AI ಸ್ವಯಂಚಾಲಿತ ಕೆಲಸ.. ಹಲವು ಉದ್ಯೋಗಗಳಿಗೆ ಭಾರೀ ಹೊಡೆತ- Amazon CEO

author-image
Bheemappa
Updated On
AI ಸ್ವಯಂಚಾಲಿತ ಕೆಲಸ.. ಹಲವು ಉದ್ಯೋಗಗಳಿಗೆ ಭಾರೀ ಹೊಡೆತ- Amazon CEO
Advertisment
  • ಉದ್ಯೋಗಿಗಳು ಯಾವಾಗಲಾದ್ರೂ ಕೆಲಸ ಕಳೆದುಕೊಳ್ಳಬಹುದು
  • AI ತಂತ್ರಜ್ಞಾನದ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಏನಂದ್ರು?
  • 100ಕ್ಕೂ ಹೆಚ್ಚು ಕಂಪನಿಗಳಲ್ಲಿ ಉದ್ಯೋಗಿಗಳನ್ನ ತೆಗೆಯಲಾಯಿತಾ?

ಇದು ಎಐ ಜಮಾನ. ಇದರ ಪರಿಣಾಮ ಮಾನವ ಶ್ರಮದ ಅಗತ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚು ಕಂಪನಿಗಳು Automation ಕೆಲಸದ ಮೊರೆ ಹೋಗಿವೆ. ಹೀಗಾಗಿ ಲೇ ಆಫ್ ಆಗುತ್ತಿದೆ.

ಐಬಿಎಂ, Google, Amazon, Meta, Spotify ಮುಂತಾದ ದೊಡ್ಡ ಟೆಕ್ ಕಂಪನಿಗಳೂ ಸಹ ತಮ್ಮ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ ಈ ವರ್ಷದಲ್ಲಿ ಮಾತ್ರ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರೆಂಬ ಮಾಹಿತಿ ಇದೆ. ಇದರಿಂದ ಉದ್ಯೋಗಿಗಳು ಯಾವಾಗ ಬೇಕಾದ್ರೂ ತಮ್ಮ ಕೆಲಸ ಕಳೆದುಕೊಳ್ಳಬಹುದು ಅನ್ನೋ ಭಯದಲ್ಲೇ ಜಾಬ್​ ಮಾಡುತ್ತಿದ್ದಾರೆ. ಇದರ ಮಧ್ಯೆ ಎಐ ತಂತ್ರಜ್ಞಾನದ ಪರಿಣಾಮಗಳ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಎಚ್ಚರಿಕೆ ನೀಡಿದ್ದಾರೆ.

publive-image

ಅತ್ಯಂತ ಪರಿವರ್ತಕ ತಂತ್ರಜ್ಞಾನ ಎಐ

ಎಐ ಟೆಕ್ನಾಲಜಿ ಅನೇಕ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಲು ಪ್ರಾರಂಭಿಸಿದೆ. ಇದರಿಂದ ಹಲವು ಉದ್ಯೋಗಗಳ ಅಗತ್ಯತೆ ಕಡಿಮೆ ಆಗಿದ್ದು, ಐಟಿ ಸೇರಿದಂತೆ ಎಲ್ಲೆಡೆ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ನಮ್ಮ ಜೀವಿತಾವಧಿಯಲ್ಲೇ ಎಐ ಅತ್ಯಂತ ಪರಿವರ್ತಕ ತಂತ್ರಜ್ಞಾನ ಆಗಲಿದೆ. ಇದು ಕೆಲಸ ಮಾಡುವ ವಿಧಾನವನ್ನೇ ಬದಲಾಯಿಸಿದೆ. ಪ್ರತಿಯೊಂದು ತಾಂತ್ರಿಕವಾಗಿ ರೂಪಾಂತರವಾಗುತ್ತಿದೆ. ಹಾಗಾಗಿ ತಂತ್ರಜ್ಞಾನ ಕೂಡ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತಿದೆ. ಇಷ್ಟೇ ಅಲ್ಲ ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಲು ಬಯಸುವ ಇತರ ಕೆಲಸಗಳನ್ನು ಎಐ ಉದ್ಭವವಾಗಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಎಐ ಇರಲಿದೆ ಎಂದಿದ್ದಾರೆ ಅಮೆಜಾನ್ ಸಿಇಒ ಆಂಡಿ ಜಾಸ್ಸಿ.

ಎಐ ಬಂದಿರೋದರಿಂದ ಜನ ಹೆಚ್ಚು ದಿನ ಕೆಲಸಗಳನ್ನು ಮಾಡಲು ಆಗೋಲ್ಲ. ಇತ್ತೀಚೆಗೆ ಎಲ್ಲಾ ಸಾಫ್ಟ್‌ವೇರ್ ಕಂಪನಿಗಳು ಎಐ ಮೂಲಕ 30% ರಿಂದ 50% ಕೆಲಸವನ್ನು ಮಾಡಿಸುತ್ತಿವೆ. ಎಐಯಲ್ಲಿನ ಹೂಡಿಕೆಗಳು ಮತ್ತು ನೈಸರ್ಗಿಕ ಕ್ಷೀಣತೆಯಿಂದಾಗಿ ಕಂಪನಿಯು ತನ್ನ ಉದ್ಯೋಗಿಗಳನ್ನು 40%ರಷ್ಟು ಕಡಿತಗೊಳಿಸಲಿದೆ ಎಂದು ಹೇಳಿದ್ದಾರೆ.

ಕೆಲಸಗಳಿಗೆ ಕಡಿಮೆ ಜನರ ಬಳಕೆ

ಇನ್ನೂ ಅಮೆಜಾನ್ ಈಗಾಗಲೇ ಎಐ ಕಾರಣದಿಂದ 27,000ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದೆ. ಎಐ ಬಳಕೆಯಿಂದ ಕೆಲವೊಂದು ಕೆಲಸಗಳಿಗೆ ಇನ್ನು ಮುಂದೆ ಕಡಿಮೆ ಜನರ ಅಗತ್ಯವಿರಬಹುದು. ಆದರೆ, ರೊಬೊಟಿಕ್ಸ್, ಡೇಟಾ ವಿಶ್ಲೇಷಣೆ, ಸಂಶೋಧನೆ, ಸೃಜನಾತ್ಮಕತೆ ಮತ್ತು ಸಂಕೀರ್ಣ ನಿರ್ಧಾರಗಳ ಅಗತ್ಯವಿರುವ ಹೊಸ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳು ನಿರ್ಮಾಣ ಆಗಲಿವೆ ಎಂದಿದ್ದಾರೆ ಜಾಸ್ಸಿ.

AI ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿದೆ. ಕಂಪನಿಗಳಿಗೆ ಇದು ವೇಗ, ಶ್ರದ್ಧಾ ಮತ್ತು ವೆಚ್ಚಕಡಿತ ಎಂಬ ಮೂರೂ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಕಂಪನಿಗಳು ಕೂಡ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ.

ಇದನ್ನೂ ಓದಿ: ಟೆಕ್ಸಾಸ್​ನಲ್ಲಿ ಭಾರೀ ಮಳೆ, ದಿಢೀರ್​ ಪ್ರವಾಹ.. ಹಲವಾರು ಮಂದಿ ನಾಪತ್ತೆ.. ಉಸಿರು ಚೆಲ್ಲಿದ 80 ಜನ!

publive-image

ಎಲ್ಲಾ ಕಂಪನಿಗಳು ಎಐನಲ್ಲಿ ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ. ಕೃತಕ ಬುದ್ಧಿಮತ್ತೆ ಬಳಕೆ ಜಾಸ್ತಿ ಮಾಡಲು ಮತ್ತು ಇಂಜಿನಿಯರ್ಸ್​​ ಸೇರಿದಂತೆ ಮಾರಾಟ ವಿಭಾಗದ ಕೆಲಸಗಾರರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭವಿಷ್ಯದ ಉದ್ಯೋಗಗಳಲ್ಲಿ ತಂತ್ರಜ್ಞಾನ ಒಂದು ಅಡಿಪಾಯವಾಗಲಿದೆ. ಇದರೊಂದಿಗೆ ಉದ್ಯೋಗಿಗಳ ಮರುಕೌಶಲ್ಯ ಅಗತ್ಯ ಇದೆ. ಕಂಪನಿಗಳು automation ಬದ್ಧತೆಯೊಂದಿಗೆ ಮಾನವ ಸಂಪನ್ಮೂಲ ವಿಕಾಸಕ್ಕೂ ಗಮನ ಹರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment