/newsfirstlive-kannada/media/post_attachments/wp-content/uploads/2024/10/ಮಾನಸ್_-ಕುಮಾರ್_-ಮಲ್ಲಿಕ್.jpg)
ಡಾನಾ ಚಂಡಮಾರುತ ಒಡಿಶಾದಲ್ಲಿ ಒಂದ್ಕಡೆ ಅಬ್ಬರಿಸ್ತಿದ್ರೆ, ಮತ್ತೊಂದೆಡೆ ಅದ್ರಿಂದಾಗಿ ಜನ ಹೊರಬರಲಾರದೇ ಒದ್ದಾಡ್ತಿದ್ದಾರೆ. ಒಡಿಶಾದ ಕೇಂದ್ರಾಪರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ರು. ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ರು.
ಚಂಡಮಾರುತದಿಂದಾಗಿ ಮರ ಬಿದ್ದಿದ್ರಿಂದ ಅವರ ಮನೆ ಬಳಿಗೆ ಆ್ಯಂಬುಲೆನ್ಸ್ ಹೋಗುವ ರಸ್ತೆ ಬಂದ್ ಆಗಿತ್ತು. ಕೆಸರು ಗದ್ದೆಯಾಗಿದ್ದ ರಸ್ತೆಯಲ್ಲಿ ಆಕೆಯನ್ನ ಸ್ಟ್ರೇಚರ್ ಮೇಲೆ ಕರೆದುಕೊಂಡು ಬರೋದು ಕಷ್ಟವಾಗಿತ್ತು. ಈ ವೇಳೆ ಆ್ಯಂಬುಲೆನ್ಸ್ ಸಿಬ್ಬಂದಿ ಮಾನಸ್ ಕುಮಾರ್ ಮಲ್ಲಿಕ್ ಎಂಬಾತ ಮಹಿಳಾ ರೋಗಿಯನ್ನ ಆ್ಯಂಬುಲೆನ್ಸ್ವರೆಗೂ ಹೊತ್ತುಕೊಂಡು ಬಂದಿದ್ದಾರೆ. ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಸದ್ಯ ಚೇತರಿಸಿಕೊಳ್ತಿದ್ದಾರೆ.
[caption id="attachment_94024" align="alignnone" width="800"] ಮಾನಸ್ ಕುಮಾರ್ ಮಲ್ಲಿಕ್[/caption]
7 ಜನರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಆಶಾ ಕಾರ್ಯಕರ್ತೆ
ಮತ್ತೊಂದೆಡೆ ಕಾಷ್ಮುಂಡ ಹಳ್ಳಿಯಲ್ಲಿ ಸೈಕ್ಲೋನ್ ಹೊಡೆತಕ್ಕೆ ಸಿಲುಕಿದ್ದ ಜನರನ್ನ ಆಶಾ ಕಾರ್ಯಕರ್ತೆಯೊಬ್ಬರು ರಕ್ಷಣೆ ಮಾಡಿದ್ದಾರೆ. 80 ವರ್ಷದ ವೃದ್ಧೆ ಸೇರಿದ್ದಂತೆ ಹಸುಕೂಸನ್ನ ಹೊತ್ಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. 80 ವರ್ಷದ ವೃದ್ಧೆಯನ್ನು ಸಿಬಾನಿ ಮಂಡಲ್ ಬೆನ್ನ ಮೇಲೆ ಹೊತ್ತುಕೊಂಡು ಬಂದ ದೃಶ್ಯ ಹರಿದಾಡ್ತಿದ್ದು, ಆಶಾ ಕಾರ್ಯಕರ್ತೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಆ್ಯಂಬುಲೆನ್ಸ್ ಸಿಬ್ಬಂದಿ ಮಲ್ಲಿಕ್ ಮತ್ತು ಆಶಾ ಕಾರ್ಯಕರ್ತೆ ಕೆಲಸವನ್ನ ಒಡಿಶಾ ಸಿಎಂ ಶ್ಲಾಘಿಸಿದ್ದು, ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ಮನೆ ಕಟ್ಟಿಕೊಡೋದಾಗಿ ಒಡಿಶಾ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ: ದೀಪಾವಳಿಗೆ ಊರಿಗೆ ಹೊರಟವರಿಗೆ ಆಘಾತ; ರೈಲು ಹತ್ತುವ ವೇಳೆ ಕಾಲ್ತುಳಿತ.. ಹಲವರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ
ಮತ್ತೊಂದೆಡೆ ಸೈಕ್ಲೋನ್ನಿಂದಾಗಿ ಒಡಿಶಾದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಂಡಮಾರುತದಿಂದಾಗಿ ಸುರಿಯುತ್ತಿರೋ ಭಾರೀ ಮಳೆ ಬಾಲಾಸೋರ್ ಜಿಲ್ಲೆಯ ನಿಲಗಿರಿ ಜಿಲ್ಲೆಯಲ್ಲಿರೋ ಪ್ರಸಿದ್ಧವಾದ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ ಹಾಕಿದೆ. ಹಲವೆಡೆ ಮರಳು ಧರೆಗುರುಳಿದ್ದು, ತೆರವು ಕಾರ್ಯಾಚರಣೆ ಭರದಿಂದ ಸಾಗ್ತಿದೆ. 14 ಜಿಲ್ಲೆಯಲ್ಲಿ 35 ಲಕ್ಷಕ್ಕೂ ಹೆಚ್ಚು ಜನರು ಡಾನಾ ಸೈಕ್ಲೋನ್ ಮತ್ತು ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲುಗಿದ್ದಾರೆ. ಆದ್ರೆ, ಅದೃಶ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಜ್ಯದಲ್ಲಿ 6, 210 ರಿಲೀಫ್ ಸೆಂಟರ್ಗಳನ್ ತೆರೆಯಲಾಗಿದ್ದು, ಒಟ್ಟು 8 ಲಕ್ಷದ 10 ಸಾವಿರದ ಎಂಟುನೂರಾ ತೊಂಬತ್ತಾರು ಜನರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಒಟ್ಟಿನಲ್ಲಿ, ಕಳೆದೆರಡು ದಿನಕ್ಕೆ ಹೋಲಿಸಿದ್ರೆ, ಇವತ್ತು ಚಂಡಮಾರುತದ ಅಬ್ಬರ ಅಷ್ಟಗಿಲ್ಲವಾದ್ರೂ, ಅದ್ರಿಂದಾಗಿರೋ ಅವಾಂತರಗಳ ಸರಿಪಡಿಸುವಿಕೆ ಕಾರ್ಯ ಭರದಿಂದ ಸಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ