newsfirstkannada.com

‘ಇದು ಐಪಿಎಲ್​ ಅಲ್ಲ, ವಿಶ್ವಕಪ್​​..’- ಮತ್ತೆ ಕೊಹ್ಲಿ ಬಗ್ಗೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!

Share :

Published June 10, 2024 at 10:50pm

  ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​

  2 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿರೋ ಟೀಮ್​ ಇಂಡಿಯಾ!

  ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಪರ ಕೊಹ್ಲಿ ಕಳಪೆ ಆಟ

ಸದ್ಯ ನಡೆಯುತ್ತಿರೋ ಬಹುನಿರೀಕ್ಷಿತ ಟಿ20 ವಿಶ್ವಕಪ್​ನಲ್ಲಿ ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆದ್ದು ಟೀಮ್​​ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. 2 ಪಂದ್ಯಗಳ ಗೆಲುವಿನ ಜತೆ 4 ಪಾಯಿಂಟ್ಸ್​​ ಪಡೆದ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಇನ್ನು, ಐರ್ಲೆಂಡ್​ ಮತ್ತು ಪಾಕ್​ ವಿರುದ್ಧ ಎರಡು ಪಂದ್ಯಗಳಲ್ಲೂ ಟೀಮ್​ ಇಂಡಿಯಾದ ಪರ ಹಲವು ಆಟಗಾರರು ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಈ ಪೈಕಿ ಸ್ಟಾರ್​ ಪ್ಲೇಯರ್​ ವಿರಾಟ್​ ಕೊಹ್ಲಿ ಕೂಡ ಒಬ್ಬರು. ಕೊಹ್ಲಿ ಐರ್ಲೆಂಡ್​ ವಿರುದ್ಧ ಕೇವಲ 1 ರನ್​ಗೆ ಔಟಾಗಿದ್ರು. ಬಳಿಕ ಪಾಕ್​ ವಿರುದ್ಧ 4 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಈಗ ಕೊಹ್ಲಿ ವಿರುದ್ಧ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಅಂಬಾಟಿ ರಾಯುಡು, ಇದು ಇಂಡಿಯನ್​ ಪ್ರೀಮಿಯರ್​ ಲೀಗ್​ ಅಲ್ಲ. ಬದಲಿಗೆ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​. ಐಪಿಎಲ್​ನಲ್ಲಿ ಆಡಿದ ಹಾಗೇ ಆಡಿದ್ರೆ ಸೋಲು ಗ್ಯಾರಂಟಿ. ಟೀಮ್​ ಇಂಡಿಯಾದ ಬ್ಯಾಟರ್​ಗಳು ಐಪಿಎಲ್​ ಎಂದು ಭಾವಿಸಿ ಬ್ಯಾಟ್​ ಬೀಸುತ್ತಿದ್ದಾರೆ. ಐಪಿಎಲ್​​ನಲ್ಲಿ ಹೆಚ್ಚು ರನ್​ ಗಳಿಸೋದಲ್ಲ, ಟಿ20 ವಿಶ್ವಕಪ್​ನಲ್ಲಿ ಆಡಬೇಕು ಎಂದು ಕೊಹ್ಲಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಸೋಲನ್ನು ಸಹಿಸಿಕೊಳ್ಳದ ಪಾಕಿಸ್ತಾನಿಯರು.. ಭಾರತದ ರಾಷ್ಟ್ರಗೀತೆಗೆ ಅವಮಾನ ಮಾಡಿದ ಪಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇದು ಐಪಿಎಲ್​ ಅಲ್ಲ, ವಿಶ್ವಕಪ್​​..’- ಮತ್ತೆ ಕೊಹ್ಲಿ ಬಗ್ಗೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!

https://newsfirstlive.com/wp-content/uploads/2024/05/Kohli_Ambati-Rayudu.jpg

Load More