newsfirstkannada.com

‘ಸ್ವಲ್ಪ ಸ್ಟಾಂಡರ್ಡ್​ ಕಡಿಮೆ ಮಾಡ್ಕೋ’- ಮತ್ತೆ ಕೊಹ್ಲಿ ಬಗ್ಗೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!

Share :

Published May 31, 2024 at 4:11pm

  2ನೇ ಬಾರಿಗೆ ಆರೆಂಜ್​ ಕ್ಯಾಪ್​ ಗೆದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ಕೊಹ್ಲಿ

  ಮತ್ತೆ ಆರ್​​ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್​ ರಾಯುಡು!

  ಕೊಹ್ಲಿ ಕೊಂಚ ಸ್ಟಾಂಡರ್ಡ್​​ ಕಡಿಮೆ ಮಾಡಿಕೊಳ್ಳಲಿ ಎಂದ ಅಂಬಾಟಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ ಬಗ್ಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಕ್ರಿಕೆಟರ್​​ ಅಂಬಾಟಿ ರಾಯುಡು ಮತ್ತೆ ಮಾತಾಡಿದ್ದಾರೆ. ಆರ್​​​ಸಿಬಿ ತಂಡದಲ್ಲಿರೋ ಆಟಗಾರರು ತಮ್ಮಂತೆಯೇ ಪ್ರದರ್ಶನ ನೀಡಬೇಕು ಎಂದು ಬಯಸೋ ಕೊಹ್ಲಿ ತಮ್ಮ ಸ್ಟಾಂಡರ್ಡ್​​​ ಕಡಿಮೆ ಮಾಡಿಕೊಳ್ಳುವುದು ಸೂಕ್ತ ಎಂದಿದ್ದಾರೆ.

ಕೊಹ್ಲಿ ಆರ್​​​ಸಿಬಿ ತಂಡದಲ್ಲಿ ಒಂದು ಸ್ಟಾಂಡರ್ಡ್​ ಸೆಟ್​ ಮಾಡಿದ್ದಾರೆ. ಇವರ ವೇಗಕ್ಕೆ ತಕ್ಕಂತೆ ಆಡಲು ಹೊಸ ಆಟಗಾರರಿಗೆ ಕಷ್ಟ ಆಗುತ್ತದೆ. ಕಾರಣ ಯಾವಾಗಲೂ ಕೊಹ್ಲಿ ತಮ್ಮ ಹಾಗೇ ಎಲ್ಲರೂ ಆಡಬೇಕು ಎಂದು ಬಯಸುತ್ತಾರೆ. ಇದು ಬಹಳ ಕಷ್ಟಕರ ಆಗಿದ್ದು, ತಂಡದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಮತ್ತೆ ಅಂಬಾಟಿ ರಾಯುಡು ಕೊಹ್ಲಿ ಕಾಲೆಳೆದಿದ್ದಾರೆ.

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಕೆಣಕಿದ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ಅವರನ್ನು ಹಲವು ಕ್ರಿಕೆಟರ್ಸ್​ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು, 2024ರ ಐಪಿಎಲ್​ ಸೀಸನ್​​ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್‌ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್​ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಇದನ್ನೂ ಓದಿ: ನೀನು ಇನ್ನೂ ಬಚ್ಚಾ.. ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಗಂಭೀರ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಸ್ವಲ್ಪ ಸ್ಟಾಂಡರ್ಡ್​ ಕಡಿಮೆ ಮಾಡ್ಕೋ’- ಮತ್ತೆ ಕೊಹ್ಲಿ ಬಗ್ಗೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!

https://newsfirstlive.com/wp-content/uploads/2024/05/Kohli_Ambati-Rayudu.jpg

Load More