‘ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್..

author-image
Ganesh
Updated On
ಟಿಟಿ ಅಪಘಾತದಲ್ಲಿ 13 ಮಂದಿ ಸಾವು.. ಅಸಲಿಗೆ ಆಗಿದ್ದೇನು? ಇಲ್ಲಿದೆ ಕಂಪ್ಲೀಟ್​ ಡೀಟೈಲ್ಸ್​​!
Advertisment
  • ದೇವರ ದರ್ಶನಕ್ಕೆ ತೆರಳಿದ್ದ ಟಿಟಿ ವಾಹನ ಭೀಕರ ಅಪಘಾತ
  • ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್​ ಬಳಿ ನಡೆದಿದೆ
  • ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು

ರಾಜ್ಯದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಹಿಂಬದಿಯಿಂದ ಲಾರಿಗೆ ಟಿಟಿ ವಾಹನ ಡಿಕ್ಕಿಯಾಗಿ 13 ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್​ ಬಳಿ ನಡೆದಿದೆ.

ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾನೆ. ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ:ಹಾವೇರಿ ಅಪಘಾತದಲ್ಲಿ ಅಮ್ಮನ ಎದುರೇ ಪ್ರಾಣಬಿಟ್ಟ ಅವಳಿ ಮಕ್ಕಳು.. ದೃಶ್ಯ ಕಂಡು ಗಳಗಳನೇ ಕಣ್ಣೀರಿಟ್ಟ ಆ್ಯಂಬುಲೆನ್ಸ್ ಸಿಬ್ಬಂದಿ

publive-image

ಅಪಘಾತದ ಬಗ್ಗೆ ಮಾತನಾಡಿರುವ ಎಸ್​ಪಿ ಅಂಶು ಕುಮಾರ್ ರಿಯಾಕಡ.. ಅಪಘಾತದಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು. ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂಡು ಸ್ವಗ್ರಾಮಕ್ಕೆ ವಾಪಸ್ ಆಗುವ ವೇಳೆ ದುರಂತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ದೇವರ ದರ್ಶನಕ್ಕೆ ತೆರಳಿದ್ದ 13 ಭಕ್ತರು ದಾರುಣ ಸಾವು

publive-image

ಅಪಘಾತದ ಭೀಕರ ದೃಶ್ಯ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್​..
ನೋಡಲು ಭಯಾನಕವಾಗಿತ್ತು. ಗಾಡಿಯೊಳಗೆ ಸಿಲುಕಿಕೊಂಡವರು ನರಳಾಟ ನಡೆಸುತ್ತಿದ್ದರು. ಕೂಡಲೇ ಎರಡು ಆ್ಯಂಬುಲೆನ್ಸ್ ಸಿಬ್ಬಂದಿ ಬಂದಿದ್ವಿ. ಹಿಂದಿನಿಂದ ಬಂದು ನೋಡಿದಾಗ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಕೊನೆಗೆ ಹಿಂಬದಿಯ ಸೀಟ್​​ ಅನ್ನು ಮುರಿದು ರಕ್ಷಣೆ ಮಾಡಿದೇವು. ಆದರೂ ಒಳಗಡೆ ಒಂದು ಪಾಪಿ ಹಾಗೂ ಇನ್ನಿಬ್ಬರು ಸಿಕ್ಕಿಹಾಕಿಕೊಂಡಿದ್ದರು. ಪಾಪು ನೋವಿನಿಂದ ಅಮ್ಮ ಅಮ್ಮ ಎನ್ನುತ್ತಿತ್ತು. ಕೂಡಲೇ ಆತನನ್ನು ಹೊರಗೆ ತೆಗೆದು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದ್ವಿ.

publive-image

ಮತ್ತೆ ಘಟನಾ ಸ್ಥಳಕ್ಕೆ ಬಂದ್ವಿ. ಸಿಲುಕಿಕೊಂಡವರನ್ನು ಹೊರ ತೆಗೆಯಲು ಪ್ರಯತ್ನಿಸಿದ್ವಿ. ಅದು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಕರೆಸಿಕೊಂಡ್ವಿ. ಅವರು ಬಂದು ಸೀಟ್​​ಗಳನ್ನು ಕಟ್​ ಮಾಡಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ನೋಡಲು ಕಣ್ಣಲ್ಲಿ ನೀರು ಬರುತ್ತಿದೆ. ಸಣ್ಣ ಸಣ್ಣ ಮಕ್ಕಳು ಇದ್ದರು. ಹೀಗೆ ಆಗಬಾರದಿತ್ತು.. ತುಂಬಾ ಭೀಕರವಾಗಿದೆ ಎಂದು ಆ್ಯಂಬುಲೆನ್ಸ್ ಡ್ರೈವರ್ ತೌಸಿಫ್ ಪಠಾಣ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಒದಿ: ಹಾವೇರಿಯಲ್ಲಿ ಭೀಕರ ಅಪಘಾತ 13 ಸಾವು.. ಮತ್ತಷ್ಟು ಸಾವು ನೋವಿನ ಆತಂಕ.. ಮೃತರ ಗುರುತು ಪತ್ತೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment