ಅಬ್ಬಾ.. ಅಂಬಾನಿ ಮದುವೆಗೆ ಬರೋ ಅತಿಥಿಗಳಿಗೆ ಸ್ಪೆಷಲ್ ಫ್ಲೈಟ್‌ಗಳು ರೆಡಿ; ಸ್ವಾಗತವೇ ಬಲು ವಿಶೇಷ!

author-image
Veena Gangani
Updated On
ಅಬ್ಬಾ.. ಅಂಬಾನಿ ಮದುವೆಗೆ ಬರೋ ಅತಿಥಿಗಳಿಗೆ ಸ್ಪೆಷಲ್ ಫ್ಲೈಟ್‌ಗಳು ರೆಡಿ; ಸ್ವಾಗತವೇ ಬಲು ವಿಶೇಷ!
Advertisment
  • ಜುಲೈ 12ಕ್ಕೆ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ, ರಾಧಿಕಾ ಮದುವೆ
  • ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಮುಖೇಶ್ ಅಂಬಾನಿ ಮಗ ಅನಂತ್
  • ಅತಿಥಿಗಳಿಗಾಗಿಯೇ ತಯಾರಾದ 610 mph ವೇಗದ ಫಾಲ್ಕನ್-2000 ಜೆಟ್‌ಗಳು

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜುಲೈ 12 ಅಂದ್ರೆ ನಾಳೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದೆ.

publive-image

ಇದನ್ನೂ ಓದಿ:ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹಳದಿ ಶಾಸ್ತ್ರ; ಬಾಲಿವುಡ್ ತಾರೆಯರ ರಂಗು ಹೇಗಿದೆ ನೋಡಿ!

ಈಗಾಗಲೇ ಸಂಗೀತ, ವಿವಾಹಪೂರ್ವ ಶಾಸ್ತ್ರಗಳು ಅದ್ಧೂರಿಯಾಗಿ ನಡೆದಿದೆ. ಹಳದಿ ಕಾರ್ಯಕ್ರಮದ ನಂತರ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆಹಂದಿ ಕಾರ್ಯಕ್ರಮಕ್ಕೂ ಕೂಡ ಬಾಲಿವುಡ್ ಸ್ಟಾರ್​ಗಳು ಆಗಮಿಸಿದ್ದರು. ಟ್ರೆಡಿಷನಲ್ ಡ್ರೆಸ್​ನಲ್ಲಿ ನಟ ಹಾಗೂ ನಟಿಯರು ಮಿಂಚಿದ್ದರು. ಜುಲೈ 12ರಿಂದ 14ರವರೆಗೆ ಮುಖೇಶ್​ ಅಂಬಾನಿ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ನಡೆಯಲಿದೆ.

publive-image

3 ದಿನದ ಮದುವೆ ಕಾರ್ಯಕ್ರಮ ವನ್ನು ಅಂಬಾನಿ ತಮ್ಮ ಮನೆಯಲ್ಲೇ ನಡೆಸಲಿದ್ದಾರೆ. ಮುಂಬೈಯಲ್ಲಿರುವ 27 ಅಂತಸ್ತಿನ ಭವ್ಯ ಮಹಲಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಹೊಂದಿಕೊಂಡಂತೇ ಇರುವ ಜಿಯೋ ವರ್ಲ್ಡ್ ಕನ್ವೆನ್ಸನ್ ಸೆಂಟರ್‌ನಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ ಕನ್ವೆನ್ಸನ್ ಸೆಂಟರ್‌ನಲ್ಲಿ ಸುಮಾರು 16,000 ಮಂದಿ ಒಂದೇ ಬಾರಿಗೆ ಭಾಗಿಯಾಗುವಷ್ಟು ಸ್ಥಳಾವಕಾಶವಿದೆ.

publive-image

ಅಂಬಾನಿ ಕಿರಿಯ ಪುತ್ರನ ಮದುವೆಗೆ ದೇಶ ವಿದೇಶಗಳಿಂದ ದೊಡ್ಡ, ದೊಡ್ಡ ಗಣ್ಯರು ಆಗಮಿಸುತ್ತಿದ್ದಾರೆ. ಮದುವೆಗೆ ಬಂದ ಅತಿಥಿಗಳನ್ನು ಕರೆದುಕೊಂಡು ಬರಲು ಹಾಗೂ ಅವರನ್ನು ಬಿಟ್ಟು ಬರಲು ಮುಖೇಶ್​ ಅಂಬಾನಿ ಮೂರು ಫಾಲ್ಕನ್-2000 ಜೆಟ್‌ಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರಂತೆ. ಹಾಗೂ 100ಕ್ಕೂ ಹೆಚ್ಚು ಖಾಸಗಿ ವಿಮಾನಗಳಲ್ಲಿ ಸೀಟ್ ಬುಕ್ ಮಾಡಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಅಂಬಾನಿ ವಿವಾಹದಲ್ಲಿ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪಾಲ್ಗೊಳ್ಳುವ ಸಾಧ್ಯತೆಯಿದೆ.

publive-image

ಮುಖೇಶ್​ ಅಂಬಾನಿ ಅವರು ಬಾಡಿಗೆಗೆ ಪಡೆದಿರೋ ಫಾಲ್ಕನ್-2000 ಬಹಳ ವಿಸ್ತಾರವಾಗಿದೆ. ಇತರೆ ಖಾಸಗಿ ಜೆಟ್‌ಗಳಿಗೆ ಹೋಲಿಸಿದರೆ, ಫಾಲ್ಕನ್ 2000 ವ್ಯಾಪ್ತಿ, ವೇಗ ಹಾಗೂ ಅದರ ಕಾರ್ಯಕ್ಷಮತೆ ಎದ್ದು ಕಾಣುತ್ತದೆ. ಇದು 4,000 ನಾಟಿಕಲ್ ಮೈಲುಗಳವರೆಗೆ ಯಾವುದೇ ಅಡೆ ಇಲ್ಲದೆ ಹಾರಬಲ್ಲದಾಗಿದೆ. ಜೊತೆಗೆ 610 mph ವೇಗವನ್ನು ಹೊಂದಿದೆ. 31 ಅಡಿ ಉದ್ದ ಮತ್ತು 7.7 ಅಡಿ ಅಗಲವನ್ನು ಹೊಂದಿದೆ. 47,000 ಅಡಿಗಳಷ್ಟು ಎತ್ತರಕ್ಕೆ ಹಾರಬಲ್ಲದಾಗಿದೆ. ಇನ್ನು, ಈ ಫಾಲ್ಕನ್ 2000 12 ಪ್ರಯಾಣಿಕರಿಗೆ ಆರಾಮದಾಯಕವಾಗಿಸುತ್ತದೆ. ಗರಿಷ್ಠವಾಗಿ 19 ಜನರು ಈ ಫಾಲ್ಕನ್ 2000ನಲ್ಲಿ ಕುಳಿತುಕೊಂಡು ಬರಬಹುದಾಗಿದೆ. 134 ಘನ ಅಡಿಗಳಷ್ಟು ಲಗೇಜ್​ಗಳನ್ನು ಇಡಲು ಸ್ಥಳಾವಕಾಶ ಲಭ್ಯವಿದೆ. 1,600 ಪೌಂಡ್ ತೂಕವನ್ನು ಹಿಡಿದಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಹೊಸ ಆಶಾಕಿರಣ.. ಜೈ ಅನ್ಮೋಲ್ ಯಶಸ್ಸಿನ ಗುಟ್ಟೇನು ಗೊತ್ತಾ?

publive-image

ಇನ್ನು, ಅನಂತ್​​ ಅಂಬಾನಿ ಮದುವೆಗೆ ಮುಂಬೈ ಪೊಲೀಸರು ಟ್ರಾಫಿಕ್ ಸಲಹೆಯನ್ನು ನೀಡಿದ್ದಾರೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಮದುವೆಯ ಸ್ಥಳದ ಬಳಿ ರಸ್ತೆಗಳನ್ನು ಮುಚ್ಚಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಮದುವೆಗೆ ಬರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment