ಶತಕೋಟ್ಯಾಧಿಪತಿಗಳ ಲಿಸ್ಟ್​ನಿಂದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಔಟ್.. ಕಾರಣವೇನು..?

author-image
Bheemappa
Updated On
ಶತಕೋಟ್ಯಾಧಿಪತಿಗಳ ಲಿಸ್ಟ್​ನಿಂದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಔಟ್.. ಕಾರಣವೇನು..?
Advertisment
  • ಅಂಬಾನಿ, ಅದಾನಿ ವ್ಯಾಪಾರ-ವ್ಯವಹಾರ ನಷ್ಟದಲ್ಲಿವೆಯಾ?
  • ಏಷ್ಯಾದ ಆಗರ್ಭ ಶ್ರೀಮಂತರಾಗಿರುವ ಅಂಬಾನಿ, ಅದಾನಿ
  • ಈ ಪಟ್ಟಿಯಿಂದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಔಟ್

ರಿಲಯನ್ಸ್ ಇಂಡಸ್ಟ್ರೀಯ ಮುಖೇಶ್ ಅಂಬಾನಿ ಹಾಗೂ ಅದಾನಿ ಗ್ರೂಪ್‌ನ ಗೌತಮ್ ಅದಾನಿ ಅವರು 10 ಶತಕೋಟ್ಯಾಧಿಪತಿಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇವರ ನಿವ್ವಳ ಮೌಲ್ಯವು 100 ಬಿಲಿಯನ್ ಡಾಲರ್​​ಗಿಂತ ಕಡಿಮೆಯಾಗಿದೆ ಎಂದು ಬ್ಲೂಮ್‌ಬರ್ಗ್‌ ಮಾಹಿತಿ ನೀಡಿದೆ.

ಮುಖೇಶ್ ಅಂಬಾನಿ, ಗೌತಮ್ ಅದಾನಿ ಇಬ್ಬರೂ ಭಾರತದ ಮತ್ತು ಏಷ್ಯಾದ ಕೆಲವು ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ವಿವಿಧ ವ್ಯಾಪಾರ ಸವಾಲುಗಳಿಂದಾಗಿ ಈ ವರ್ಷದ ಬ್ಲೂಮ್‌ಬರ್ಗ್‌ನ 100 ಬಿಲಿಯನ್ ಕ್ಲಬ್‌ನಿಂದ ಹೊರಬಿದ್ದಿದ್ದಾರೆ. ಈ ಇಬ್ಬರೂ ತಮ್ಮ ವ್ಯಾಪಾರ ಸಾಮ್ರಾಜ್ಯಗಳು ಮತ್ತು ವೈಯಕ್ತಿಕ ಸಂಪತ್ತಿನ ಮೇಲೆ ಪರಿಣಾಮ ಬೀರುವ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಇಂಧನ, ಚಿಲ್ಲರೆ ವ್ಯಾಪಾರ ಕೂಡ ನಷ್ಟದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅದಾನಿ ಮೇಲೆ ಅಮೆರಿಕ ಮಾಡಿದ ಆರೋಪ ದೊಡ್ಡ ಪೆಟ್ಟು ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಜ್ರ ಮುನೇಶ್ವರ ದೇವಾಲಯದ ಮುಂದೆ ಪವಿತ್ರಾ ಗೌಡ ತೀರ್ಥಸ್ನಾನ.. ದರ್ಶನ್ ಹೆಸರಲ್ಲಿ ಅರ್ಚನೆ

publive-image

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಇತ್ತೀಚೆಗೆ 400 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನ ದಾಟಿದ ಇತಿಹಾಸದಲ್ಲಿ ಮೊದಲ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದ್ರೆ, ಇಬ್ಬರು ಭಾರತೀಯ ಬಿಲಿಯನೇರ್​​ಗಳ ನಿವ್ವಳ ಮೌಲ್ಯವು 100 ಬಿಲಿಯನ್ ಡಾಲರ್​​ಗಿಂತ ಕಡಿಮೆಯಾಗಿದೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಸಂಪತ್ತು ಜುಲೈನಲ್ಲಿ 120.8 ಬಿಲಿಯನ್ ಡಾಲರ್​​ನಿಂದ 96.7 ಬಿಲಿಯನ್ ಡಾಲರ್​ಗೆ ಇಳಿದಿದೆ. ಗೌತಮ್ ಅದಾನಿ ಅವರ ಆದಾಯ 122.3 ಬಿಲಿಯನ್ ಡಾಲರ್​ಗಿಂತ 82.1 ಬಿಲಿಯನ್ ಡಾಲರ್​ಗೆ ಕಡಿಮೆ ಆಗಿದೆ ಎಂದು ಮಾಹಿತಿ ತಿಳಿದಿದೆ.

2024ರ ರಿಲಯನ್ಸ್ ಷೇರುಗಳು ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿನ 11.93 ಶೇಕಡಾ ಏರಿಕೆ ಬದಲು 3.43 ರಷ್ಟು ಕುಸಿತ ಕಂಡವು. ಆದರೆ ಅಮೆರಿಕ ಅಧಿಕಾರಿಗಳ ಆರೋಪದ ನಂತರ ಅದಾನಿ ಗ್ರೂಪ್ ಷೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಸಿಲುಕಬೇಕಾಯಿತು. ಇವೆಲ್ಲಾ ಅಂಬಾನಿ, ಅದಾನಿ ನಿವ್ವಳ ಲಾಭದ ಮೇಲೆ ಪೆಟ್ಟುಕೊಟ್ಟವು ಎಂದು ಹೇಳಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment