Redmi Note 13 Pro+ 5G ಮೊಬೈಲ್‌ಗೆ ಇಂದು ಭರ್ಜರಿ ಆಫರ್‌.. ಇಷ್ಟು ಕಡಿಮೆ ಬೆಲೆಗೆ ಸಿಗುತ್ತಾ?

author-image
admin
Updated On
Redmi Note 13 Pro+ 5G ಮೊಬೈಲ್‌ಗೆ ಇಂದು ಭರ್ಜರಿ ಆಫರ್‌.. ಇಷ್ಟು ಕಡಿಮೆ ಬೆಲೆಗೆ ಸಿಗುತ್ತಾ?
Advertisment
  • Redmi Note 14 ಸೀರಿಸ್ ಇವತ್ತು ಭಾರತದಲ್ಲಿ ಬಿಡುಗಡೆ
  • ಹೊಸ ಫೋನ್ ಕೊಳ್ಳುವ ಗ್ರಾಹಕರಿಗೆ ಭಾರೀ ರಿಯಾಯಿತಿ
  • ಫ್ಯೂಶನ್ ಬ್ಲಾಕ್, ಪರ್ಪಲ್, ಬಿಳಿ, ನೀಲಿ ಬಣ್ಣದ ಫೋನ್‌ಗಳು

ರೆಡ್‌ಮಿ ನೋಟ್ ಮೊಬೈಲ್‌ ಫೋನ್ ಪ್ರಿಯರಿಗೆ ಇವತ್ತು ಬಂಪರ್ ಅವಕಾಶ. Redmi Note 14 ಸೀರಿಸ್ ಇವತ್ತು ಭಾರತದಲ್ಲಿ ಲಾಂಚ್ ಆಗುತ್ತಿದೆ. ಈ ಖುಷಿ ಸುದ್ದಿಯ ಜೊತೆಗೆ Redmi Note 13 ಮೇಲೆ ಭರ್ಜರಿ ಆಫರ್‌ಗಳನ್ನ ನೀಡಲಾಗುತ್ತಿದೆ.

ಭಾರತದಲ್ಲಿ ಇಂದು Redmi Note 14 ಸೀರಿಸ್‌ ಫೋನ್‌ಗಳನ್ನ ಲಾಂಚ್ ಮಾಡಲಾಗುತ್ತಿದೆ. Note 14 ಸೀರಿಸ್‌ನಲ್ಲಿ ಒಟ್ಟು 3 ಮಾದರಿಯ ಫೋನ್‌ಗಳನ್ನ ಪರಿಚಯಿಸಲಾಗುತ್ತಿದೆ. ಅವುಗಳು ಯಾವುವು ಅಂದ್ರೆ Redmi Note 14, Redmi Note 14 Pro, and Redmi Note 14 Pro+.

publive-image

Redmi Note 14 ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಿನ್ನೆಲೆಯಲ್ಲಿ Redmi Note 13 ಮೊಬೈಲ್ ಫೋನ್‌ಗಳ ಬೆಲೆ ಕುಸಿತ ಕಂಡಿದೆ. ಅಮೆಜಾನ್‌ನಲ್ಲಿ ನೀವು Redmi Note ಫೋನ್ ಖರೀದಿಸುವುದಾದರೆ 27,998 ರೂಪಾಯಿಗಳಿಂದ ಆರಂಭವಾಗುತ್ತಿದೆ. 28 ಸಾವಿರ ರೂಪಾಯಿಗಳಲ್ಲೂ ನೀವು ಶೇಕಡಾ 18ರಷ್ಟು ಡಿಸ್ಕೌಂಟ್ ಸಿಗಲಿದೆ.

ಇದನ್ನೂ ಓದಿ: ಗ್ರಾಹಕರಿಗೆ ಬಿಗ್ ಆಫರ್ ಕೊಟ್ಟ BSNL.. ಕೇವಲ ₹999 ರೀಚಾರ್ಜ್ ಮಾಡಿಸಿದ್ರೆ ಏನೆಲ್ಲಾ ಸಿಗುತ್ತೆ ಗೊತ್ತಾ? 

Redmi Note 13 ಕೊಟ್ಟು ಹೊಸ ಫೋನ್ ಖರೀದಿಸುವುದಾದರೆ ಗ್ರಾಹಕರಿಗೆ ಮತ್ತೊಂದು ಆಫರ್ ಕೂಡ ಸಿಗಲಿದೆ. ಹೊಸ ಫೋನ್ ಖರೀದಿಸುವವರಿಗೆ 4 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. ಅತ್ಯಂತ ಕಡಿಮೆ ಅಂದ್ರೆ 24,998 ರೂಪಾಯಿಗೆ Redmi Note 13 ಖರೀದಿಸಬಹುದಾಗಿದೆ. Redmi Note 13 ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಫ್ಯೂಶನ್ ಬ್ಲಾಕ್, ಪರ್ಪಲ್, ಬಿಳಿ ಮತ್ತು ನೀಲಿ ಬಣ್ಣದಲ್ಲಿ ಫೋನ್‌ಗಳು ಲಭ್ಯವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment