/newsfirstlive-kannada/media/post_attachments/wp-content/uploads/2024/10/Smartphone-4.jpg)
ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬದ ಋತುವಿನಲ್ಲಿ ಗ್ರಾಹಕರಿಗಾಗಿ ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ಭರ್ಜರಿ ಆಫರ್​ ನೀಡಿದೆ. ಕೆಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​​, ಟ್ಯಾಬ್ಲೆಟ್​​ ಮುಂತಾದ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿದೆ.
ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಸಲುವಾಗಿ 75 ಪ್ರತಿಶತದಷ್ಟು ರಿಯಾಯಿತಿ ಒದಗಿಸಿದೆ. ಕಡಿಮೆ ಬೆಲೆಗೆ ಗ್ಯಾಜೆಟ್​ಗಳನ್ನು ಖರೀದಿಸುವ ಅವಕಾಶ ತೆರೆದಿಟ್ಟಿದೆ. ಮಾತ್ರವಲ್ಲದೆ ವಿನಿಮಯ ಕೊಡುಗೆ, ಆಯ್ದ ಬ್ಯಾಂಕ್​ ಕಾರ್ಡ್​ ಬಳಸಿ 25 ಸಾವಿರ ರೂಪಾಯಿ ಮತ್ತು 10 ಪ್ರತಿಶತದಷ್ಟು ಉಳಿತಾಯ ಮಾಡುತ್ತಿದೆ.
ಅಮೆಜಾನ್​​ ಭರ್ಜರಿ ಆಫರ್​
ಅಮೇಜ್​​ಫಿಟ್​​ ಆ್ಯಕ್ಟೀವ್​ ಸ್ಮಾರ್ಟ್​ವಾಚ್​: ಅಮೆಜಾಣ್​ನಲ್ಲಿ 7,999 ರೂಪಾಯಿಗೆ ಲಭ್ಯವಿದೆ. ದೀರ್ಘಕಾಲದ ಬ್ಯಾಟರಿ ಜೊತೆಗೆ ಬ್ಲೂಟೂತ್​ ಕರೆ ಮತ್ತು ಕ್ರೀಡಾ ವಿಧಾನಗಳಂತಹ ವೈಶಿಷ್ಟ್ಯಗಳು ಇದರಲ್ಲಿವೆ.
ಡೆಲ್​​ 15 ಕೋರ್​​​ ಐ3 ಲ್ಯಾಪ್​ಟಾಪ್​; ಇಂಟೆಲ್​​ ಕೋರ್​​ ಐ3 ಪ್ರೊಸೆಸರ್​​ ಹೊಂದಿರುವ ಈ ಲಾಪ್​ಟಾಪ್​​ 33,990 ರೂಗೆ ಖರೀದಿಸಬಹುದಾಗಿದೆ. 8GB RAM ಮತ್ತು 512GB SSDಯನ್ನು ಹೊಂದಿದೆ.
ಹೆಚ್​ಪಿ GK400F ಗೇಮಿಂಗ್​​ ಕೀಬೋರ್ಡ್​​: ಗೇಮರ್​​ಗಳಿಗಾಗಿ ಬ್ಯಾಕ್​​ಲಿಟ್​​ ಕೀಗಳು ಮತ್ತು ಬಾಳಿಕೆ ಬರುವಂತಹ ವಿನ್ಯಾಸವನ್ನು ನೀಡಲಾಗಿದೆ. ಅಂದಹಾಗೆಯೇ ಇದು 1,649 ರೂಪಾಯಿಗೆ ಖರೀದಿಗೆ ಸಿಗಲಿದೆ.
ಹೊನರ್​ ಮ್ಯಾಜಿಕ್​ಬುಕ್​ X16: 13ನೇ ಜನರೇಶನ್​​ ಇಂಟೆಲ್​​ ಕೋರ್​​​ ಐ3 ಪ್ರೊಸೆಸರ್​​ ಲ್ಯಾಪ್​​ಟಾಪ್​ ಗ್ರಾಹಕರಿಗಾಗಿ 50,990 ರೂಗೆ ಖರೀದಿಗೆ ಸಿಗಲಿದೆ.
ಇನ್​ಸ್ಟಾ360 ಎಕ್ಸ್​​3 ಆ್ಯಕ್ಷನ್​ ಕ್ಯಾಮೆರಾ: ಆ್ಯಕ್ಷನ್​ ಕ್ಯಾಮೆರಾ 34,989 ರೂಗೆ ಖರೀದಿಸಲು ಸಿಗುತ್ತಿದೆ. 360 ಡಿಗ್ರಿಯಲ್ಲಿ ದೃಶ್ಯವನ್ನು ಸೆರೆಹಿಡಿಯುತ್ತದೆ.
ಜೆಬಿಎಲ್​​ SB241 ಸೌಂಡ್​ ಬಾರ್​: ಹೋಮ್​​​ ಎಂಟರ್​ಟೈನ್​ಮೆಂಟ್​​ ಸೆಟಪ್​​ ಮಾಡಲು ಇದು ಯೋಗ್ಯವಾಗಿದೆ. ಗ್ರಾಹಕರಿಗಾಗಿ ಅಮೆಜಾನ್​ 6,998 ರೂ.ಗೆ ಖರೀದಿಸಲು ಸಿಗುತ್ತಿದೆ.
ಲೆನೋವೊ LOQ: 12ನೇ ಜನರೇಶನ್​​ ಇಂಟೆಲ್​​ ಕೋರ್​​ ಐ5 ಪ್ರೊಸೆಸರ್​ ಮತ್ತು ಆರ್​ಟಿಎಕ್ಸ್​​ 3050 ಗ್ರಾಫಿಕ್ಸ್​​ ಒಳಗೊಂಡಿರುವ ಈ ಗೇಮಿಂಗ್​​ ಲ್ಯಾಪ್​​ಟಾಪನ್ನು 67,490 ರೂಪಾಯಿ ಮಾರಾಟ ಮಾಡಲಾಗುತ್ತಿದೆ.
ಇದಲ್ಲದೆ, ರೇಜರ್​​ ಬ್ಲಾಕ್​​​ಶಾರ್ಕ್​​ ವಿ2 ಎಕ್ಸ್​ ಹೆಡ್​​ಸೆಟ್​​, ಸ್ಯಾಮ್​​ಸಂಗ್​​ ಟಾಬ್​​ ಎಸ್​9 ಎಫ್​ಇ ಟ್ಯಾಬ್​ಲೆಟ್​​, ಶಿಯೋಮಿ ಪಾಡ್​ 6, ಒಪ್ಪೋ ಎಫ್​​27 ಪ್ರೊ+5ಜಿ, ಶಿಯೋಮಿ 14 ಹೀಗೆ ಹಲವು ಗ್ಯಾಜೆಟ್​ಗಳು ಬೆಲೆ ಕಡಿತಗೊಳಿಸಿ ಖರೀದಿಗೆ ಸಿಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us