newsfirstkannada.com

ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಆ್ಯಂಬುಲೆನ್ಸ್‌ ಡ್ರೈವರ್.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

Published April 27, 2024 at 3:39pm

  ಬ್ಯಾಟರಾಯನಪುರ ಸಂಚಾರಿ ಪೊಲೀಸರಿಂದ ಆ್ಯಂಬುಲೆನ್ಸ್ ಚಾಲಕ ಅರೆಸ್ಟ್​

  KR ಮಾರ್ಕೆಟ್ ಕಡೆಯಿಂದ ಸ್ಯಾಟಲೈಟ್ ಕಡೆಗೆ ಹೋಗುತ್ತಿದ್ದಾಗ ನಡೆದ ಘಟನೆ

  ಆ್ಯಂಬುಲೆನ್ಸ್ ಚಾಲಕ​​ ಯಡವಟ್ಟಿನಿಂದಾಗಿ 3 ಕಾರು ಮತ್ತು ಬೈಕ್​ ನಜ್ಜು ಗುಜ್ಜು

ಬೆಂಗಳೂರು: ಆ್ಯಂಬುಲೆನ್ಸ್ ಚಾಲಕನ​​ ಯಡವಟ್ಟಿನಿಂದಾಗಿ ತಡರಾತ್ರಿ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆ. ಆರ್​ ಮಾರ್ಕೆಟ್ ಕಡೆಯಿಂದ ಸ್ಯಾಟಲೈಟ್ ಕಡೆಗೆ ಆಗಮಿಸುತ್ತಿದ್ದ ಆ್ಯಂಬುಲೆನ್ಸ್ ಏಕಾಏಕಿ ಡಿಕ್ಕಿ ಹೊಡೆದಿದೆ. ಆಮೇಲೆ ನಡೆದಿದ್ದು, ಭಯಾನಕ ಸರಣಿ ಅಪಘಾತ.

ಇದನ್ನೂ ಓದಿ: ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?

ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಮೂರು ಕಾರು ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಇದೀಗ ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ್ಯಂಬುಲೆನ್ಸ್​ಗೆ ಕರೆ ಬಂದ ಹಿನ್ನೆಲೆಯಲ್ಲಿ ರೋಗಿ ಕರೆದೊಯ್ಯಲು ಆಗಮಿಸ್ತಿದ್ದ ಚಾಲಕ.

ಈ ವೇಳೆ ಬ್ಯಾಲೆನ್ಸ್ ತಪ್ಪಿ ಆಪೋಸಿಟ್ ರಸ್ತೆಗೆ ನುಗ್ಗಿ ಬಿಟ್ಟಿದೆ. ಸ್ವಲ್ಪ ಯಾಮಾರಿದ್ರೂ ಹಲವು ಸಾವು ನೋವು ಸಂಭವಿಸುತ್ತಿತ್ತು. ಸದ್ಯ ಈ ಅಪಘಾತದಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಆ್ಯಂಬುಲೆನ್ಸ್‌ ಡ್ರೈವರ್.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2024/04/accident6.jpg

Load More