ಅಭಿಮಾನಿಗಳಿಗೆ ಸಿಹಿಸುದ್ದಿ; ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯರು ಕೊಟ್ಟ ಮಾಹಿತಿ ಏನು..?

author-image
Gopal Kulkarni
Updated On
ಅಭಿಮಾನಿ ದೇವರುಗಳ ಪೂಜಾ ಫಲ.. ಶಿವಣ್ಣನಿಗೆ ಪುನರ್ಜನ್ಮ! ಏನಾಗಿತ್ತು? ಆಪರೇಷನ್ ಹೇಗಾಯ್ತು?
Advertisment
  • ಡಾ. ಶಿವರಾಜ್​ಕುಮಾರ್​ಗೆ ನಿನ್ನೆ ರಾತ್ರಿ ನಡೆದಿರುವ ಶಸ್ತ್ರಚಿಕಿತ್ಸೆ
  • ಶಿವಣ್ಣನ ಆರೋಗ್ಯದ ಬಗ್ಗೆ ಅಧಿಕೃತ ಮಾಹಿರಿ ನೀಡಿದ ವೈದ್ಯರು
  • ವಿಡಿಯೋ ಸಂದೇಶದ ಮೂಲಕ ಶಿವಣ್ಣನ ಆರೋಗ್ಯದ ಬಗ್ಗೆ ಮಾಹಿತಿ

ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಶಿವರಾಜ್​ಕುಮಾರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದರು. ಶಿವಣ್ಣ ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ವಿಶೇಷ ಹೋಮ,ಹವನ, ಪೂಜೆಯನ್ನು ನಡೆಸಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರು.

ಶಸ್ತ್ರ ಚಿಕಿತ್ಸೆಗೂ ಮುನ್ನ ಶಿವಣ್ಣ ತಮ್ಮ ಅಭಿಮಾನಿಗಳೊಂದಿಗೆ ವಿಡಿಯೋ ಕಾಲ್​ನಲಲಿ ಮಾತನಾಡಿದ್ದಾರೆ. ಆದಷ್ಟು ಬೇಗ ಹುಷಾರಾಗಿ ಬರ್ತೀನಿ ಎಂದು ತಿಳಿಸಿದ್ದಾರೆ.ಈಗ ಶಿವರಾಜ್​ಕುಮಾರ್ ಅವರಿಗೆ ಚಿಕಿತ್ಸೆ ನೀಡಿರುವ ಅಮೆರಿಕಾದ ವೈದ್ಯರು ಶಿವಣ್ಣನ ಆರೋಗ್ಯದ ಬಗ್ಗೆ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಅಮೆರಿಕಾದಿಂದ ಶಿವಣ್ಣ ವಿಡಿಯೋ ಕಾಲ್.. ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಹೇಳಿದ್ದೇನು?

ಶಿವಣ್ಣ ಆರೋಗ್ಯದ ಬಗ್ಗೆ ವಿಡಿಯೋವೊಂದರಲ್ಲಿ ಮಾತನಾಡಿರುವ ಅಮೆರಿಕಾದ ವೈದ್ಯರು, ದೇವರ ಆಶೀರ್ವಾದ ಹಾಗೂ ಎಲ್ಲರ ಹಾರೈಕೆಯಿಂದ ಸರ್ಜರಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಶಸ್ತ್ರ ಚಿಕಿತ್ಸೆಗೆ ಶಿವರಾಜ್​ಕುಮಾರ್ ಅವರು ತುಂಬಾ ಉತ್ತಮವಾಗಿ ಸ್ಪಂದಿಸಿದ್ದಾರೆ.

ಶಸ್ತ್ರ ಚಿಕಿತ್ಸೆಯ ನಂತರ ಅವರ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗನೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದು ಅಮೆರಿಕಾದ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನ ವೈದ್ಯರು ಅಧಿಕೃತ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment