/newsfirstlive-kannada/media/post_attachments/wp-content/uploads/2025/06/AMBATI_RAYUDU-1.jpg)
ಅಂಬಟಿ ರಾಯುಡು.. ಈತ ಕ್ರಿಕೆಟ್ನಿಂದ ದೂರ ಉಳಿದ್ರೂ, ಈತನ ಹೆಸರು ಮಾತ್ರ ಒಂದಿಲ್ಲೊಂದು ಕಾರಣಕ್ಕೆ ಟ್ರೆಂಡ್ ಆಗ್ತಾನೇ ಇರುತ್ತೆ. ಪ್ರಮುಖವಾಗಿ ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ವಿಚಾರ ಬಂದ್ರೆ, ಈತನ ಕಣ್ಣು ಕೆಂಪಾಗಿ ಬಿಡುತ್ತೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಕಂಡ್ರೆ ರಾಯುಡುಗೆ ಯಾಕಿಷ್ಟು ಸಿಟ್ಟು, ಅದಕ್ಕೆ ಉತ್ತರ ಇಲ್ಲಿದೆ.
ಟೀಮ್ ಇಂಡಿಯಾದ ಟ್ಯಾಲೆಂಡ್ ಕ್ರಿಕೆಟರ್ ಅಂಬಟಿ ರಾಯುಡು. ಅದೃಷ್ಟದ ಜೊತೆಗೆ ನಾಯಕರ ಬೆಂಬಲ ಇದಿದ್ರೆ, ಸ್ಟಾರ್ ಕ್ರಿಕೆಟರ್ ಆಗಿ ಬೆಳೆಯುವ ಎಲ್ಲಾ ಚಾನ್ಸ್ ಇತ್ತು. ಆದ್ರೆ, ಅದೃಷ್ಟ ಕೈ ಹಿಡಿಯಲಿಲ್ಲ. ಬೆಂಬಲ ಸಿಗಲಿಲ್ಲ. ಹೀಗಾಗಿ ಅಂಬಟಿ ರಾಯುಡು ಕ್ರಿಕೆಟ್ ಕರಿಯರ್ ಕಂಡಿದ್ದು ದುರಂತ ಅಂತ್ಯ.
2019ರ ಏಕದಿನ ವಿಶ್ವಕಪ್, ಈ ವಿಶ್ವಕಪ್ ನೆನೆದಾಗೆಲ್ಲ ಅಂಬಟಿ ರಾಯುಡು ಹೆಸರು ಮುನ್ನಲೆಗೆ ಬರುತ್ತೆ. ಆ ವಿಶ್ವಕಪ್ನಲ್ಲಿ ಅಂಬಟಿ ರಾಯುಡು ಇದಿದ್ರೆ, ಟೀಮ್ ಇಂಡಿಯಾ ವಿಶ್ವಕಪ್ ಗೆಲ್ತಿತ್ತು ಎಂಬ ಮಾತುಗಳು ಕೇಳಿ ಬರುತ್ತೆ. ಆ ಒಂದು ಮಿಸ್ಟೇಕ್ನಿಂದ ಟೀಮ್ ಇಂಡಿಯಾ ಸೋತು ಬಿಡ್ತಲ್ಲಾ ಎಂಬ ಬೇಸರವೂ ಫ್ಯಾನ್ಸ್ ಮನದಲ್ಲಿ ಇಂದಿಗೂ ಇದೆ.
2019ರ ವಿಶ್ವಕಪ್ ಆಡಲು ಸಿದ್ಧರಾಗಿದ್ದ ರಾಯುಡು.!
2019ರಲ್ಲಿ ಅಂಬಟಿ ರಾಯುಡು ಅದ್ಬುತ ಫಾರ್ಮ್ನಲ್ಲಿದರು. ಹೀಗಾಗಿ 2019ರ ಏಕದಿನ ವಿಶ್ವಕಪ್ಗೆ ಆಯ್ಕೆಯಾಗುವ ನಿರೀಕ್ಷೆ ಇತ್ತು. ತಂಡಕ್ಕೆ ಆಯ್ಕೆಯಾಗುವ ಭರವಸೆಯಲ್ಲಿದ್ದ ರಾಯುಡು, ಏಕದಿನ ವಿಶ್ವಕಪ್ಗೆ ಭರ್ಜರಿ ತಯಾರಿಯನ್ನೂ ನಡೆಸಿದ್ದರು. ಆದ್ರೆ, ಟೀಮ್ ಅನೌನ್ಸ್ಮೆಂಟ್ ವೇಳೆ ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ರಾಯುಡುಗೆ ಬಿಗ್ ಶಾಕ್ ನೀಡಿತ್ತು. ಅಂಬಟಿ ರಾಯುಡುನಾ ಕಡೆಗಣಿಸಿ ಆಲ್ರೌಂಡರ್ ವಿಜಯಶಂಕರ್ಗೆ ಮಣೆ ಹಾಕಿ ಅಚ್ಚರಿ ಮೂಡಿಸಿತ್ತು. ಇದಕ್ಕೆ ರೊಚ್ಚಿಗೆದ್ದಿದ್ದ ರಾಯುಡು, ಸೋಶಿಯಲ್ ಮೀಡಿಯಾದಲ್ಲಿ ತ್ರಿಡಿ ಸನ್ ಗ್ಲಾಸ್ ಪೋಸ್ಟ್ ಹಾಕಿ ಆಕ್ರೋಶ ಹೊರ ಹಾಕಿದ್ದರು.
ರಾಯುಡು ಮನೆ ತಲುಪಿತ್ತು ಏಕದಿನ ವಿಶ್ವಕಪ್ ಜರ್ಸಿ & ಕಿಟ್..!
ಅಸಲಿಗೆ ಅಂಬಟಿ ರಾಯುಡು ಮನೆಗೆ ಏಕದಿನ ವಿಶ್ವಕಪ್ನ ಕಿಟ್ ತಲುಪಿತ್ತು. ಇದು ರಾಯುಡುಗೆ ಏಕದಿನ ವಿಶ್ವಕಪ್ ತಂಡದಲ್ಲಿ ಚಾನ್ಸ್ ಫಿಕ್ಸ್ ಎಂಬ ಸಂದೇಶವೇ ಆಗಿತ್ತು. ಆದ್ರೆ, ಜರ್ಸಿ ಹಾಗೂ ಕಿಟ್ ಅಂಬಾಟಿ ರಾಯುಡು ಮನೆಗೆ ತಲುಪಿದ ಬಳಿಕವೂ ಕೊನೆ ಕ್ಷಣದಲ್ಲಿ ತಂಡದಲ್ಲಿ ಚಾನ್ಸ್ ಸಿಗಲಿಲ್ಲ. ಇದು ಆಟಗಾರನಿಗಾದ ಮಹಾಮೋಸವಲ್ದೇ ಮತ್ತೇನು?. ಹಾಗಾದ್ರೆ, ಅಂಬಟಿ ರಾಯುಡುಗೆ ಅವಕಾಶ ಮಿಸ್ ಮಾಡಿಸಿದ್ಯಾರು?. ಇದಕ್ಕೆ ಉತ್ತರ ವಿರಾಟ್ ಕೊಹ್ಲಿ
ಕೊಹ್ಲಿಗೆ ಯಾರಾದರೂ ಇಷ್ಟವಾಗಲಿಲ್ಲ ಎಂದಾದಲ್ಲಿ ಅವರಿಗೆ ಚಾನ್ಸ್ ಇರಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ರಾಯುಡು. ಎಲ್ಲರಿಗೂ ಆದ್ಯತೆಗಳಿರುತ್ತವೆ. ಯಾರಿಗೆ ಆಗಲಿ ಅವಕಾಶದ ಹೊಸ್ತಿಲವರೆಗೆ ಕರೆದುಕೊಂಡು ಹೋಗಿ ಬಾಗಿಲು ಮುಚ್ಚುವ ಕೆಲಸ ಮಾಡಬಾರದು. ನೀವು ಬೇಕಿದ್ದರೆ ನೋಡಿ ರಾಯುಡು ಮನೆಯಲ್ಲಿ ವಿಶ್ವಕಪ್ ಜರ್ಸಿ ಇದೆ. ಕಿಟ್ ಬ್ಯಾಗ್ ಬಂದಿದೆ. ವಿಶ್ವಕಪ್ ಆಡಲು ಸಿದ್ಧನಾಗಿದ್ದ, ಪ್ರಿಪೇರ್ ಆಗಿದ್ದ. ಇಂಪಾರ್ಟೆಂಟ್ ಸ್ಲಾಟ್ನಲ್ಲಿ ಆಡಲು ಸನ್ನದ್ಧನಾಗಿದ್ದ. ಶೂ, ಬಟ್ಟೆ, ಕಿಟ್ ಬ್ಯಾಗ್ ಬಂದಿದೆ. ಆದರೆ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಹೀಗೆ ಅವಕಾಶ ನಿರಾಕರಿಸುವುದು ಸರಿಯಲ್ಲ.
ರಾಬಿನ್ ಉತ್ತಪ್ಪ, ಟೀಮ್ ಇಂಡಿಯಾದ ಮಾಜಿ ಆಟಗಾರ
ಅಂಬಟಿ ರಾಯುಡು ಪತ್ನಿಗೆ ಇಂದಿಗೂ ಚಾನ್ಸ್ ನಿರಾಕರಿಸಿದ್ಯಾಕೆ ಎಂಬ ಪ್ರಶ್ನೆ ಕಾಡ್ತಿದೆ. ಅವಕಾಶ ನೀಡದ್ದಕ್ಕೆ ಕ್ಲಾರಿಟಿಯನ್ನೂ ನೀಡಿಲ್ಲ ಈಗಲೂ ಕಿಡಿಕಾರ್ತಿದ್ದಾರೆ.
ಆ ಸಮಯ ಬಹಳ ಕಠಿಣವಾಗಿತ್ತು. ಪಕ್ಕ ತಂಡದಲ್ಲಿರುವ ಭರವಸೆ ಇತ್ತು. ನ್ಯೂಜಿಲೆಂಡ್ ಸಿರೀಸ್ ಚೆನ್ನಾಗಿ ಆಡಿದ್ರು. ಆದ್ರೆ, ಯಾಕೆ ಡ್ರಾಪ್ ಮಾಡಿದ್ರು ಎಂಬ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಹೌದು ಕಿಟ್ ಬ್ಯಾಗ್, ಸೂಟ್ ಕೇಸ್ ಎಲ್ಲವೂ ಮನೆಗೆ ಬಂದಿತ್ತು. ಇದುವರೆಗೆ ಅವನ್ನು ಓಪನ್ ಮಾಡಿಲ್ಲ. ಅವರು ಹೇಗೆ ಕಳುಹಿಸಿದ್ರೂ, ಹಾಗೇ ಸ್ಟೋರ್ ರೂಮ್ನಲ್ಲಿ ಇಟ್ಟಿದ್ದೇವೆ. ಯಾಕಂದ್ರೆ, ಅದು ಹಾರ್ಟ್ ಬ್ರೇಕಿಂಗ್ ನ್ಯೂಸ್. ನಮಗೆ ನೂರರಷ್ಟು ಆಯ್ಕೆಯಾಗುವ ನಂಬಿಕೆ ಇತ್ತು. ವಿಶ್ವಕಪ್ ಆಡುವ ಸಲುವಾಗೇ ಜೀವನದಲ್ಲಿ ಹೋರಾಡಿದ್ದಾರೆ.
ಅಂಬಟಿ ರಾಯುಡು, ಭಾರತದ ಮಾಜಿ ಆಟಗಾರ
ವಿಶ್ವಕಪ್ ಆಡುವ ಕನಸು ಭಗ್ನವಾದ ಬೇಸರಕ್ಕಿಂತ ರಾಯುಡುರನ್ನ ಹೆಚ್ಚಾಗಿ ಕಾಡಿದ್ದು ಸೆಮಿಫೈನಲ್ ಸೋಲು. ಅಂದು ತಾನೇನಾದ್ರು ತಂಡದಲ್ಲಿದ್ರೆ ನ್ಯೂಜಿಲೆಂಡ್ ಗೆಲ್ಲಿಸ್ತಿದ್ದೆ ಭರವಸೆ ರಾಯುಡುಗಿತ್ತಂತೆ.
ಇದನ್ನೂ ಓದಿ:ಆ್ಯಂಕರ್ ಸ್ವೇಚ್ಚ ವೋಟಾರ್ಕರ್ ನಿಧನ.. ಇನ್ಸ್ಟಾದಲ್ಲಿ ಫೋಟೋ ಶೇರ್, ಹಲವು ಅನುಮಾನ!
2019ರ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು ಸೋಲಿನ ಬಳಿಕ ರಾಯುಡು ಜೊತೆ ಮಾತನಾಡಿದ್ದೆ. ಆ ದಿನ ರಾಯುಡು ಬೇಸರದಲ್ಲಿದ್ದರು. ಅದಕ್ಕೆ ಕಾರಣ ಟೀಮ್ ಇಂಡಿಯಾ ಸೋಲು. ಆತನಿಗೆ ಹಾಗೂ ನಮಗೆ ನಂಬಿಕೆ ಇತ್ತು. ಆತನಿದ್ದಿದ್ರೆ ಪಂದ್ಯ ಗೆಲ್ಲುತ್ತಿದ್ದೆವು ಎಂಬ ನಂಬಿಕೆ ಇತ್ತು. ಯಾಕಂದ್ರೆ, 3 ತಿಂಗಳ ಹಿಂದೆ ನ್ಯೂಜಿಲೆಂಡ್ ಎದುರು ಅಂಥದ್ದೇ ಕಂಡೀಷನ್ನಲ್ಲಿ ಆಡಿದ್ದರು. ಅಂಥದ್ದೇ ಪರಿಸ್ಥಿತಿಯಲ್ಲಿದ್ದಾಗ ರಾಯುಡು 91 ರನ್ ಗಳಿಸಿದ್ರು. ಅಂಥದ್ದೇ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ, ಸೆಮೀಸ್ನಲ್ಲಿ ಸೋಲ್ತು.
2019ರ ವಿಶ್ವಕಪ್ ತಂಡದಿಂದ ಡ್ರಾಪ್ ಮಾಡಿದ ವಿಚಾರವೇ ವಿರಾಟ್ ಕೊಹ್ಲಿ ಮೇಲೆ ರಾಯುಡುಗೆ ಶತ್ರುತ್ವ ಬೆಳೆಯಲು ಕಾರಣವಾಯಿತು. ಕೊಹ್ಲಿ ಅಂದ್ರೆ, ರಾಯುಡು ಬೆಂಕಿ ಉಂಡೆಯನ್ನು ಉಗುಳುವಂತೆ ಮಾಡ್ತು. ವಿರಾಟ್ ಕೊಹ್ಲಿ ಪ್ರತಿನಿಧಿಸುವ ಆರ್ಸಿಬಿ ಎದುರು ಟೀಕೆಗಳ ಸುರಿಮಳೆ ಸುರಿಸಲು ಇದೂ ಒಂದು ಕಾರಣದ ಅನ್ನೋದು ಆಪ್ತಬಳಗದ ಮಾತು. ರಾಯಡುಗೆ ಅನ್ಯಾಯವಾಗಿದೆ ನಿಜ. ಆದ್ರೆ, ಆ ಮನಸ್ತಾಪವನ್ನ ಕಾಮೆಂಟರಿ ಬಾಕ್ಸ್ನಲ್ಲಿ ಮುಂದುವರಿಸುವುದು ಸರಿಯಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ