗಳು
Advertisment
  • ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲೂ ಇವೆ ನಿಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳು
  • ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಕಸವೆಂದು ಎಸೆಯಬೇಡಿ, ಅದು ಜೀವಸತ್ವಗಳ ರಸ
  • ಈ ಹಣ್ಣಿನ ಸಿಪ್ಪೆ ತಿನ್ನುವುದರಿಂದ ಆಗಲಿರುವ ಆರೋಗ್ಯದ ಪ್ರಯೋಜನಗಳೇನು?

ಕಿತ್ತಳೆ ಹಣ್ಣುನ್ನು ನಾವು ಆರೋಗ್ಯದ ವಿಚಾರದಲ್ಲಿ ನೋಡಿದಾಗ ತುಂಬಾ ಅಮೂಲ್ಯವಾದ ಹಣ್ಣು. ದೇಹದಲ್ಲಿ ನೀರಿನ ಅಂಶ ಹೆಚ್ಚಿಸುವ ಶಕ್ತಿಯಿಂದ ಹಿಡಿದು ಅನೇಕ ಪ್ರಯೋಜನಗಳಿವೆ. ಅದರಲ್ಲಿರುವ ವಿಟಮಿನ್ ಸಿ, ಫೈಬರ್ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಅಗತ್ಯ ಜೀವಸತ್ವ ಹಾಗೂ ಖನಿಜಗಳನ್ನು ಜೀವಕ್ಕೆ ಒದಗಿಸುತ್ತವೆ. ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಅದು ಕಸವೆಂದುಕೊಂಡು ಆಚೆ ಎಸೆಯುವವರೆ ಹೆಚ್ಚು. ಆದ್ರೆ ನೆನಪಿರಲಿ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿಯೂ ಕೂಡ ಆರೋಗ್ಯಕಾರಿ ಅಂಶಗಳು ಇವೆ.

Advertisment

1 ಕಿತ್ತಳೆಗಿಂತ ಹೆಚ್ಚು ಆಂಟಿಆಕ್ಸಿಡೆಂಟ್ ಅಂಶ
ನಾವು ಕಿತ್ತಳೆ ಹಣ್ಣಿನ ಸಿಪ್ಪೆ ತಿನ್ನುವುದರಿಂದ ಆಕ್ಸಿಡೆಟೀವ್ ಸ್ಟ್ರೇಸ್ ಹಾಗೂ ಉರಿಯೂತದಂತಹ ಸಮಸ್ಯೆಗಳು ಕಡಿಮೆ ಆಗುತ್ತವೆ. ಕಾರಣ ಇದರಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚು ಆಂಟಿಆಕ್ಸಿಡೆಂಟ್ ಅಂಶಗಳಿವೆ. ಈ ಅಂಶಗಳಿರುವ ಕಾರಣದಿಂದಾಗಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ನರರೋಗಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಮ್ಮ ಸಮೀಪ ಹಾಯುವುದಿಲ್ಲ.
ವಿಟಮಿನ್ ಸಿ ಯಿಂದ ಹೃದಯ ಆರೋಗ್ಯಕ್ಕೆ ಉಪಯುಕ್ತ

ಇದನ್ನೂ ಓದಿ:ನಾಳೆಯಿಂದ ‘ಪಾತ್​​​ ಟೂ ಪೇರೆಂಟ್​​ಹುಡ್’ ಈವೆಂಟ್.. ಸಂತಾನಹೀನತೆಗೆ ಸಿಗಲಿದೆ ಪರಿಹಾರ!
ಇತ್ತೀಚೆಗೆ ಹೊರಬಂದ ದಿ ಜರ್ನಲ್ ಆಫ್ ಅಗ್ರಿಕಲ್ಚರ್ ಅಂಡ್ ಫುಡ್ ಕೆಮೆಸ್ಟ್ರೀ ಎಂಬ ಅಧ್ಯಯನ ಕಿತ್ತಳೆ ಹಣ್ಣಿನ ಸಿಪ್ಪೆ ತಿನ್ನುವುದರಿಂದ ದೇಹಕ್ಕೆ ಅತಿಹೆಚ್ಚು ವಿಟಿಮಿನ್ ಸಿ ದೊರೆಯುತ್ತದೆ. ಇದರಿಂದ ಹೃದಯದ ಆರೋಗ್ಯವು ಹೆಚ್ಚು ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಕಿತ್ತಳೆ ಹಣ್ಣಿನ ಸಿಪ್ಪೆ ಒಂದು ಕಸವಲ್ಲ ಅದು ಅನೇಕ ವಿಟಮಿನ್​ಗಳನ್ನು ಹೊಂದಿರುವ ರಸ ಎನ್ನುವುದು ನಿಮಗೆ ನೆನಪಿರಲಿ.

publive-image

2 ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಈಗಾಗಲೇ ನಿಮಗೆ ಹೇಳಿದಂತೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ. ಇದರಲ್ಲಿ ಆಂಟಿಮೈಕ್ರೋಬಿಯಾದಂತಹ ಅಂಶಗಳು ಇರುವುದರಿಂದ ಅನೇಕ ಸೋಂಕುಗಳಿಂದ ನಮ್ಮನ್ನು ದೂರವಿಡುತ್ತದೆ.

Advertisment

publive-image

3 ಪಚನ ಕ್ರಿಯೆಗೆ ಸಹಾಯಕ
ಈ ಹಣ್ಣಿನ ಸಿಪ್ಪೆಯನ್ನು ತಿನ್ನುವುದರಿಂದ ನಮ್ಮ ಒಟ್ಟಾರೆ ಪಚನಕ್ರಿಯೆಯ ಪ್ರಕ್ರಿಯೆಗೆ ಸಹಾಯಕವಾಗಲಿದೆ. ಪೆಕ್ಟಿನ್ ಅಂಶವಿರುವುದರಿಂದಾಗಿ ಪಚನಕ್ರಿಯೆಯ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಶುರು ಮಾಡುತ್ತದೆ. ಹೀಗೆ ಹಲವು ಪ್ರಯೋಜನಗಳಿಂದಾಗಿ ಈ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

4 ಸಕ್ಕರೆ ರೋಗ ಇರುವವರಿಗೆ ತುಂಬಾ ಒಳ್ಳೆಯದು
ಅತಿಹೆಚ್ಚು ಫೈಬರ್ ಅಂಶವಿರುವ ಕಿತ್ತಳೆ ಹಣ್ಣಿನ ಸಿಪ್ಪೆ , ಸಕ್ಕರೆ ರೋಗ ಇರುವವರು ತಿಂದರೆ ತುಂಬಾ ಪ್ರಯೋಜನಗಳಿವೆ. ಇದು ದೇಹಕ್ಕೆ ಸೇರುವುದರಿಂದ ರಕ್ತದಲ್ಲಿ ಸೇರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಶುಗರ್ ಲೇವಲ್ ಕಡಿಮೆ ಆಗುವ ಸಾಧ್ಯತೆ ಹೆಚ್ಚು ಇದೆ.

5 ಚಯಾಪಚಯ ಕ್ರಿಯೆಗೆ ಬೂಸ್ಟ್
ಚಯಾಪಚಯ ಕ್ರಿಯೆ ಅಂದರೆ, ಚಯಾಪಚಯವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ದೇಹದ ಜೀವಕೋಶಗಳಲ್ಲಿ ಸಂಭವಿಸುವ ರಾಸಾಯನಿಕ ಪ್ರತಿಕ್ರಿಯೆಗಳನ್ನು ಸೂಚಿಸುತ್ತದೆ. ಕಿತ್ತಳೆ ಹಣ್ಣು ಈ ಚಯಾಪಚಯ ಕ್ರಿಯೆಗೆ ಮತ್ತಷ್ಟು ಶಕ್ತಿ ತುಂಬುವುದರಿಂದ ನಿತ್ಯ ವ್ಯಾಯಾಮ ಮಾಡಿ ತೂಕ ಇಳಿಸಬೇಕು ಅಂದುಕೊಂಡವರಿಗೆ ಬಹಳ ಸಹಾಯಕಾರಿ.

Advertisment

6 ಉಸಿರಾಟದ ತೊಂದರೆಯಿಂದ ಮುಕ್ತಿ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಆರಂಭದಿಂದಲೂ ಉಸಿರಾಟದ ತೊಂದರೆಯ ಚಿಕಿತ್ಸೆಗೆ ಬಳಸುತ್ತಾರೆ. ಅಸ್ತಮಾ ಶೀತದಂತಹ ಸಮಸ್ಯೆಗಳು ಇದ್ದವರು ಈ ಸಿಪ್ಪೆಯನ್ನು ಸೇವಿಸುವುದರಿಂದ ಎದೆಯಲ್ಲಿ ಗಟ್ಟಿಯಾಗಿರುವ ಕಫವನ್ನು ಕರಗಿಸಿ ದೇಹದಿಂದ ಹೊರಗೆ ಹಾಕುವಲ್ಲಿ ಸಹಾಯಕಾರಿಯಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment