/newsfirstlive-kannada/media/post_attachments/wp-content/uploads/2025/05/US-GOLDEN-DOME-2.jpg)
ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ, ಭಾರತವನ್ನ ಧ್ವಂಸ ಮಾಡ್ಬೇಕು. ತಮ್ಮ ಧಮ್ಮು ತಾಕತ್ತು ಏನು ಅಂತಾ ಇಡೀ ಜಗತ್ತಿಗೆ ತೋರಿಸ್ಬೇಕು ಅಂತಾ ಡಿಸೈಡ್ ಮಾಡಿ ಒಂದಲ್ಲ ಎರಡಲ್ಲ ಬರೋಬ್ಬರಿ 700ಕ್ಕೂ ಹೆಚ್ಚು ಮಿಸೈಲ್‌ಗಳನ್ನ, ಡ್ರೋನ್‌ಗಳನ್ನ ಹಾರಿಸಿ ಬಿಟ್ಟಿತ್ತು. ನಮ್ಮ ದೇಶದ ಮಿಲಿಟರಿ ನೆಲೆಗಳು, ಏರ್‌ಬೇಸ್‌ಗಳು, ಏರ್‌ಪೋರ್ಟ್‌ಗಳು, ಸಾರ್ವಜನಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು ಅದರ ಬಹುಮುಖ್ಯ ಟಾರ್ಗೆಟ್ ಆಗಿತ್ತು.
ಆದ್ರೆ, ಭಾರತ ಆಕಾಶದ ಬಾಹುಬಲಿ ಆಕಾಶ್, ಸುದರ್ಶನ ಚಕ್ರ-400 ಅದೆಲ್ಲವನ್ನು ಆಕಾಶದಲ್ಲಿಯೇ ಹೊಡೆದು ಹಾಕಿತ್ತು. ಪರಿಣಾಮ ಒಂದೇ ಒಂದು ಕ್ಷಿಪಣಿಯೂ ಭಾರತದ ನೆಲದಲ್ಲಿ ಬಿದ್ದಿಲ್ಲ. ಆದ್ರೆ, ಭಾರತ ಹಾರಿಸಿ ಬಿಟ್ಟ ಮಿಸೈಲ್‌ಗಳನ್ನ, ಡ್ರೋನ್‌ಗಳನ್ನ ಹೊಡೆದು ಹಾಕುವಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಪಾಕಿಸ್ತಾನ ಉಡೀಸ್ ಆಗಿದೆ.
ಇದು ಏನನ್ನ ಸೂಚನೆ ಕೊಡುತ್ತೆ ಅಂದ್ರೆ, ಭವಿಷ್ಯದ ಯುದ್ಧದಲ್ಲಿ ದಾಳಿ ಮಾಡೋದಕ್ಕಿಂತ ಡಿಫೆಂಡ್ ಮಾಡಿಕೊಳ್ಳುವುದು ಮುಖ್ಯ ಅನ್ನೋದನ್ನ ತೋರಿಸಿ ಕೊಡ್ತಾ ಇದೆ. ಈ ನಿಟ್ಟಿನಲ್ಲಿ ಅಮೆರಿಕಾ ಇಟ್ಟಿರೋ ಹೆಜ್ಜೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವಂತಿದೆ. ಇಡೀ ವಿಶ್ವದಲ್ಲಿ ಯಾವ ರಾಷ್ಟ್ರದ ಬಳಿಯೂ ಇಲ್ಲದ ಏರ್ ಡಿಫೆನ್ಸ್ ಸಿಸ್ಟಮ್ ನಿರ್ಮಾಣಕ್ಕೆ ಅಮೆರಿಕಾ ಕೈ ಹಾಕಿದೆ.
ಶೀಘ್ರದಲ್ಲೇ ದೊಡ್ಡಣ್ಣನ ಬತ್ತಳಿಕೆಗೆ ಗೋಲ್ಡನ್ ಡೋಮ್!
ಭೂಮಿ ಅಲ್ಲ ಬಾಹ್ಯಾಕಾಶದಿಂದ ದಾಳಿ ಮಾಡಿದ್ರೂ ಉಡೀಸ್
ಅಮೆರಿಕಾದ ಮಿಲಿಟರಿ ಹೆಸರು ಕೇಳಿದ್ರೆ ಸಾಕು ಯುದ್ಧಕ್ಕೆ ಹೋಗೋ ಮನಸ್ಸು ಮಾಡೋದ್ ಇರಲಿ. ಯೋಚನೆ ಮಾಡೋದಕ್ಕೂ ಹೋಗೋದಿಲ್ಲ. ಯಾಕಂದ್ರೆ, ಆತನ ಬಳಿ ಇರೋ ಅತ್ಯಾಧುನಿಕ ಯುದ್ಧಾಸ್ತ್ರಗಳು ಎಂಥಾ ವೈರಿಯ ಎದೆಯನ್ನಾದ್ರೂ ನಡುಗಿಸಿ ಬಿಡುತ್ತವೆ. ಆದ್ರೆ, ತನ್ನ ಮೇಲೆ ಯಾರೂ ಯುದ್ಧಕ್ಕೆ ಬರೋ ಧಮ್ಮು ತಾಕತ್ತಿನ ರಾಷ್ಟ್ರ ಯಾವುದು ಇಲ್ಲ. ಯಾರೂ ಮಿಸೈಲ್ ಹಾರಿಸಲ್ಲ ಅಂತಾ ದೊಡ್ಡಣ್ಣ ಸುಮ್ಮನೆ ಕೂರೋದಕ್ಕೆ ಸಾಧ್ಯವೇ ಇಲ್ಲ.
ಯಾಕಂದ್ರೆ, ಇವತ್ತು ದೊಡ್ಡಣ್ಣನ ತೋಳ್ಬಲ ಜಾಸ್ತಿ ಇದ್ದಿದ್ದಕ್ಕೆ ಬೇರೆ ರಾಷ್ಟ್ರಗಳು ಅದರ ತಂಟೆಗೆ ಹೋಗ್ತಾ ಅಲ್ಲ. ಆದ್ರೆ, ಮುಂದೊಂದು ದಿನ ಹೋಗ್ಬಾರದು ಅಂತಾ ಇಲ್ಲವಲ್ಲ. ಈ ಭಯ ಅಮೆರಿಕಾಗೂ ಇದೆ. ಅದ್ರಲ್ಲಿಯೂ ಆ ನಾಲ್ಕು ರಾಷ್ಟ್ರಗಳ ಬಗ್ಗೆ ವಿಪರೀತ ಭಯವಿದೆ. ಅಷ್ಟಕ್ಕೂ ಆ ನಾಲ್ಕು ರಾಷ್ಟ್ರಗಳು ಯಾವುವು? ಆ ರಾಷ್ಟ್ರಗಳ ಬತ್ತಳಿಕೆಯಲ್ಲಿರೋ ಮಾರಕ ಮಿಸೈಲ್‌ಗಳು ಯಾವುವು?
ಮಾರಕ ಕ್ಷಿಪಣಿಗಳಿಂದ ರಕ್ಷಣೆ ನೀಡುವ ಗೋಲ್ಡನ್ ಡೋಮ್ ಅನ್ನ ನಾವು ಪರಿಚಯಿಸುತ್ತಿದ್ದೇವೆ. ಇದೊಂದು ಐತಿಹಾಸಿಕ ಘೋಷಣೆ. ಹಲವು ವರ್ಷಗಳ ಹಿಂದೆಯೇ ನಾವು ಇಂತಹದೊಂದು ಸಾಧನವನ್ನ ಬಯಸಿದ್ದೇವು. ಆದರೆ ಆವಾಗ ಇಂತಹ ತಂತ್ರಜ್ಞಾನ ಇರಲಿಲ್ಲ. ಇದೀಗ ನಮ್ಗೆ ಅಂತಾ ತಂತ್ರಜ್ಞಾನ ಸಿಕ್ಕಿದೆ. ಇದಕ್ಕೆ ಶ್ರಮಿಸಿದ ರುಬಿಯೋ ಮತ್ತು ಮೈಕ್ ಗಟ್ಲೈನ್‌ಗೆ ಥ್ಯಾಂಕ್ಸ್ ಹೇಳ್ತೀನಿ.
-ಡೋನಾಲ್ಡ್ ಟ್ರಂಪ್, ಅಮೆರಿಕಾ ಅಧ್ಯಕ್ಷ
ಇಲ್ಲಿಯವರೆಗೂ ನಾವು ಇಸ್ರೇಲ್‌ನ ಐರನ್ ಡೋಮ್ ಬಗ್ಗೆ ಕೇಳಿದ್ದೇವೆ. ಭಾರತದಲ್ಲಿರೋ ಏರ್ ಡಿಫೆನ್ಸ್ ಸಿಸ್ಟಂಗಳಾಗಿರೋ ಆಕಾಶ್, ಎಸ್-400 ಬಗ್ಗೆ ಕೇಳಿದ್ದೇವೆ. ಇದೇನಿದು ಗೋಲ್ಡನ್ ಡೋಮ್ ಅಂತಿರಾ? ಅದು ಅಮೆರಿಕಾದ ಏರ್ ಡಿಫೆನ್ಸ್ ಸಿಸ್ಟಂ ಅಸ್ತ್ರಕ್ಕೆ ಕೆಲವೇ ವರ್ಷದಲ್ಲಿ ಸೇರ್ಪಡೆಯಾಗಲಿದೆ. ಅದು ಹೇಗಿರುತ್ತೆ ಅಂದ್ರೆ, ಯಾವುದೇ ರಾಷ್ಟ್ರ ಅಮೆರಿಕಾವನ್ನ ಟಾರ್ಗೆಟ್ ಮಾಡಿ ಮಿಸೈಲ್ ಲಾಂಜ್ ಮಾಡ್ತು ಅಂದ ತಕ್ಷಣವೇ ಗೋಲ್ಡನ್ ಡೋಮ್ ಪತ್ತೆ ಮಾಡುತ್ತೆ. ಅದನ್ನ ಅಲ್ಲಿಯೇ ಹೊಡೆದು ಹಾಕುತ್ತೆ. ಇನ್ನೂ ಒಂದು ಅಚ್ಚರಿ ಅಂದ್ರೆ, ಕೇವಲ ಭೂಮಿ ಮೇಲಿಂದ ಅಷ್ಟೇ ಅಲ್ಲ, ಬಾಹ್ಯಾಕಾಶದಿಂದ ದೊಡ್ಡಣ್ಣನ ಮೇಲೆ ದಾಳಿ ಮಾಡೋದಕ್ಕೂ ಸಾಧ್ಯವಿಲ್ಲ. ಇದು ಅಚ್ಚರಿಯಾದ್ರೂ ಸತ್ಯ. ಹೀಗಾಗಿಯೇ ಇದೊಂದ್ ನೆಕ್ಸ್ಟ್ ಜನರೇಷನ್ ಟೆನ್ನಾಲಜಿ ಅಂತಾ ಟ್ರಂಪ್ ಹೇಳ್ಕೊಂಡಿದ್ದಾರೆ.
ಇದೊಂದು ನೆಕ್ಟ್ಸ್ ಜನರೇಷನ್ ಟೆಕ್ನಾಲಜಿ ಹೊಂದಿದೆ. ಭೂಮಿ, ಆಕಾಶ, ಸಮುದ್ರ ಎಲ್ಲಾ ರೀತಿಯ ದಾಳಿಯನ್ನ ಬಾಹ್ಯಾಕಾಶದಿಂದಲೇ ರಕ್ಷಣೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ ಇದಾಗಿದೆ. ಕೆನಡಾದವರು ಕರೆ ಮಾಡಿ ನಮ್ಗೂ ರಕ್ಷಣೆ ಕೊಡಿ ಅಂತಾ ಕೇಳಿಕೊಂಡಿದ್ದಾರೆ. ಆ ಬಗ್ಗೆ ಮಾತುಕತೆ ನಡೆಯುತ್ತಿದೆ.
- ಡೋನಾಲ್ಡ್ ಟ್ರಂಪ್, ಅಮೆರಿಕಾ ಅಧ್ಯಕ್ಷ
ಭೂಮಿ, ಸಮುದ್ರ, ಬಾಹ್ಯಾಕಾಶ, ಯಾವ ದಾಳಿಯೂ ಸಾಧ್ಯವಿಲ್ಲ!
ಸ್ಯಾಟ್‌ಲೈಟ್ ಮೂಲಕವೇ ಮಿಸೈಲ್ ಪತ್ತೆ ಮಾಡ್ತಾನಾ ಈ ಕಟ್ಟಪ್ಪ?
ಇಸ್ರೇಲ್ ಬಳಿ ಇರೋ ಐರನ್ ಡೋಮ್ ಇರ್ಲಿ... ರಷ್ಯಾ, ಭಾರತದ ಬಳಿ ಇರೋ ಎಸ್-400 ಇರ್ಲಿ. ಇವ್ರುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಅಂದ್ರೆ ಮೊದಲು ಹಾರಿ ಬರ್ತಾ ಇರೋ ಮಿಸೈಲ್‌ಗಳನ್ನ, ಕ್ಷಿಪಣಿಗಳನ್ನ, ಡ್ರೋನ್‌ಗಳನ್ನ, ಫೈಟರ್ ಜೆಟ್‌ಗಳನ್ನ ಮೊದಲು ರಾಡರ್ ಪತ್ತೆ ಮಾಡುತ್ತೆ. ಅದಕ್ಕೆ ನಿರ್ದಿಷ್ಟ ದೂರ ಅನ್ನೋದು ಇರುತ್ತೆ. ಅಂದ್ರೆ, 500 ಕಿಲೋ ಮೀಟರ್, 600 ಕಿಲೋ ಮೀಟರ್ ರೇಂಜ್‌ಗಳು ಇರ್ತಾವೆ. ಅಲ್ಲಿಯೇ ಗೊತ್ತು ಮಾಡ್ಕೊಂಡ್ ಆ ಸಂದೇಶವನ್ನ ಏರ್ ಡಿಫೆಂಡರ್‌ಗೆ ಪಾಸ್ ಮಾಡುತ್ತೆ. ಎಕ್ಸಾಂಪಲ್ ಆಗಿ ಹೇಳ್ಬೇಕು ಅಂದ್ರೆ, ಪಾಕಿಸ್ತಾನದಿಂದ ಹಾರಿ ಬರ್ತಾ ಇದ್ದ ಕ್ಷಿಪಣಿಯನ್ನ ರಾಡರ್ ಗೊತ್ತು ಮಾಡ್ಕೊಂಡ್ ಎಸ್-400ಗೆ ಕಳುಹಿಸುತ್ತೆ.
ಎಸ್-400 ಏನ್ ಮಾಡುತ್ತೆ ಅಂದ್ರೆ, ತನ್ನ ಗಡಿಗೆ ಆ ಕ್ಷಿಪಣಿ ಬರ್ತಾ ಇದ್ದಂತೆ ಉಡೀಸ್ ಮಾಡುತ್ತೆ. ಆದ್ರೆ, ಅಮೆರಿಕಾ ತನ್ನ ಭದ್ರತೆಗೆ ನಿರ್ಮಾಣ ಮಾಡ್ತಿರೋ ಗೋಲ್ಡನ್ ಡೋಮ್ ಸಂಪೂರ್ಣ ಅತ್ಯಾಧುನಿಕ. ಬಾಹ್ಯಾಕಾಶದ ಮೂಲಕವೇ ಕ್ಷಿಪಣಿಯನ್ನ ಗೊತ್ತು ಮಾಡ್ಕೊಂಡು ಅದನ್ನ ಏರ್ ಡಿಫೆಂಡ್ ಸಿಸ್ಟಂಗೆ ಪಾಸ್ ಮಾಡುತ್ತೆ. ಹೀಗಾಗಿ ಜಗತ್ತಿನ ಯಾವುದೇ ಮೂಲೆಯಲ್ಲಿ ಅಮೆರಿಕಾ ಮುಖವಾಗಿ ಮಿಸೈಲ್ ಹೊರಡ್ತು ಅಂದ್ರೆ ಆ ಕ್ಷಣವೇ ಗೊತ್ತು ಮಾಡುತ್ತೆ.
ಗೋಲ್ಡನ್ ಡೋಮ್ ಇದು ಸಂಪೂರ್ಣವಾಗಿ ಸ್ಯಾಟ್‌ಲೈಟ್ ಏರ್ ಡಿಫೆನ್ಸ್ ಸಿಸ್ಟಂ ಆಗಿರುತ್ತೆ. ಜಗತ್ತಿನ ಯಾವುದೇ ಮೂಲೆಯಿಂದ ಅಮೆರಿಕಾದತ್ತ ಮುಖ ಮಾಡಿ ಹೊರಟ ಕ್ಷಿಪಣಿಗಳನ್ನ ತಕ್ಷಣವೇ ಪತ್ತೆ ಮಾಡುತ್ತೆ. ಅದನ್ನ ಸ್ಯಾಟಲ್‌ಲೈಟ್ ಮೂಲಕವೂ ಅಟ್ಯಾಕ್ ಮಾಡಿ ಆಕಾಶದಲ್ಲಿಯೇ ನಾಶ ಮಾಡ್ಬಹುದು. ಇಲ್ಲವೇ ಸ್ಯಾಟ್‌ಲೈಟ್‌ಗೆ ಲಿಂಕ್ ಇರೋ ಏರ್‌ಡಿಫೆನ್ಸ್ ಸಿಸ್ಟಂಗೆ ಮೆಸೇಜ್ ಪಾಸ್ ಮಾಡಿ ಆ ಮೂಲಕವೂ ಕ್ಷಿಪಣಿ ನಾಶ ಮಾಡಬಹುದು.
ವಿಶೇಷ ಅಂದ್ರೆ, ಹೈಪರ್ ಸಾನಿಕ್, ಸ್ಯಾಲೆಸ್ಟಿಕ್, ಕ್ರೂಸ್... ಹೀಗೆ ಎಲ್ಲಾ ಮಾದರಿಯ ಕ್ಷಿಪಣಿಯನ್ನೂ ಹೊಡೆದು ಹಾಕೋ ಸಾಮರ್ಥ್ಯ ಇದಕ್ಕೆ ಇರುತ್ತೆ. AI ಶಸ್ತ್ರಾಸ್ತ್ರ ಹೊಂದಿರೋ ಅಸ್ತ್ರಗಳನ್ನು ಹೊಡೆಯೋ ಸಾಮರ್ಥ್ಯ ಇದಕ್ಕೆ ಖಂಡಿತವಾಗಿಯೂ ಇರುತ್ತೆ. ಭೂಮಿ, ಸಮುದ್ರ, ಬಾಹ್ಯಾಕಾಶ ಯಾವುದೇ ಮಾರ್ಗದಲ್ಲಿ ಅಮೆರಿಕಾದ ಮೇಲೆ ಅಟ್ಯಾಕ್ ಮಾಡೋದಕ್ಕೂ ಸಾಧ್ಯವಾಗೋದಿಲ್ಲ. ಹಾಗೇ ಅಣ್ವಸ್ತ್ರ ಕ್ಷಿಪಣಿಗಳನ್ನು ಹೊಡದು ಹಾಗೋ ಸಾಮರ್ಥ್ಯವನ್ನು ಹೊಂದಿದೆ. ಈ ರೀತಿಯಾಗಿ ದೊಡ್ಡಣ್ಣನಿಗೆ 360 ಡಿಗ್ರಿ ಸುತ್ತವೂ ಕಟ್ಟಪ್ಪನಾಗಿ ಇದು ಕಾರ್ಯನಿರ್ವಹಿಸುತ್ತೆ.
ಇದನ್ನೂ ಓದಿ: ಈ ಸುಂದರ ಯುವತಿಯ ಹೆಸರು ಕೇಳಿದ್ರೆ ಸಾಕು.. ಪಾಕ್ ಥರ-ಥರ ನಡುಗುತ್ತೆ, ಸೇನೆಯೂ ನಿದ್ದೆಯಿಂದ ಬೆಚ್ಚಿಬೀಳುತ್ತೆ..!
ಸದ್ಯ ಜಗತ್ತಿನಲ್ಲಿರೋ ಏರ್ ಡಿಫೆನ್ಸ್ ಸಿಸ್ಟಂಗಳು ಏನಿದ್ದಾವೆ ಅವು ಹಂಡ್ರೆಡ್ ಪರ್ಸೆಟ್ ಪಕ್ಕಾ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ, ಅವುಗಳಿಗೆ ಹೈಪರ್ ಸಾನಿಕ್ ಅಂತಾ ಕ್ಷಿಪಣಿಗಳನ್ನ ಹೊಡೆದು ಹಾಕೋದು ಖಂಡಿತವಾಗಿಯೂ ಸವಾಲು. ಇನ್ನು ದಾಳಿ ಮಾಡೋ ರಾಷ್ಟ್ರಗಳು ಮೊದಲು ಟಾರ್ಗೆಟ್ ಮಾಡೋದು ರಾಡರ್‌ಗಳನ್ನ. ಅದು ಧ್ವಂಸವಾಯ್ತು ಅಂದ್ರೆ ಏರ್ ಡಿಫೆನ್ಸ್ ಸಿಸ್ಟಂಗೆ ಮೆಸೇಜ್ ಪಾಸ್ ಆಗೋದಿಲ್ಲ. ಹಾಗೇ ಮಾಡಿ ದಾಳಿ ಮಾಡ್ತಾವೆ. ಪಾಕಿಸ್ತಾನದ ಏರ್ ಬೇಸ್ ಮೇಲೆ ಭಾರತ ದಾಳಿ ಮಾಡಿದ್ದು ಅದೇ ತಂತ್ರದಲ್ಲಿ. ಮೊದಲು ರಾಡರ್ ನಾಶ ಮಾಡಿ ಆಮೇಲೆ ಕ್ಷಿಪಣಿ ಹಾರ್ಸಿ ದಾಳಿ ಮಾಡಿದೆ. ಆದ್ರೆ, ಗೋಲ್ಡನ್ ಡೋಮ್‌ನಲ್ಲಿ ಸ್ಯಾಟ್‌ಲೈಟೇ ರಾಡಾರ್ ರೀತಿಯಲ್ಲಿ ವರ್ಕ್ ಮಾಡುತ್ತೆ. ಹೀಗಾಗಿ ದಾಳಿ ಸುಲಭ ಇರೋದಿಲ್ಲ.
ಗೋಲ್ಡನ್ ಡೋಮ್ ವೆಚ್ಚ ಜಗತ್ತನ್ನೇ ಬೆಚ್ಚಿ ಬೀಳಿಸುತ್ತೆ
2029ರ ವೇಳೆಗೆ ಅಮೆರಿಕಾದ ಬತ್ತಳಿಕೆ ಸೇರೋದು ಪಕ್ಕಾ
ಯುದ್ಧಾಸ್ತ್ರದಲ್ಲಿ ಯಾವತ್ತಿಗೂ ಅಮೆರಿಕಾ ಎತ್ತಿದ ಕೈ. ಅದರ ಬತ್ತಳಿಕೆಯಲ್ಲಿ ಊಹಿಸಲು ಸಾಧ್ಯವಿಲ್ಲದ ಮಿಸೈಲ್‌ಗಳಿವೆ. ಫೈಟರ್ ಜೆಟ್‌ಗಳಿವೆ, ಯುದ್ಧ ಟ್ಯಾಂಕರ್‌ಗಳಿವೆ. ಹೀಗಾಗಿಯೇ ಅಮೆರಿಕಾ ಸೇನೆ ವಿಶ್ವದ ನಂಬರ್ 1 ಸೇನೆ ಅನ್ನೋ ಹೆಸರು ಪಡೆದುಕೊಂಡಿದೆ. ಇದೀಗ ತನ್ನ ರಕ್ಷಣಾ ಇಲಾಖೆಗೆ ಇನ್ನೊಂದು ಊಹಿಸಲು ಸಾಧ್ಯವಿಲ್ಲದ ಬ್ರಹ್ಮಾಸ್ತ್ರವನ್ನ ಸೇರ್ಪಡೆ ಮಾಡಿಕೊಳ್ತಾ ಇದೆ. ಅದರ ಹೆಸ್ರು ಗೋಲ್ಡನ್ ಡೋಮ್. ಈ ಅಸ್ತ್ರಕ್ಕೆ ಸದ್ಯ ಡೊನಾಲ್ಡ್ ಟ್ರಂಪ್ ಚಾಲನೆ ನೀಡಿದ್ದಾರೆ. ಸುಮಾರು 175 ಬಿಲಿಯನ್ ಡಾಲರ್ ವೆಚ್ಚ ಇದಕ್ಕೆ ತಗುಲುತ್ತೆ ಅನ್ನೋದನ್ನ ಹೇಳ್ಕೊಡಿದ್ದಾರೆ. ಹಾಗೇ ಈಗಾಗಲೇ 25 ಬಿಲಿಯನ್ ಡಾಲರ್ ಹಣವನ್ನು ಮಂಜೂರು ಮಾಡಿದ್ದಾರೆ. ಇನ್ನು ಕೆಲವು ತಜ್ಞರು ಕೇವಲ 175 ಬಿಲಿಯನ್ ಡಾಲರ್‌ನಲ್ಲಿ ನಿರ್ಮಾಣ ಮಾಡೋದಕ್ಕೆ ಸಾಧ್ಯವಿಲ್ಲ. ಅದರ ಸಂಪೂರ್ಣ ವೆಚ್ಚ ಕನಿಷ್ಟ ಅಂದ್ರೂ 500 ಬಿಲಿಯನ್ ಡಾಲರ್ ದಾಟಿ ಹೋಗುತ್ತೆ ಅಂತಾ ಹೇಳ್ತಿದ್ದಾರೆ.
ಈಗಾಗಲೇ ಅಮೆರಿಕಾ ಗೋಲ್ಡನ್ ಡೋಮ್ ತಯಾರಿಗೆ ಸಿದ್ಧತೆ ಮಾಡ್ಕೊಂಡಿದೆ. ಈ ವ್ಯವಸ್ಥೆಯ ಪ್ರಮುಖ ಭಾಗಗಳನ್ನು ಅಭಿವೃದ್ಧಿಪಡಿಸುವ ಒಪ್ಪಂದವನ್ನು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್‌ಗೆ ನೀಡಲಾಗಿದೆ. 2029ರ ವೇಳೆಗೆ ಇದು ರೆಡಿಯಾಗುತ್ತೆ ಅಂತಾ ಹೇಳಲಾಗ್ತಿದೆ. ಆದ್ರೆ, ಅಮೆರಿಕಾ ಯಾಕೆ ಇಷ್ಟೊಂದ್ ದುಬಾರಿ ವೆಚ್ಚದ ರಕ್ಷಣಾ ಅಸ್ತ್ರಕ್ಕೆ ಮೊರೆ ಹೋಯ್ತು ಅಂತಾ ನೋಡ್ತಾ ಹೋದ್ರೆ ಅದ್ಕೆ ಇರೋ ವೈರಿ ರಾಷ್ಟ್ರಗಳು. ಆ ರಾಷ್ಟ್ರಗಳ ಬಳಿ ಇರೋ ಮಾರಕ ಕ್ಷಿಪಣಿಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ