ಐಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌.. ಭಾರತದಲ್ಲಿ ಅಮೆಜಾನ್ ಮೊದಲ ಬ್ಲ್ಯಾಕ್ ಫ್ರೈಡೇ ಸೇಲ್​; ಏನೆಲ್ಲಾ ಆಫರ್?

author-image
Gopal Kulkarni
Updated On
ಐಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌.. ಭಾರತದಲ್ಲಿ ಅಮೆಜಾನ್ ಮೊದಲ ಬ್ಲ್ಯಾಕ್ ಫ್ರೈಡೇ ಸೇಲ್​; ಏನೆಲ್ಲಾ ಆಫರ್?
Advertisment
  • ಇಂದಿನಿಂದ ಅಮೆಜಾನ್​ನ ಮೊದಲ ಬ್ಲ್ಯಾಕ್​ ಫ್ರೈಡೇ ಸೇಲ್ ಆರಂಭ
  • ಯಾವ ಯಾವ ಉತ್ಪನ್ನಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ ಇದೆ ಗೊತ್ತಾ?
  • ಐಫೋನ್​ 15 ಸಿರೀಸ್ ಖರೀದಿ ಮಾಡಬೇಕೆಂದವರಿಗೆ ಸುವರ್ಣಾವಕಾಶ

ಅಮೆಜಾನ್ ಇಂಡಿಯಾ ಮೊದಲ ಬಾರಿ ಬ್ಲ್ಯಾಕ್ ಫ್ರೈಡೇ ಸೇಲ್​ ಆಚರಿಸುತ್ತಿದೆ. ನವೆಂಬರ್ 29 ಅಂದ್ರೆ ಇಂದಿನಿಂದ ಅಮೆಜಾನ್​ನ ಬ್ಲ್ಯಾಕ್​ ಪ್ರೈಡೇ ಸೇಲ್ ಆರಂಭಗೊಳ್ಳಲಿದೆ. ಹಲವು ಬ್ರ್ಯಾಂಡೆಡ್ ಉತ್ಪನ್​ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ ಅಮೆಜಾನ್.
ಆ್ಯಪಲ್, ಸ್ಯಾಮಸಂಗ್, ಸೋನಿ, ನೈಕ್, ಅಡಿಡಾಸ್ ಸೇರಿದಂತೆ ಹಲವಾರು ಕಂಪನಿಗಳ ಉತ್ಪನ್​ಗಳ ಮೇಲೆ ಭಾರೀ ರಿಯಾಯಿತಿ ನೀಡಲಿದೆ. ನವೆಂಬರ್ 29 ರಿಂದ ಅಂದ್ರೆ ಇಂದಿನಿಂದ ಆರಂಭಗೊಳ್ಳುವ ಈ ಬ್ಲ್ಯಾಕ್ ಫ್ರೈಡೇ ಡಿಸೆಂಬರ್ 2 2024ರ ವರೆಗೆ ಇರಲಿದೆ.

publive-image

ಇದನ್ನೂ ಓದಿ:IPL ಹರಾಜಿನಲ್ಲಿ ನೀತಾ ಅಂಬಾನಿ ಸೆನ್ಸೇಷನ್; ಈ ವಿಚಾರಕ್ಕೆ ಹೆಚ್ಚು ಸುದ್ದಿಯಾದರು..!

ಅಮೆಜಾನ್ ಘೋಷಿಸಿರುವ ಪ್ರಕಾರ ಹೆಚ್​ಡಿಎಫ್​ಸಿ ಬ್ಯಾಂಕ್. ಇಂಡಸ್ ಬ್ಯಾಂಕ್ ಬಿಒಬಿ ಹಾಗೂ ಹೆಚ್​ಎಸ್​ಬಿಎಸ್​ ಬ್ಯಾಂಕ್​ನ ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಶೇಕಡಾ 10ರಷ್ಟು ಡಿಸ್ಕೌಂಟ್ ಸಿಗಲಿದೆ. ಇದು ಮಾತ್ರವಲ್ಲ ಹಲವು ಉತ್ಪನ್ನಗಳ ಮೇಲೆ ಹಲವು ರಿಯಾಯಿತಿನ್ನು ನೀಡುತ್ತಿದೆ ಅಮೆಜಾನ್

ಎಲೆಕ್ಟಾನಿಕ್ಸ್​ ವಸ್ತುಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ
ನವೆಂಬರ್ 29 ರಿಂದ ಡಿಸೆಂಬರ್ 2ರವರೆಗೆ ನಡೆಯುವು ಈ ಬ್ಲ್ಯಾಕ್​ ಫ್ರೆಡೇ ಇವೆಂಟ್​ನಲ್ಲಿ ಅಮೆಜಾನ್ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವವರಿಗೆ ಶೇಕಡಾ 70 ರಷ್ಟು ರಿಯಾಯಿತಿ ನೀಡಲಿದೆ. ಖರೀದಿದಾರರು ಐಫೋನ್ 15 ಸಿರೀಸ್​ ಮೇಲೆಯೂ ಕೂಡ ಈ ಒಂದು ಡಿಸ್ಕೌಂಟ್​ನ್ನು ನಿರೀಕ್ಷಿಸಬಹುದು. ಸ್ಯಾಮಸಂಗ್ ಗ್ಯಾಲಕ್ಸಿ 53 ಸಿರೀಸ್​ ಸೇರಿದಂತೆ ಹಲವು ಬ್ರ್ಯಾಂಡೆಡ್ ಸ್ಮಾರ್ಟ್​ವಾಚ್​ಗಳು. ಲ್ಯಾಪಟಾಪ್​​ ಮುಂತಾದವುಗಳ ಮೇಲೆ ಶೇಕಡಾ 75 ರಷ್ಟು ಡಿಸ್ಕೌಂಟ್ ನಿರೀಕ್ಷಿಸಬಹುದು.

ಮನೆ ಬಳಕೆ ವಸ್ತುಗಳ ಮೇಲೆ ಶೇಕಡಾ 65 ರಷ್ಟು ರಿಯಾಯಿತಿ
ಬ್ರ್ಯಾಂಡೆಡ್ ವಾಶಿಂಗ್​ಮಶೀನ್, ಎಸಿ, ಇನ್ವೆಟರ್ ಸ್ಮಾರ್ಟ್ ರೆಫ್ರಿಜೇಟರ್ ಈ ತರಹದ ವಸ್ತುಗಳ ಮೇಲೆ ಶೇಕಡಾ 65ರಷ್ಟು ಡಿಸ್ಕೌಂಟ್ ಕೊಡ್ತಿದೆ ಅಮೆಜಾನ್​ ಇನ್ನುಳಿದಂತೆ ಸ್ಮಾರ್ಟ್ ಟಿವಿ, ಹ್ಯಾಂಡ್​ ಬ್ಯಾಗ್​ಗಳ ಮೇಲೆಯೂ ಆಕರ್ಷಕ ಡಿಸ್ಕೌಂಟ್ ನೀಡುತ್ತಿದೆ ಅಮೆಜಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment