newsfirstkannada.com

ಮತ್ತೆ ಆರ್​​ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?

Share :

Published May 27, 2024 at 6:03pm

Update May 27, 2024 at 7:41pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​

    2ನೇ ಬಾರಿಗೆ ಆರೆಂಜ್​ ಕ್ಯಾಪ್​ ಗೆದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ಕೊಹ್ಲಿ!

    ಮತ್ತೆ ಆರ್​​ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್​ ರಾಯುಡು

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಅಂಬಾಟಿ ರಾಯುಡು ಮತ್ತೆ ಕಿಡಿಕಾರಿದ್ದಾರೆ.

ಆರೆಂಜ್ ಕ್ಯಾಪ್‌ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್​ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಅಂಬಾಟಿ ರಾಯುಡು ಹೀಯಾಳಿಸಿದ್ದಾರೆ.

ಸುನಿಲ್ ನರೈನ್​​, ಆಂಡ್ರೆ ರಸೆಲ್ ಮತ್ತು ಮಿಚೆಲ್ ಸ್ಟಾರ್ಕ್‌ ರೀತಿಯ ದಿಗ್ಗಜರ ಪರವಾಗಿ ನಿಂತ ಕೆಕೆಆರ್​ಗೆ ಧನ್ಯವಾದಗಳು. ತಂಡದ ಗೆಲುವಿನಲ್ಲಿ ಎಲ್ಲರ ಪಾಲು ಇರುತ್ತದೆ. ನಾನು ಹಲವು ವರ್ಷಗಳಿಂದ ಇದನ್ನು ನೋಡಿದ್ದೇನೆ. ಐಪಿಎಲ್ ಗೆಲ್ಲುವುದು ಆರೆಂಜ್ ಕ್ಯಾಪ್ ಅಲ್ಲ, ಬದಲಿಗೆ ತಲಾ 300- 400 ರನ್‌ ನೀಡುವುದರಿಂದ ಎಂದರು.

ಇನ್ನು, 2024ರ ಐಪಿಎಲ್​ ಸೀಸನ್​​ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್‌ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್​ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಇದನ್ನೂ ಓದಿ: ಆರ್​​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ.. ಏನದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮತ್ತೆ ಆರ್​​ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?

https://newsfirstlive.com/wp-content/uploads/2024/05/Ambati-Rayudu_Kohli.jpg

Load More