ಮೆಕ್ಸಿಕೋ ಅಕ್ರಮ ವಲಸಿಗರಿಗೆ ಗಡಿಪಾರು ಭಾಗ್ಯ! ಖ್ಯಾತ ಗಾಯಕಿ ಕಣ್ಣೀರಿಟ್ಟಿದ್ದೇಕೆ?

author-image
Gopal Kulkarni
Updated On
ಮೆಕ್ಸಿಕೋ ಅಕ್ರಮ ವಲಸಿಗರಿಗೆ ಗಡಿಪಾರು ಭಾಗ್ಯ! ಖ್ಯಾತ ಗಾಯಕಿ ಕಣ್ಣೀರಿಟ್ಟಿದ್ದೇಕೆ?
Advertisment
  • ಮೆಕ್ಸಿಕೋ ಗಡಿಯಲ್ಲಿ ಭದ್ರತೆ ಹೆಚ್ಚಿಸಿರುವ ಅಮೆರಿಕಾ
  • ಅಕ್ರಮ ವಲಿಸಿಗರನ್ನು ವಾಪಸ್ ಕಳುಹಿಸುತ್ತಿರುವ ಯುಎಸ್
  • ಈ ಕಣ್ಣೀರಿಟ್ಟು ಗಾಯಕಿ ಸೆಲೆನಾ ಗೊಮೆಜ್ ವಿಡಿಯೋ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಒಬ್ಬೊಬ್ಬರನ್ನಾಗಿ ಗುರುತಿಸಿ ಗಡಿಪಾರು ಮಾಡಲಾಗುವುದು ಎಂದು ಚುನಾವಣಾ ಪ್ರಚಾರದ ವೇಳೆಯೂ ಹಾಗೂ ಪ್ರಮಾಣ ವಚನದ ಕಾರ್ಯಕ್ರಮದ ವೇಳೆಯೂ ಹೇಳಿದ್ದರು. ಅದರ ಕಾರ್ಯಚಟುವಟಿಕೆಗಳು ಈಗ ಭರದಿಂದ ಸಾಗುತ್ತಿದೆ. ಮೆಕ್ಸಿಕೊ ಗಡಿಯಲ್ಲಿ ಅಮೆರಿಕಾ ತನ್ನ ಭದ್ರತೆಯನ್ನು ಹೆಚ್ಚಿಸಿದೆ. ಅಮೆರಿಕಾದಲ್ಲಿರುವ ಅಕ್ರಮ ವಲಸಿಗರನ್ನು ವಾಪಸ್ ಮೆಕ್ಸಿಕೋಗೆ ಕಳುಹಿಸುತ್ತಿದೆ. ಈ ಬಗ್ಗೆ ಕಣ್ಣೀರಿಟ್ಟು ಗಾಯಕಿ ಸೆಲೆನಾ ಗೊಮೆಜ್ ವಿಡಿಯೋ ಮಾಡಿ ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿ ಬಳಿಕ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ-ಟ್ರಂಪ್ ಫೋನ್ ಸಂಭಾಷಣೆ; ಬೆನ್ನಲ್ಲೇ ಬಿಗ್ ಸ್ಟೇಟ್​​ಮೆಂಟ್ ಕೊಟ್ಟ ಅಮೆರಿಕ ಅಧ್ಯಕ್ಷ..!


">January 27, 2025

ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ವಿಷಯವನ್ನು ಅಮೆರಿಕಾ ತುಂಬಾ ಗಂಭೀರವಾಗಿ ಪರಿಗಣಿಸಿದೆ.ಅದರಲ್ಲೂ ಅಮೆರಿಕಾಗೆ ಅತಿಹೆಚ್ಚು ಅಕ್ರಮವಾಗಿ ವಲಸೆ ಬರುವವರು ಮೆಕ್ಸಿಕೋದವರು ಅವರನ್ನು ಈಗ ಗುರುತಿಸಿ ಗಡಿಪಾರು ಮಾಡಲಾಗುತ್ತಿದೆ. ಇನ್ನು ಈ ಬಗ್ಗೆ ವಿಡಿಯೋ ಮಾಡಿದ ಖ್ಯಾತ ಗಾಯಕಿ ಸೆಲೆನಾ ಗೊಮೆಜ್​ ನನ್ನ ಜನರ ಮೇಲೆ, ಮಕ್ಕಳ ಮೇಲೆ ದಾಳಿಗಳಾಗುತ್ತಿವೆ. ನನಗೆ ಇದೇನೂ ಅರ್ಥವಾಗುತ್ತಿಲ್ಲ, ನನ್ನನ್ನು ಕ್ಷಮಿಸಿಬಿಡಿ. ಈ ಸಂದರ್ಭದಲ್ಲಿ ನಾವೇನಾದ್ರೂ ಮಾಡಬೇಕಿತ್ತು. ಆದ್ರೆ ಆಗ್ತಿಲ್ಲ, ಏನು ಮಾಡಬೇಕೆಂದು ತೋಚುತ್ತಿಲ್ಲ. ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೀನಿ ಅಂತ ಪ್ರಮಾಣ ಮಾಡ್ತೀನಿ. ಮೆಕ್ಸಿಕೋ ದೇಶದ ಧ್ವಜದ ಎಮೋಜಿ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ:ವಿಶ್ವದ ಅತಿ ದೊಡ್ಡ ರೈಲ್ವೆ ಸ್ಟೇಷನ್, ಒಂದೇ ಬಾರಿ 44 ರೈಲುಗಳು ನಿಲ್ಲುತ್ತವೆ! ಎಲ್ಲಿದೆ ?

ನಂತರ ಆ ವಿಡಿಯೋ ಡಿಲೀಟ್ ಮಾಡಿದ್ದಾರೆ. ಇನ್ನು ಸೆಲೆನಾ ಆರೋಪವನ್ನು ತಳ್ಳಿ ಹಾಕಿರುವ ಅಮೆರಿಕಾದ ಗಡಿ ಅಧಿಕಾರಿ ಟ್ರಂಪ್ ಸರ್ಕಾರದಲ್ಲಿ ಗಡಿ ಉಸ್ತುವಾರಿಯಾಗಿರುವ ಟಾಮ್ ಹೋಮನ್​ ನಾವು ಯಾವ ಕುಟುಂಬವನ್ನು ಆರೆಸ್ಟ್ ಮಾಡಿಲ್ಲ. ಅನಧಿಕೃತವಾಗಿ ಬಂದವರ ವಿರುದ್ಧ ಮಾತ್ರ ಕ್ರಮವಾಗುತ್ತಿದೆ. ಇದಕ್ಕೆ ನಾವು ಕ್ಷಮೆ ಕೇಳಲ್ಲ, ನಮ್ಮ ಕೆಲಸ ಮುಂದುವರಿಯಲಿದೆ ಸೆಲೆನಾ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment