Advertisment

ರಮಾನಂದ್ ಶೆಟ್ಟಿ ಸಾವಿನ ಬೆನ್ನಲ್ಲೇ ಅವರ ಪತ್ನಿಯೂ ನಿಧನ.. ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಅಶ್ವಿನಿ

author-image
Ganesh
Updated On
ರಮಾನಂದ್ ಶೆಟ್ಟಿ ಸಾವಿನ ಬೆನ್ನಲ್ಲೇ ಅವರ ಪತ್ನಿಯೂ ನಿಧನ.. ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಅಶ್ವಿನಿ
Advertisment
  • ಅಂಬಲಪಾಡಿಯ ಶೆಟ್ಟಿ ಬಾರ್ ಮಾಲೀಕ ರಮಾನಂದ್ ಶೆಟ್ಟಿ
  • ಅನಾಥರಾದ ಮಕ್ಕಳು, ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
  • ಮನೆಗೆ ಬೆಂಕಿ ಬಿದ್ದು ಆಸ್ಪತ್ರೆ ಸೇರಿದ್ದ ಇಡೀ ಕುಟುಂಬ

ಉಡುಪಿ: ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ನಿನ್ನೆ ಮೃತಪಟ್ಟಿದ್ದರು. ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರ ಪತ್ನಿಯೂ ಸಾವನ್ನಪ್ಪಿದ್ದಾರೆ.

Advertisment

ಅಶ್ವಿನಿ (50) ಮೃತ ದುರ್ದೈವಿ. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಅಶ್ವಿನಿ ಮೃತಪಟ್ಟಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಗಂಭಿರವಾಗಿ ಗಾಯಗೊಂಡಿದ್ದ ಅಶ್ವಿನಿ ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ಅವರಿಬ್ಬರ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.

ಇದನ್ನೂ ಓದಿ:‘ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತು..’ 7 ಮಂದಿ ಬಲಿ ಪಡೆದ ಗುಡ್ಡ ಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಸದ್ಯ ಇಬ್ಬರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಿರಿಯ ಮಗನೊಂದಿಗೆ ರೀಲ್ಸ್ ಮಾಡಿ ಅಶ್ವಿನಿ ಖ್ಯಾತಿ ಪಡೆದಿದ್ದರು. ಮೊನ್ನೆ ತಡರಾತ್ರಿ ರಮಾನಂದ್ ಶೆಟ್ಟಿ ಅವರ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಇನ್ನು ಬೆಂಕಿಯಿಂದ ಮನೆಯೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಒಳಗಿದ್ದ ವಸ್ತುಗಳೆಲ್ಲ ನಾಶವಾಗಿವೆ.

Advertisment

ಇದನ್ನೂ: ಲಂಕಾ ವಿರುದ್ಧದ ODI ಪಂದ್ಯ ನಾನು ಆಡಲ್ಲ -ಗಂಭೀರ್​​ಗೆ ಬಿಗ್ ಶಾಕ್ ಕೊಟ್ಟ ಪಾಂಡ್ಯ.. ಆಗಿದ್ದೇನು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment