/newsfirstlive-kannada/media/post_attachments/wp-content/uploads/2024/06/Darshan-Pavithra-Gowda-Arrest.jpg)
- ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್
- 24ನೇ ಎಸಿಎಂಎಂ ಕೋರ್ಟ್ನಲ್ಲಿ ಜಡ್ಜ್ ಕೇಳಿದ ಪ್ರಶ್ನೆಗಳಿಗೆ ದರ್ಶನ್ ಉತ್ತರ
- ಕೊನೆಗೂ ದರ್ಶನ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ!
ಬೆಂಗಳೂರು: ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಆರ್ಥಿಕ ಅಪರಾಧಗಳ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ 2 ದಿನಕ್ಕೊಮ್ಮೆ ಕೋರ್ಟ್​ಗೆ ವರದಿ ಒಪ್ಪಿಸಿ ಎಂದು ಪೊಲೀಸರಿಗೆ ಕೋರ್ಟ್​​ ಸೂಚನೆ ನೀಡಿದೆ.
ರೇಣುಕಾ ಸ್ವಾಮಿ ಎಂಬ ಯುವಕನ ಕೊಲೆ ಕೇಸಲ್ಲಿ ನಟ ದರ್ಶನ ಅರೆಸ್ಟ್​ ಮಾಡಲಾಗಿದೆ. ಸತತ 4 ಗಂಟೆಗಳ ವಿಚಾರಣೆ ಬಳಿಕ ಮೆಡಿಕಲ್​​ ಚೆಕಪ್​ ಮಾಡಿಸಿ ದರ್ಶನ್​ ಅವರನ್ನು ಕೋರ್ಟ್​​ನಲ್ಲಿ ಹಾಜರು ಪಡಿಸಲಾಗಿದೆ. ಇನ್ನು, ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ದರ್ಶನ್​ ಉತ್ತರ ನೀಡಿದ್ದಾರೆ.
ದರ್ಶನ್​​​ ಪರ ವಕೀಲರಾದ ಅನಿಲ್​​​ ಅವರು, ಕೊಲೆಗೂ ದರ್ಶನ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಾದ ಮಂಡಿಸಿದ್ರು. ದರ್ಶನ್​ ಮತ್ತು ಸರ್ಕಾರಿ ಪರ ವಲೀಕರ ವಾದ ಕೇಳಿ ನ್ಯಾಯಧೀಶ ವಿಶ್ವನಾಥ್​​​ ಸಿ. ಗೌಡರ್​​ ಆದೇಶ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ